ಅಂಡಾಣು ಅಂಡಸಂಯೋಗಜ ಜೀವಿಗಳಲ್ಲಿ ಹೆಣ್ಣು ಸಂತಾನೋತ್ಪತ್ತಿ ಕೋಶವಾಗಿರುತ್ತದೆ (ಜಂಪತಿ). ಸಾಮಾನ್ಯವಾಗಿ ಅಂಡಾಣುವು ಸಕ್ರಿಯ ಚಲನೆ ಮಾಡುವುದಕ್ಕೆ ಸಮರ್ಥವಾಗಿರುವುದಿಲ್ಲ, ಮತ್ತು ಚಲಿಸಬಲ್ಲ ವೀರ್ಯಾಣುಗಳಿಗಿಂತ ಹೆಚ್ಚು ದೊಡ್ಡದಾಗಿರುತ್ತದೆ (ಬರಿಗಣ್ಣಿಗೆ ಕಾಣುತ್ತದೆ). ಅಂಡಾಣು ಮತ್ತು ವೀರ್ಯಾಣುಗಳು ಒಂದುಗೂಡಿದಾಗ ಒಂದು ಜೋಡಿ ವರ್ಣತಂತುವುಳ್ಳ ಕೋಶವು (ಯುಗ್ಮಜ) ರೂಪಗೊಳ್ಳುತ್ತದೆ. ಇದು ಕ್ಷಿಪ್ರವಾಗಿ ಹೊಸ ಜೀವಿಯಾಗಿ ಬೆಳೆಯುತ್ತದೆ.

ಮಾನವ ಅಂಡಾಣು

ಎಲ್ಲ ಸಸ್ತನಿಗಳಲ್ಲಿ, ಅಂಡಾಣುವು ಹೆಣ್ಣಿನ ದೇಹದೊಳಗೆ ಫಲೀಕರಣಗೊಳ್ಳುತ್ತದೆ.

ಮಾನವ ಅಂಡಾಣುಗಳು ಅಂಡಾಶಯಗಳ ವಸ್ತುವಿನಲ್ಲಿ ಅಡಕಗೊಂಡಿರುವ ಮೂಲಭೂತ ಪ್ರಜನನ ಕೋಶಗಳಿಂದ ಬೆಳೆಯುತ್ತವೆ. ಅವುಗಳಲ್ಲಿ ಪ್ರತಿಯೊಂದು ಮತ್ತೆಮತ್ತೆ ವಿಭಜನೆಯಾಗಿ ಗರ್ಭಾಶಯ ಗ್ರಂಥಿಗಳ ಸ್ರಾವವನ್ನು ಉತ್ಪತ್ತಿ ಮಾಡುತ್ತವೆ, ಮತ್ತು ಅಂತಿಮವಾಗಿ ಬ್ಲಾಸ್ಟೊಸಿಸ್ಟ್ ಆಗಿ ರೂಪಗೊಳ್ಳುತ್ತವೆ.[]

ಉಲ್ಲೇಖಗಳು

ಬದಲಾಯಿಸಿ
  1. Regan, Carmen L. (2001). "Pregnancy". In Worell, Judith (ed.). Encyclopedia of Women and Gender: Sex Similarities and Differences and the Impact of Society on Gender, Volume 1. Academic Press. p. 859. ISBN 9780122272455. Retrieved 2013-11-03.


"https://kn.wikipedia.org/w/index.php?title=ಅಂಡಾಣು&oldid=945285" ಇಂದ ಪಡೆಯಲ್ಪಟ್ಟಿದೆ
  NODES