ಖೀಚು ಅಥವಾ ಖೀಚಿಯು ಎಂದರೆ ಹಪ್ಪಳವನ್ನು ತಯಾರಿಸಲು ಬಳಸಲಾಗುವ ಹಿಟ್ಟು. ಆದರೆ, ಇದರ ರುಚಿಯ ಕಾರಣ ಇದನ್ನು ಲಘು ಆಹಾರ ಅಥವಾ ಪಕ್ಕಖಾದ್ಯವಾಗಿಯೂ ಸೇವಿಸಲಾಗುತ್ತದೆ. ಇದನ್ನು ಅಕ್ಕಿ ಹಿಟ್ಟಿನಿಂದ ತಯಾರಿಸಲಾಗುತ್ತದೆ. ಆದರೆ, ಕೆಲವೊಮ್ಮೆ ಇತರ ಹಿಟ್ಟುಗಳನ್ನು ಬಳಸಲಾಗುತ್ತದೆ. ಹಿಟ್ಟನ್ನು ನೀರಿನಲ್ಲಿ ಗಂಜಿಯಂತೆ ಬೇಯಿಸಿ, ಜೀರಿಗೆ ಬೀಜಗಳು ಮತ್ತು ಪಾಪಡ್ ಖಾರ್ (ಸೋಡಿಯಂ ಕಾರ್ಬೊನೇಟ್ ಮತ್ತು ಸೋಡಿಯಂ ಬೈ ಕಾರ್ಬೋನೇಟ್‍ಗಳನ್ನು ಪ್ರಧಾನ ಘಟಕಾಂಶಗಳಾಗಿ ಹೊಂದಿರುವ ಕ್ಷಾರೀಯ ಲವಣ)[] ಎಂದು ಕರೆಯಲ್ಪಡುವ ಕ್ಷಾರೀಯ ಲವಣವನ್ನು ಸೇರಿಸಿ, ನಂತರ ಆ ಮುದ್ದೆಯನ್ನು ಆವಿಯಲ್ಲಿ ಬೇಯಿಸಿ ಈ ಲಘು ಆಹಾರವನ್ನು ತಯಾರಿಸಲಾಗುತ್ತದೆ. ಇದನ್ನು ಹಲವುವೇಳೆ ಎಣ್ಣೆ ಮತ್ತು ಖಾರದ ಪುಡಿಯೊಂದಿಗೆ ಬಡಿಸಲಾಗುತ್ತದೆ.[] ಖೀಚಿಯು ಅಥವಾ ಖೀಚು ಹೆಸರು ಹಿಟ್ಟಿನ ಬಗ್ಗಿಸಬಲ್ಲ ಗುಣದಿಂದ ವ್ಯುತ್ಪನ್ನವಾಗಿದೆ.[] (ಭಾರತೀಯ ಭಾಷೆಗಳಲ್ಲಿ ಖ್ಞೀಚ್ ಎಂದರೆ ಎಳೆಯುವುದು.)

ಖೀಚು

ಈ ಹಿಟ್ಟಿನಿಂದ ತಯಾರಿಸಲಾಗುವ ಹಪ್ಪಳವನ್ನು ಖೀಚಿಯಾ ಪಾಪಡ್ ಎಂದು ಕರೆಯಲಾಗುತ್ತದೆ. ಖೀಚುವನ್ನು ಸಾಂಪ್ರದಾಯಿಕವಾಗಿ ಮಳೆಗಾಲದ ಋತುವಿನಲ್ಲಿ ತಿನ್ನಲಾಗುತ್ತದೆ.

ಉಲ್ಲೇಖಗಳು

ಬದಲಾಯಿಸಿ
  1. "Chemical composition of Papad Khar". Archived from the original on 2020-10-30. Retrieved 2020-08-10.
  2. Rice khichu recipe on taraladalal.com
  3. Meaning of khichiyu from grosse.is-a-geek.com
"https://kn.wikipedia.org/w/index.php?title=ಖೀಚು&oldid=1054732" ಇಂದ ಪಡೆಯಲ್ಪಟ್ಟಿದೆ
  NODES
languages 1
os 2