ಖೇರಿಗರ್ (ಗೋವಿನ ತಳಿ)

(ಖೇರಿಗರ್ ಇಂದ ಪುನರ್ನಿರ್ದೇಶಿತ)

ಖೇರಿಗರ್ ಮಧ್ಯಮಗಾತ್ರ ಅಥವಾ ಪುಟ್ಟಗಾತ್ರ ಗೋವು. ಆಕಳಿನ ಮೂಲ ಉತ್ತರಪ್ರದೇಶದ ಲಕೀಂಪುರ ಜಿಲ್ಲೆಯ ಖೇರಿ. ಖೇರಿ ಮೂಲ ಎಂದಿದ್ದರೂ, ಭಾರತ-ಟಿಬೇಟ್ ಗಡಿಯಗುಂಟ ಇರುವ ಬೆಟ್ಟಪ್ರದೇಶಗಳವರೆಗೂ ಇವುಗಳನ್ನು ಕಾಣಬಹುದು. ಕಡಿಮೆ ಆಹಾರ ಸೇವನೆ ಹಾಗೂ ಹೆಚ್ಚಿನ ಕೆಲಸದ ಸಾಮರ್ಥ್ಯ ಹೊಂದಿವೆ.[][] ಅದಕ್ಕಾಗಿಯೇ ಉತ್ತರ ಪ್ರದೇಶದ ಬುಡಕಟ್ಟು ಪ್ರದೇಶಗಳು ಸೇರಿದಂತೆ ಸಾರಿಗೆ ವ್ಯವಸ್ಥೆಗಳಿಲ್ಲದಿದ್ದಲ್ಲಿ ಮುಖ್ಯ ಸಾರಿಗೆ ಖೇರಿಗರ್. ಖೇರಿಗರ್ ಗಳದ್ದು ಶುದ್ಧ ಬಿಳಿಯ ಬಣ್ಣ, ಮುಖ, ಬಾಲದ ಕುಚ್ಚು ಮಾತ್ರ ಕಡುಗಪ್ಪು;. ಸ್ವಲ್ಪ ಮಾಳ್ವಿ ತಳಿಯನ್ನು ಹೋಲುತ್ತವಾದರೂ ಒಂದೆರಡು ಬಾರಿ ನೋಡಿದರೆ ಗುರುತಿಸಬಹುದಾದಷ್ಟು ವ್ಯತ್ಯಾಸಗಳಿವೆ. ಕರಾವು ಸ್ವಲ್ಪ ಕಡಿಮೆ; ದಿನಕ್ಕೆ ೩-೪ ಲೀಟರುಗಳು. ಖೇರಿಗರ್ ತಳಿಯ ಹೋರಿಗಳು ೪ ವರ್ಷಕ್ಕೇ ದುಡಿಯಲು ಸಮರ್ಥವಾಗಿ ಬಿಡುತ್ತವೆ. ಒಂದು ಜೊತೆ ಎತ್ತುಗಳು ಸಲೀಸಾಗಿ ಒಂದುವರೆ ಟನ್‌ಗಳಷ್ಟು ಭಾರವನ್ನು ೩೦-೩೫ ಮೈಲಿಗಳಷ್ಟು ದೂರವನ್ನು ಘಂಟೆಗೆ ೪ ಮೈಲಿಯಂತೆ ಎಳೆಯಬಲ್ಲವು.

ಖೇರಿಗರ್
ತಳಿಯ ಹೆಸರುಖೇರಿಗರ್
ಮೂಲಉತ್ತರ ಪ್ರದೇಶ ರಾಜ್ಯದ ಲಕೀಂಪುರ ಜಿಲ್ಲೆಯ ಖೇರಿ
ವಿಭಾಗಕೆಲಸಗಾರ ತಳಿ
ಬಣ್ಣಬಿಳಿ
ಮುಖನೀಳ ಮುಖ, ಕಪ್ಪು ಕಣ್ಣು, ಕಪ್ಪು ಮೂತಿ
ಕೊಂಬುಸಣ್ಣ,
ಕಾಲುಗಳುಶಕ್ತಿಯುತ
ಕಿವಿಕೆಳಬಾಗಿದ ಕಿವಿ

ಚಿತ್ರಗಳು

ಬದಲಾಯಿಸಿ

ಆಧಾರ/ಆಕರ

ಬದಲಾಯಿಸಿ

ಉಲ್ಲೇಖಗಳು

ಬದಲಾಯಿಸಿ
  1. "Kherigarh cattle" (PDF). Uttar Pradesh State Biodiversity Board. Archived from the original (PDF) on 2015-11-17. Retrieved 2017-05-12.
  2. Pandey, AK; Sharma, R; Singh, Y; Prakash, BB; Ahlawat, SP. "Genetic diversity studies of Kherigarh cattle based on microsatellite markers". J Genet. 85: 117–22. doi:10.1007/bf02729017. PMID 17072080.
  NODES
languages 1
os 1