ಕೆರೆ-ಕಟ್ಟೆ, ನದಿ, ಅಣೆಕಟ್ಟೆ, ಸರೋವರ ಮುಂತಾದ ಕಡೆ ಶೇಖರಣೆಯಾಗಿರುವ ನೀರು ರಭಸವಾಗಿ ಉಕ್ಕಿ ಹರಿದು ವಿಶಾಲವಾದ ಭೂ ಪ್ರದೇಶವನ್ನು ಮುಳುಗಿಸುವುದೇ ಪ್ರವಾಹ ಅಥವಾ ಜಲಪ್ರವಾಹ. []"ಹರಿಯುವ ನೀರು" ಎಂಬ ಅರ್ಥದಲ್ಲಿ ಈ ಪದ ಅಲೆಗಳಗಳ ಒಳಹರಿವಿಗೂ ಅನ್ವಯಿಸಬಹುದು. ನದಿ, ಸರೊವರಗಳಂಥ ನೀರಿನ ಸಂಗ್ರಹಾಗಾರಗಳಲ್ಲಿ ಸಂಗ್ರಹವಾಗಿರುವ ನೀರಿನ ಪ್ರಮಾಣ ಜಾಸ್ತಿಯಾಗಿ ಅದು ಉಕ್ಕಿ ಹರಿದಾಗ ಪ್ರವಾಹಗಳುಂಟಾಗಬಹುದು. ಹೀಗೆ ಹರಿಯುವ ನೀರು ಅಣೆಕಟ್ಟೆಗಳನ್ನು ಒಡೆದುಹಾಕಿ ರಭಸವಾಗಿ ನುಗ್ಗುತ್ತದೆ. ಈ ಸಂದರ್ಭದಲ್ಲಿ ಸಾಮಾನ್ಯ ಮಟ್ಟಕ್ಕಿಂತ ಸ್ವಲ್ಪ ಹೆಚ್ಚಿನ ಪ್ರಮಾಣದಲ್ಲಿ ನೀರು ಹೊರನುಗ್ಗುತ್ತದೆ.[]

1634ರ 11 ಮತ್ತು 12ರ ರಾತ್ರಿಯಲ್ಲಿ ಜರ್ಮನ್ ಮತ್ತು ಡೆನ್ಮಾರ್ಕ್‌ನ ಉತ್ತರ ಸಮುದ್ರ ಕರಾವಳಿಯನ್ನು ಬಡಿದ ಬರ್ಕಾರ್ಡಿ ಪ್ರವಾಹದ ಸಮಕಾಲೀನ ಚಿತ್ರ.

ಇತಿವೃತ್ತ

ಬದಲಾಯಿಸಿ
 
151009-D-HQ914-031-2 (22135500006)
  • ಹಿಮಪಾತ ಮತ್ತು ಹಿಮಗಡ್ಡೆಗಳ ಕರಗುವಿಕೆಯಂತಹ ಋತುಮಾನ ಬದಲಾವಣೆಯಿಂದಾಗಿ ಸರೋವರ ಅಥವಾ ಯಾವುದೇ ಸಂಗ್ರಹಾಗಾರಗಳಲ್ಲಿ ನೀರಿನ ಪ್ರಮಾಣದಲ್ಲಿ ವ್ಯತ್ಯಾಸವುಂಟಾಗುತ್ತದೆ. ಹೀಗೆ ಸಂಗ್ರಹಗೊಂಡ ನೀರು ಹಳ್ಳಿ, ನಗರ, ಹೊಲ-ಗದ್ದೆ ಅಥವಾ ಮನುಷ್ಯ ವಾಸಿಸುವ ಹಾಗೂ ಅವನು ತನ್ನ ಅನುಕೂಲಕ್ಕೆ ಬಳಸುವ ಪ್ರದೇಶಗಳನ್ನು ಮುಳುಗಿಸದ ಹೊರತು ಉಕ್ಕಿ ಹರಿದರೂ ಅದೇನೂ ಅಪಾಯಕಾರಿಯಲ್ಲ. ನದಿಗಳಿಂದಾಗಿಯೂ ಪ್ರವಾಹ ಸಂಭವಿಸುತ್ತದೆ. ನದಿಗಳ ಹರಿವಿನ ರಭಸ ಹೆಚ್ಚಾದಾಗ ನೀರು ನದಿಪಥದ ಹೊರಗೂ ನುಗ್ಗಲು ಪ್ರಯತ್ನಿಸುತ್ತದೆ. *ನಿರ್ದಿಷ್ಟವಾಗಿ ನದಿಗಳ ಅಂಕು-ಡೊಂಕಾದ ಮಾರ್ಗಗಳಲ್ಲಿ ನದಿಪಥದಿಂದ ಹೊರನುಗ್ಗುವ ನೀರು, ನದಿಯುದ್ದಕ್ಕೂ ಇರುವ ಮನೆ-ಮಠ ಅಷ್ಟೇ ಏಕೆ ಮನುಷ್ಯ ವ್ಯಾಪಾರದ ಸಕಲಕ್ಕೂ ಹಾನಿ ಉಂಟು ಮಾಡುತ್ತದೆ, ಕೆಲವೊಮ್ಮೆ ಸರ್ವನಾಶವನ್ನೂ ಉಂಟುಮಾಡುತ್ತದೆ.ನದಿ ಅಥವಾ ಇನ್ನಾವುದೇ ನೀರು ಸಂಗ್ರಹಾರಗಾಗಳಿಂದ ಹೊರನುಗ್ಗುವ ನೀರು ಎಂದರೆ ಪ್ರವಾಹ ಅಕ್ಷರಷಹ ಭೌತಿಕವಾದ ಚರಾಚರಗಳನ್ನು ಅದಲು-ಬದಲು ಮಾಡುತ್ತದೆ.
  • ಪುರಾತನ ಕಾಲದಿಂದಲೂ ಜನರು ತಮ್ಮ ಜೀವನೋವೋಪಾಯ ಮತ್ತು ಹಣಗಳಿಕೆಯ ಮಾರ್ಗ ಕಂಡುಕೊಳ್ಳಲು ನೀರಿನೊಡನೆಯೇ ಬದುಕಿದ್ದಾರೆ; ನೀರಿನಿಂದಲೇ ತಮ್ಮ ಜೀವನವನ್ನು ರೂಪಿಸಿಕೊಂಡಿದ್ದಾರೆ, ಇಷ್ಟೇ ಅಲ್ಲದೆ ನೀರಿನ ಸಮೀಪ ವಾಸಿಸುವುದರೊಂದಿಗೆ ಸರಳ ಮತ್ತು ಅಗ್ಗದ ಸಂಚಾರ ಹಾಗೂ ವ್ಯಾಪಾರ-ವಹಿವಾಟಿನ ಲಾಭ ಗಳಿಸಿದ್ದಾರೆ.
  • ಮುರುಕಳಿಸುವ ಪ್ರವಾಹ ಮತ್ತು ಅದು ತಂದೊಡ್ಡುವ ಅಪಾರ ಹಾನಿಗಿಂತಲೂ ನೀರಿನ ಬಳಿಯೇ ವಾಸಿಸುವುದು ದೊಡ್ಡದು ಎಂಬ ಗ್ರಹೀತ ಮೌಲ್ಯಕ್ಕೆ, ಪ್ರವಾಹದಿಂದ ಹಾನಿಗೊಳಗಾಗುವ ಪ್ರದೇಶಗಳಲ್ಲಿ ಮನುಷ್ಯ ಇನ್ನೂ ವಾಸಿಸುವುದನ್ನು ಮುಂದುವರಿಸಿಕೊಂಡೇ ಬಂದಿರುವುದೇ ಸಾಕ್ಷಿ. "ಫ್ಲಡ್‌" (ಪ್ರವಾಹ) ಎನ್ನುವ ಪದ ಹಳೆ ಇಂಗ್ಲಿಷ್‌ಫ್ಲೋಡ್‌ (flod) ಎಂಬ ಪದದಿಂದ ವ್ಯುತ್ಪತ್ತಿ ಹೊಂದಿದೆ.
  • ಇದು ಜರ್ಮಾನಿಕ್‌ ಭಾಷೆಗಳಲ್ಲಿ ಸಾಮಾನ್ಯ ಪದ.(ಫ್ಲೋ (flow),ಫ್ಲೋಟ್ ‌(float)ನಲ್ಲಿ ಕಾಣುವ ಹಾಗೆ ಇದೇ ಮೂಲದಿಂದ ಬಂದಿರುವ ಜರ್ಮನ್‌ನ ಫ್ಲಟ್‌ (Flut) ಡಚ್‌ನ ವ್ಲೋಡ್‌ (vloed) ಪದಗಳ ಅರ್ಥವನ್ನು ಹೋಲಿಸಿ ನೋಡಿ.)ದಪ್ಪಕ್ಷರದಲ್ಲಿ ಬರೆಯುವ "ದಿ ಫ್ಲಡ್‌" ಎನ್ನುವ ನಿರ್ದಿಷ್ಟ ಪರಿಭಾಷೆ, ಸಾಮಾನ್ಯವಾಗಿ ಬೈಬಲ್‌ಜೆನಿಸಿಸ್‌ ಸೃಷ್ಟಿಪರ್ವದಲ್ಲಿ ವರ್ಣಿಸಿರುವಂತೆ ವಿಶ್ವದ ಜಲಪ್ರಳಯ ವನ್ನು ಸೂಚಿಸುತ್ತದೆ ಹಾಗೂ ಇದನ್ನು ಜಲಪ್ರಳಯವೆಂದು ಪೌರಾಣಿಕ ಕಥೆಯೊಂದರಲ್ಲಿ ನಿರೂಪಿಸಲಾಗಿದೆ.

ಪ್ರವಾಹದ ಪ್ರಮುಖ ವಿಧಗಳು

ಬದಲಾಯಿಸಿ
 
ಬಿರುಸಾದ ಮಾನ್ಸೂನ್ ಮಳೆ ಮತ್ತು ದರ್ವಿನ್‌ನಲ್ಲಿ ನೀರಿನ ಮಟ್ಟ ಏರಿಕೆಯಾದ ಕಾರಣದಿಂದ ಕಾಲುವೆಯಲ್ಲಿ ಉಂಟಾದ ಪ್ರವಾಹ. ಉತ್ತರ ಭೂಭಾಗ, ಆಸ್ಟ್ರೇಲಿಯ
 
2005ರ ಅಕ್ಟೋಬರ್‌ನಲ್ಲಿ ಯುನೈಟೆಡ್‌ ಸ್ಟೇಟ್ಸ್‌‌ನ ಫ್ಲೋರಿಡಾದ ಕೀ ವೆಸ್ಟ್‌ನಲ್ಲಿ ಹರಿಕೇನ್‌ ವಿಲ್ಮಾದ ಪ್ರಚಂಡ ಅಲೆಗಳಿಂದ ಉಂಟಾದ ಪ್ರವಾಹ.
 
ಭಾರಿ ಚಂಡಮಾರುತದಿಂದ ಉಂಟಾದ ಪ್ರವಾಹ.

ನದಿ ಪ್ರವಾಹಗಳು

ಬದಲಾಯಿಸಿ
  • ನಿಧಾನ ಪ್ರವಾಹಗಳು  : ನಿರಂತರ ಮಳೆ ಅಥವಾ ಕ್ಷಿಪ್ರವಾಗಿ ಹಿಮ ಕರಗುವಿಕೆಯಿಂದ ಹರಿಯುವ ನೀರು ನದಿ ಕಾಲುವೆಯ ಸಂಗ್ರಹ ಸಾಮರ್ಥ್ಯವನ್ನು ಮೀರುತ್ತವೆ. ಇದಕ್ಕೆ ಕಾರಣಗಳೆಂದರೆ, ಮಾನ್ಸೂನ್‍ ಮಾರುತಗಳಿಂದ ಭಾರಿ ಮಳೆ, ಚಂಡ ಮಾರುತ ಗಳು, ವಾಯುಭಾರ ಕುಸಿತ, ಹಿಮಗಡ್ಡೆಯ ಮೇಲೆ ಪರಿಣಾಮ ಬೀರುವ ಹೊರಗಿನ ಗಾಳಿ ಮತ್ತು ಬೆಚ್ಚನೆಯ ಮಳೆ. ಆಶ್ಚರ್ಯಕರವಾಗಿ ಹರಿಯುವ ನೀರಿನ ಅಡಚಣೆಗಳು ಎಂದರೆ ಭೂಕುಸಿತಗಳು, ಹಿಮ ಅಥವಾ ಅಡಚಣೆ ಉಂಟುಮಾಡುವ ನಿಧಾನ ಎದುರು ಪ್ರವಾಹವನ್ನು ಸೃಷ್ಟಿಸುವ ಅವಶೇಷ ಅಥವಾ ಕಸ-ಕಡ್ಡಿಗಳು.
  • ವೇಗದ ಪ್ರವಾಹಗಳು: ಇದು ಒಳಗೊಳ್ಳುವ ವಿಧಾನಗಳೆಂದರೆ, ಸಂವಾಹಕ ಪಾತ (ತೀವ್ರವಾದ ಚಂಡಮಾರುತ) ದಿಂದ ಉಂಟಾಗುವ ಕ್ಷಿಪ್ರ ಪ್ರವಾಹ ಆಥವಾ ಅಣೆಕಟ್ಟು, ಭೂಕುಸಿತ ಅಥವಾ ಹಿಮನದಿಗಳ ಹಿಂದೆ ರೂಪುಗೊಳ್ಳುವ ತಡೆಹಿಡಿಯಲ್ಪಟ್ಟ ಎದುರು ಪ್ರವಾಹದ ನೀರಿನಿಂದ ಉಂಟಾಗುವ ಹಠಾತ್‌ ಬಿಡುಗಡೆ.

ಸಮುದ್ರದ ಭಾರಿ ಅಲೆಗಳಿಂದುಂಟಾಗುವ ಪ್ರವಾಹಗಳು

ಬದಲಾಯಿಸಿ
  • ಸಾಮಾನ್ಯವಾಗಿ ಬಿರುಗಾಳಿ ಅಥವಾ ಚಂಡಮಾರುತದಿಂದ ಏಳುವ ಭಾರಿ ಅಲೆಗಳ ಸಂಯೋಜನೆಯಿಂದ ಇದು ಉಂಟಾಗುತ್ತವೆ.

ಟ್ರಾಪಿಕಲ್‌ ಸೈಕ್ಲೋನ್‌ ಇಲ್ಲವೇ ಎಕ್ಸ್‌ಟ್ರಾ ಟ್ರಾಪಿಕಲ್‌ ಸೈಕ್ಲೋನ್‌ನಿಂದ ಉಂಟಾಗುವ ಚಂಡಮಾರುತದ ಅಲೆಗಳು ಕೂಡ ಇದೇ ವರ್ಗಕ್ಕೆ ಸೇರುತ್ತದೆ.

ಕರಾವಳಿ ಪ್ರವಾಹ

ಬದಲಾಯಿಸಿ

ಪ್ರಳಯಕಾರಿ ಪ್ರವಾಹ

ಬದಲಾಯಿಸಿ
  • ಅನಿರೀಕ್ಷಿತವಾದ ಅಪಾಯಕಾರಿ ಘಟನೆಗಳಿಂದ ಇದು ಸಂಭವಿಸುತ್ತದೆ.
  • (ಉದಾ:- ಅಣೆಕಟ್ಟೆಗಳು ಒಡೆದಾಗ, ಅಥವಾ ಭೂಕಂಪ ಅಥವಾ ಜ್ವಾಲಾಮುಖಿ ಸ್ಪೋಟದಂತಹ ಮತ್ತಾವುದೇ ಅಪಾಯಕಾರಿ ಅವಘಡ ಸಂಭವಿಸಿದಾಗ).

ಕೆಸರಿನ ಪ್ರವಾಹ

ಬದಲಾಯಿಸಿ
  • ಬೆಳೆಯಿರುವ ಭೂಪ್ರದೇಶದ ಮೇಲೆ ಹರಿವ ಪ್ರವಾಹದ ನೀರಿನಿಂದ ಕೆಸರಿನ ಪ್ರವಾಹ ನಿರ್ಮಾಣವಾಗುತ್ತದೆ. ಬೆಳೆ ಪ್ರದೇಶದ ಮೇಲೆ ಪ್ರವಾಹದ ನೀರು ಹರಿದ ಪರಿಣಾಮ ಒಟ್ಟುಗೂಡುವ ಕೆಸರಿನಿಂದ ಕೆಸರಿನ ಪ್ರವಾಹ ರೂಪುಗೊಳ್ಳುತ್ತದೆ.ಈ ಕೆಸರು ನಂತರ ಹರಿಯುವ ನೀರಿನೊಂದಿಗೆ ತೇಲುವ ಕಸಕಡ್ಡಿಯೊಂದಿಗೆ ಇಲ್ಲವೇ ನೀರಿನ ತಳದಲ್ಲಿ ಸಾಗುವ ಮಣ್ಣಿನ ರಾಶಿಯಂತೆ ಕೊಚ್ಚಿಹೋಗುತ್ತದೆ. ಕೆಸರು ತುಂಬಿದ ಪ್ರವಾಹ ಜನರ ಗಮನಕ್ಕೆ ಬರುವುದು ಸಾಮಾನ್ಯವಾಗಿ ಅದು ವಾಸದ ಪ್ರದೇಶಗಳಿಗೆ ಹತ್ತಿರವಾದಾಗ. ಕೆಸರಿನ ಪ್ರವಾಹ ಎಂದರೆ ಅದೊಂದು ರೀತಿ ಬೆಟ್ಟದ ಇಳಿಜಾರಿನ ಪ್ರಕ್ರಿಯೆಯಿದ್ದ ಹಾಗೆ ಅಲ್ಲದೆ ಇದು ಭಾರಿ ಚಲನೆಯಲ್ಲಿ ಹರಿಯುವ ಮಣ್ಣಿನ ಹರಿವು ಎಂಬ ತಪ್ಪು ಗ್ರಹಿಕೆಯನ್ನು ತೊಡೆದು ಹಾಕಬೇಕು.
  • ಅಡಿಪಾಯ ಭದ್ರವಾಗಿರುವ ಮೇಲ್ಮೈನಾದ್ಯಂತ ನೀರು ಅಪಾರ ಪ್ರಮಾಣದಲ್ಲಿ ಸಂಗ್ರಹಗೊಂಡಾಗ (ಉದಾ,ಮಳೆಯಿಂದ) ಮತ್ತು ಕ್ಷಿಪ್ರವಾಗಿ ಹರಡಲು ಸಾಧ್ಯವಿಲ್ಲದಾದಾಗ (ಶಾಂತ ನೆಲೆ ಅಥವಾ ನಿಧಾನವಾಗಿ ಇಂಗುವ) ಪ್ರವಾಹ ಉಂಟಾಗಬಹುದು.
  • ಚಂಡಮಾರುತಗಳ ಸರಣಿ ಅದೇ ಪ್ರದೇಶದಲ್ಲಿ ಸಾಗಿ ಹೋದಾಗ
  • ಅಣೆಕಟ್ಟೆ ನಿರ್ಮಾಣಕ ಇಲಿ ಜಾತಿಯ ಬೃಹತ್‌ ಪ್ರಾಣಿ(ಬೀವರ್‌)ಗಳಿಂದ ಉಂಟಾಗುವ ಪ್ರವಾಹ ಕೆಲವು ಸಂದರ್ಭದಲ್ಲಿ ತಗ್ಗು ಪ್ರದೇಶಗಳಲ್ಲಿರುವ ಹಳ್ಳಿ ಅಥವಾ ನಗರಗಳಿಗೆ ಹೆಚ್ಚಿನ ಹಾನಿ ಉಂಟುಮಾಡುತ್ತದೆ.

ದುಷ್ಪರಿಣಾಮಗಳು

ಬದಲಾಯಿಸಿ

ಪ್ರಾಥಮಿಕ ಪರಿಣಾಮಗಳು

ಬದಲಾಯಿಸಿ
  • ಭೌತಿಕ ಹಾನಿ - ಇದು ಸೇತುವೆಗಳು, ಕಾರು, ಕಟ್ಟಡಗಳು,ರಾಡಿ ಒಳಚರಂಡಿ ವ್ಯವಸ್ಥೆ, [ರಸ್ತೆ ಮಾರ್ಗಗಳು, ಕಾಲುವೆ, ಕಾಲುವೆಗಳು-ಹೀಗೆ ಯಾವುದೇ ರೀತಿಯ ಭೌತಿಕ ವಸ್ತುಗಳಿಗೆ ಹಾನಿ ತಂದೊಡ್ಡಬಹುದು.
  • ಸಾವು ನೋವುಗಳು - ಪ್ರವಾಹದ ನೀರು ನುಗ್ಗಿದ ಕಾರಣದಿಂದ ಜನ ಮತ್ತು ಜಾನುವಾರುಗಳು ಸಾಯುತ್ತವೆ. ಅಲ್ಲದೆ ಇದರಿಂದ ಸಾಂಕ್ರಾಮಿಕ ರೋಗಗಳು ಮತ್ತು ಜಲಜನ್ಯ ಖಾಯಿಲೆಗಳೂ ಹರಡಬಹುದು.

ದ್ವಿತೀಯಕ ಪರಿಣಾಮಗಳು

ಬದಲಾಯಿಸಿ
  • ನೀರಿನ ಸರಬರಾಜು ಜಲ ಮಾಲಿನ್ಯ ಶುದ್ಧ ನೀರು ಮಲಿನಗೊಳ್ಳುತ್ತದೆ. ಹೀಗಾಗಿ ಶುದ್ಧವಾದ ಕುಡಿಯುವ ನೀರು ದುರ್ಲಭವಾಗುತ್ತದೆ.
  • ಕಾಯಿಲೆಗಳು - ಅನಾರೋಗ್ಯಕರ ಸ್ಥಿತಿ ಉಂಟಾಗಿ ಜಲಜನ್ಯ ಖಾಯಿಲೆಗಳು|ಜಲಜನ್ಯ ಕಾಯಿಲೆಗಳ ಹರಡುತ್ತವೆ.
  • ಬೆಳೆಗಳು ಮತ್ತು ಅಹಾರ ಸರಬರಾಜು - ಬೆಳೆದ ಬೆಳೆ ಸಂಪೂರ್ಣವಾಗಿ ಹಾಳಾಗುವುದರಿಂದ ಆಹಾರದ ಕೊರತೆ ಉಂಟಾಗುವ ಸಾಧ್ಯತೆ ಇರುತ್ತದೆ. ಪ್ರವಾಹದಿಂದ ಇಷ್ಟೆಲ್ಲಾ ದುಷ್ಪರಿಣಾಮಗಳಿದ್ದರೂ, ನದಿಯ ಸಮೀಪವಿರುವ ತಗ್ಗು ಪ್ರದೇಶಗಳು ಪ್ರವಾಹ ತಂದು ಹರಡುವ ಹೂಳು ಅಥವಾ ಮೆಕ್ಕಲು ಮಣ್ಣನ್ನೇ ಅವಲಂಬಿಸಿರುತ್ತವೆ. ಏಕೆಂದರೆ ಈ ಹೂಳು ಅಲ್ಲಿನ ನೆಲವನ್ನು ಫಲವತ್ತಾಗಿಸುತ್ತದೆ.
  • ಮರಗಳು - ಪ್ರವಾಹದ ಹೊಡೆತಕ್ಕೆ ತಾಳಿಕೊಳ್ಳಲಾಗದ ಕೆಲವು ಸಸ್ಯ ಪ್ರಭೇದಗಳು ನೀರುತುಂಬಿಕೊಂಡಾಗ ಉಸಿರುಗಟ್ಟಿ ಸಾಯುತ್ತವೆ.ಉಲ್ಲೇಖ ದೋಷ: Closing </ref> missing for <ref> tag, ಏರಿ, ಜಲಾಶಯ, ಅಣೆಕಟ್ಟು ಮುಂತಾದ ರಕ್ಷಣಾ ವ್ಯವಸ್ಥೆಗಳ ಮೂಲಕ ನದಿಗಳು ತಮ್ಮ ಕಟ್ಟೆಯೊಡೆದುಕೊಂಡು ನುಗ್ಗದಿರುವಂತೆ ಕ್ರಮ ಕೈಗೊಳ್ಳಲಾಗಿದೆ. ಈ ರೀತಿಯ ಎಲ್ಲ ರಕ್ಷಣಾ ವ್ಯವಸ್ಥೆಗಳು ವಿಫಲವಾದಾಗ, ಮರಳ ಚೀಲಗಳು ಮತ್ತು ಸುಲಭ ಸಾಗಣೆಯ ಊದುವ ಟ್ಯೂಬ್‌ಗಳು ಮುಂತಾದ ತುರ್ತು ಕ್ರಮಗಳನ್ನು ವಿವಿಧ ದೇಶಗಳು ಕೈಗೊಳ್ಳುತ್ತವೆ. ಸಮುದ್ರದ ತಡೆಗೋಡೆಗಳು, ಕಡಲದಂಡೆಗಳ ಆರೈಕೆ ಮತ್ತು ತಡೆ ದ್ವೀಪಗಳ ನಿರ್ಮಾಣ ಮುಂತಾದ ಕ್ರಮಗಳ ಮೂಲಕ ಕರಾವಳಿ ಪ್ರವಾಹವನ್ನು ನಿಯಂತ್ರಿಸಲು ಯುರೋಪ್‌ ಮತ್ತು ಅಮೆರಿಕಗಳ ಕರಾವಳಿ ರಕ್ಷಣಾ ಪಡೆಗಳು ಸಾಕಷ್ಟು ಕ್ರಮ ಕೈಗೊಳ್ಳುತ್ತಲೇ ಬಂದಿವೆ.

ಯುರೋಪ್‌

ಬದಲಾಯಿಸಿ
 
2002ರ ಯುರೋಪಿಯನ್ ಪ್ರವಾಹದಲ್ಲಿ ಜೆಕ್ ಗಣರಾಜ್ಯದ ಬೆರೌಂಕ ನದಿಯು ದಡವನ್ನು ಭೇದಿಸಿಕೊಂಡು ನುಗ್ಗಿತು ಹಾಗೂ ಬೆರೌನ್ ಜಿಲ್ಲೆಯ ಹ್ಲಾಸ್ನ ಟ್ರೆಬಾನ್ ಹಳ್ಳಿಯ ಮನೆಗಳು ಮುಳುಗಿ ಹೋದವು.
  • ಅಪಾರ ನಷ್ಟ ಉಂಟುಮಾಡಿದ್ದ 1910ರ ಪ್ಯಾರಿಸ್‌ ಮಹಾ ಪ್ರವಾಹದ ದುರ್ಘಟನೆ ನೆನಪಿಸಿಕೊಳ್ಳುವುದಾರೆ, ಪ್ರವಾಹದ ಸಂದರ್ಭದಲ್ಲಿ ಸೀನ್‌ ನದಿ ಜನರಲ್ಲಿ ಉಂಟುಮಾಡಿದ್ದ ಉದ್ವಿಗ್ನತೆ ಮತ್ತು ಒತ್ತಡವನ್ನು ಕಡಿಮೆ ಮಾಡಲು ಹಾಗೂ ವಿಶೇಷವಾಗಿ ಸರ್ವೇಸಾಮಾನ್ಯವಾಗಿರುವ ಚಳಿಗಾಲದ ಪ್ರವಾಹವನ್ನು ನಿಯಂತ್ರಿಸಲು ಫ್ರೆಂಚ್‌ ಸರ್ಕಾರ ಲೆಸ್ ಗ್ರಾಂಡ್ಸ್ ಲ್ಯಾಕ್ಸ್‌ ಡಿ ಸೈನೆ ಎಂಬ ಹೆಸರಿನಲ್ಲಿ (ಅಥವಾ ಮಹಾ ಜಲಾಶಯಗಳು) ಜಲಾಶಯಗಳ ಸರಣಿಯನ್ನೇ ನಿರ್ಮಿಸಿತು.[] ಥೇಮ್ಸ್‌ ನದಿಯ ಉದ್ದಕ್ಕೂ ಬೃಹತ್ತಾದ ಯಾಂತ್ರಿಕ ತಡೆಗೋಡೆಯನ್ನು ನಿರ್ಮಿಸುವ ಮೂಲಕ ಲಂಡನ್‌ ನಗರವನ್ನು ಸಂರಕ್ಷಿಸಲಾಗಿದೆ.
  • ನದಿಯಲ್ಲಿ ನೀರಿನ ಪ್ರಮಾಣ ನಿರ್ದಿಷ್ಟ ಹಂತವನ್ನು ತಲುಪಿದೊಡನೆ ಈ ತಡೆಗೋಡೆ ಮೇಲೇರುತ್ತದೆ.(ನೋಡಿ, ಥೇಮ್ಸ್‌ ತಡೆಗೋಡೆ) ವೆನಿಸ್‌ ಕೂಡ ಇದೇ ರೀತಿಯ ವ್ಯವಸ್ಥೆಯನ್ನು ಹೊಂದಿದೆ. ಆದರೆ ದೊಡ್ಡ ಮಟ್ಟದ ಪ್ರವಾಹವನ್ನು ನಿಭಾಯಿಸುವ ಸಾಮರ್ಥ್ಯ ಇದಕ್ಕಿಲ್ಲ. ಸಮುದ್ರ ಮಟ್ಟ ಏರಿದರೆ ಅದನ್ನು ನಿರ್ವಹಿಸುವಲ್ಲಿ ಲಂಡನ್‌ ಮತ್ತು ವೆನಿಸ್‌ಗಳ ಎರಡೂ ರಕ್ಷಣಾ ವ್ಯವಸ್ಥೆಗಳು ಅಸಮರ್ಪಕವಾಗಿವೆ.
  • ಬೃಹತ್ತಾದ ಮತ್ತು ಅತ್ಯಂತ ಸಂಕೀರ್ಣವಾದ ಪ್ರವಾಹ ನಿಯಂತ್ರಣ ವ್ಯವಸ್ಥೆಗಳನ್ನು ನೆದರ್ಲೆಂಡ್ಸ್‌ನಲ್ಲಿ ಕಾಣಬಹುದು. ಇವುಗಳನ್ನು ಅಲ್ಲಿ ಡೆಲ್ಟ ವರ್ಕ್ಸ್ ಎಂದು ಕರೆಯುತ್ತಾರೆ. ಊಸ್ಟರ್‌ಸ್ಕೆಲ್ಡೆ ಅಣೆಕಟ್ಟಿನ ನಿರ್ಮಾಣ ಈ ವ್ಯವಸ್ಥೆಗೆ ಕಿರೀಟಪ್ರಾಯವಾಗಿದೆ. ನೆದರ್ಲೆಂಡ್ಸ್‌ನ ಆಗ್ನೇಯ ಭಾಗದಲ್ಲಿ ಉಂಟಾಗಿದ್ದ 1953ರ ಉತ್ತರ ಸಮುದ್ರದ ಪ್ರವಾಹಕ್ಕೆ ಪ್ರತಿಕ್ರಿಯೆಯಾಗಿ ಈ ನಿರ್ಮಾಣಗಳನ್ನು ಮಾಡಲಾಗಿತ್ತು.
  • ಡಚ್ಚರು ವಿಶ್ವದ ಅತ್ಯಂತ ದೊಡ್ಡ ಅಣೆಕಟ್ಟೆಗಳಲ್ಲೊಂದಾದ ಆಫ್ಸ್‍ಲೂಯ್‌ಟ್ಡಿಜ್ಕ್‍ ಅಣೆಕಟ್ಟನ್ನು (ಇದನ್ನು 1932ರಲ್ಲಿ ಮುಚ್ಚಲಾಯಿತು.) ದೇಶದ ಉತ್ತರ ಭಾಗದಲ್ಲಿ ಈಗಾಗಲೇ ನಿರ್ಮಿಸಿದ್ದರು ಚಂಡಮಾರುತದ ಅಲೆಗಳಿಂದ ಸೇಂಟ್‌ ಪೀಟರ್ಸ್‌ಬರ್ಗ್ ನಗರವನ್ನು ರಕ್ಷಿಸಲು, ರಷ್ಯಾದಲ್ಲಿ ಸೇಂಟ್‌ ಪೀಟರ್ಸ್‌ಬರ್ಗ್‌ ಪ್ರಿವೆನ್ಷನ್‌ ಫೆಸಿಲಿಟಿ ಕಾಂಪ್ಲೆಕ್ಸ್‌ಅನ್ನು 2008ರಲ್ಲಿ ನಿರ್ಮಿಸಲಾಯಿತು.
  • ಇದು ವರ್ತಲ ರಸ್ತೆಯನ್ನು ಪೂರ್ಣಗೊಳಿಸುವುದರಿಂದ, ಮುಖ್ಯವಾದ ಸಂಚಾರಿ ಕಾರ್ಯಾಚರಣ ವ್ಯವಸ್ಥೆಯನ್ನೂ ಒಳಗೊಂಡಿದೆ.ಹನ್ನೊಂದು ಅಣೆಕಟ್ಟೆಗಳನ್ನು 25.4 ಕಿಲೋಮೀಟರ್‌ ವಿಸ್ತರಿಸಲಾಗಿದೆ ಮತ್ತು ನೀರಿನ ಮಟ್ಟಕ್ಕಿಂತ ಎಂಟು ಅಡಿ ಎತ್ತರಿಸಲಾಗಿದೆ. ಆಸ್ಟ್ರೇಲಿಯದಲ್ಲಿ ಸುಮಾರು 150 ವರ್ಷಗಳ ಕಾಲ ವಿಯೆನ್ನಾ ಡ್ಯಾನ್ಯೂಬ್‌‌ ನಿಯಂತ್ರಣದ ವಿವಿಧ ಕ್ರಮಗಳ ಮೂಲಕ ಪ್ರವಾಹವನ್ನು ನಿಯಂತ್ರಿಸಲಾಗಿತ್ತು. ಇದರ ಜೊತೆಗೆ ಮುಖ್ಯ ಡ್ಯಾನ್ಯೂಬ್‌‌ ನದಿಯಲ್ಲಿ 1870-75ರ ಅವಧಿಯಲ್ಲಿ ಹೂಳೆತ್ತುವ ಮೂಲಕ ಮತ್ತು 1972ರಿಂದ 1988ರ ಅವಧಿಯಲ್ಲಿ ಹೊಸ ಡ್ಯಾನ್ಯೂಬ್‌‌ ನದಿಯನ್ನು ಸೃಷ್ಟಿಸುವ ಮೂಲಕ ಪ್ರವಾಹವನ್ನು ನಿಯಂತ್ರಿಸಿಕೊಂಡು ಬರಲಾಗುತ್ತಿದೆ.

ಅಮೆರಿಕ

ಬದಲಾಯಿಸಿ
 
1936ರಲ್ಲಿ ಪಿಟ್ಸ್‌ಬರ್ಗ‌್‌ನಲ್ಲಿ ಪ್ರವಾಹ
 
ವಾಶಿಂಗ್ಟನ್‌ನ ಸ್ನೊಕ್ವಾಲ್ಮೀ ಬಳಿ ಪ್ರವಾಹ, 2009.
  • ಮತ್ತೊಂದು ವಿಸ್ತಾರವಾದ ಪ್ರವಾಹ ನಿಯಂತ್ರಣ ವ್ಯವಸ್ಥೆಯನ್ನು ಮ್ಯಾನಿಟೋಬದ ಕೆನಡಿಯನ್‌ ಪ್ರಾಂತ್ಯದಲ್ಲಿ ಕಾಣಬಹುದು.ರೆಡ್‌ ರಿವರ್‌ ನದಿಯು ಯುನೈಟೆಡ್‌ ಸ್ಟೇಟ್ಸ್‌ನಿಂದ ಉತ್ತರದಿಕ್ಕಿಗೆ ಹರಿಯುವಾಗ ವಿನ್ನಿಪೇಗ್‌ ನಗರದ ಮೂಲಕ ok ಹಾದು ಹೋಗುತ್ತದೆ. (ಈ ಸಂದರ್ಭದಲ್ಲಿ ಇದು ಅಸ್ಸಿನಿಬೋಯ್ನೆ ನದಿಯನ್ನು ಸ್ಪರ್ಶಿಸಿ ವಿನ್ನಿಪೇಗ್‌ ಸರೋವರವನ್ನು ಸೇರುತ್ತದೆ.)
  • ಉತ್ತರ ಗೋಳಾರ್ಧದ ಸಮಶೀತೋಷ್ಣ ವಲಯದಲ್ಲಿ ಉತ್ತರ ದಿಕ್ಕಿಗೆ ಹರಿಯುವ ಎಲ್ಲ ನದಿಗಳಲ್ಲಿರುವಂತೆ ಉತ್ತರ ಭಾಗಗಳಲ್ಲಿ ಹಿಮ ಸಂಪೂರ್ಣ ವಾಗಿ ಕರಗಿ ನೀರಾಗಲು ಕಾಯುವುದಕ್ಕೆ ಮುಂಚೆಯೇ ದಕ್ಷಿಣ ಭಾಗಗಳಲ್ಲಿ ಹಿಮಕರಗಿ ನದಿಗಳ ನೀರಿನ ಮಟ್ಟದ ಹೆಚ್ಚಳಕ್ಕೆ ಕಾರಣವಾಗಬಹುದು. 1950ರ ವಸಂತ ಕಾಲದಲ್ಲಿ ವಿನ್ನಿಪೇಗ್‌ನಲ್ಲಿ ಸಂಭವಿಸಿದ ರೀತಿಯ ವಿಧ್ವಂಸಕ ಪ್ರವಾಹಕ್ಕೆ ಇದು ಕಾರಣವಾಗಬಹುದು.
  • ಭವಿಷ್ಯದಲ್ಲಿ ಉಂಟಾಗಬಹುದಾದ ಪ್ರವಾಹಗಳಿಂದ ನಗರವನ್ನು ರಕ್ಷಿಸಲು ಮ್ಯಾನಿಟೋಬ ಸರ್ಕಾರ ಬೃಹತ್‌ ದಿಕ್‌ಪರಿವರ್ತನೆ ವ್ಯವಸ್ಥೆ, ಜಲಮಾರ್ಗ, ಪ್ರವಾಹಮಾರ್ಗಗಳನ್ನು ನಿರ್ಮಿಸಲು ಆರಂಭಿಸಿತು. (ರೆಡ್‌ ರಿವರ್‌ ಪ್ರವಾಹಮಾರ್ಗ ಮತ್ತು ಪೋರ್ಟೇಜ್ ದಿಕ್‌ಪರಿವರ್ತನೆಗಳನ್ನು ಈ ಹಂತದಲ್ಲಿಯೇ ನಿರ್ಮಿಸಲಾಯಿತು.)
  • ಗ್ಯ್ರಾಂಡ್‌ ಫೋರ್ಕ್ಸ್, ನಾರ್ಥ್‌ ಡಕೋಟ, Ste. ಅಗಾಥೆ, ಮ್ಯಾನಿಟೋಬಗಳನ್ನೂ ಒಳಗೊಂಡಂತೆ ಹಲವು ಸಮುದಾಯಗಳನ್ನು ಧ್ವಂಸಮಾಡಿದ್ದ 1997ರ ಪ್ರವಾಹದಿಂದ ವಿನ್ನಿಪೇಗ್‌ ನಗರವನ್ನು ಈ ವ್ಯವಸ್ಥೆ ರಕ್ಷಿಸಿತ್ತು. ಇದು ವಿನ್ನಿಪೇಗ್‌ ನಗರವನ್ನು 2009ರ ಪ್ರವಾಹದಿಂದಲೂ ರಕ್ಷಿಸಿತ್ತು.
  • ನೂರಾರು ಮೈಲುಗಳ ತಡೆಗೋಡೆ ಮತ್ತು ಪ್ರವಾಹ ಮಾರ್ಗಗಳನ್ನು ನಿರ್ಮಿಸುವ ಮೂಲಕ ಅಮೆರಿಕದಲ್ಲಿ, ಸಮುದ್ರ ಮಟ್ಟದಿಂದ ಕೆಳಗಿರುವ ನ್ಯೂ ಓರ್ಲಿಯಾನ್ಸ್‌ ಮೆಟ್ರೊಪಾಲಿಟನ್‌ ಏರಿಯಾ ದ 35%ನಷ್ಟು ಭಾಗವನ್ನು ಸಂರಕ್ಷಿಸಲಾಗಿದೆ. ನಗರ ವ್ಯಾಪ್ತಿಯಲ್ಲಿ ಮತ್ತು ನಗರದ ಪೂರ್ವ ಭಾಗಗಳಲ್ಲಿ ಕತ್ರಿನಾ ಚಂಡಮಾರುತ ಅಪ್ಪಳಿಸಿದ ಸಂದರ್ಭದಲ್ಲಿ ಅಸಂಖ್ಯಾತ ಭಾಗಗಲ್ಲಿ ಈ ವ್ಯವಸ್ಥೆ ಪೂರ್ತಿ ವಿಫಲವಾಯಿತು.
  • ಇದರ ಪರಿಣಾಮ ನಗರದ ಅಂದಾಜು 50%ನಷ್ಟು ಪ್ರದೇಶ ಕೆಲವು ಸೆಂಟಿಮೀಟರ್‌ಗಳಿಂದ ಹಿಡಿದು ಕರಾವಳಿ ಸಮುದಾಯಗಳಲ್ಲಿ 8.2 (27 ಅಡಿಗೆ ಇನ್ನು ಕೆಲವೇ ಇಂಚುಗಳು ಬಾಕಿ ) ಸೆಂಟಿಮೀಟರ್‌ಗಳವರೆಗೂ ಮುಳುಗಡೆಯಾಯಿತು.[]
  • ಯಶಸ್ವಿ ಪ್ರವಾಹ ನಿಯಂತ್ರಣದ ಕ್ರಮವಾಗಿ, ಮಿಡ್‌ವೆಸ್ಟ್‌ ಪ್ರಾಂತ್ಯದುದ್ದಕ್ಕೂ ಉಂಟಾದ 1993ರ ಪ್ರವಾಹದ ನಂತರ, ಯುನೈಟೆಡ್‌ ಸ್ಟೇಟ್ಸ್‌ನ ಒಕ್ಕೂಟ ಸರ್ಕಾರ ಮರುಕಳಿಸುತ್ತಿರುವ ಅವಘಡಗಳನ್ನು ನಿಯಂತ್ರಿಸುವ ಉದ್ದೇಶದಿಂದ ಯುನೈಟೆಡ್‌ ಸ್ಟೇಟ್ಸ್‌ನಲ್ಲಿ ಪ್ರವಾಹದಲ್ಲಿ ನೆಲಸಮವಾದ ವಸ್ತುಗಳನ್ನು ಕೊಳ್ಳುವಂತೆ ಆಹ್ವಾನಿಸಿತು. ಹಲವು ಸಮುದಾಯಗಳು ಈ ಆಹ್ವಾನವನ್ನು ಸ್ವೀಕರಿಸಿದವು. ಸರ್ಕಾರ ರಾಜ್ಯಗಳ ಸಹಯೋಗದಲ್ಲಿ ನಂತರ ಆರ್ದ್ರಪ್ರದೇಶಗಳಾಗಿ ಪರಿವರ್ತನೆಯಾದ 25,000 ವಸ್ತುಗಳನ್ನು ಸರ್ಕಾರ ಖರೀದಿಸಿತು.
  • ಚಂಡಮಾರುತಗಳು ಬೀಸಿದಾಗ ಈ ಆರ್ದ್ರಪ್ರದೇಶಗಳು ಸ್ಪಂಜಿನಂತೆ ವರ್ತಿಸಿ ತೇವಾಂಶವನ್ನು ಹೀರಿಕೊಳ್ಳುತ್ತವೆ ಆದರೆ 1995ರಲ್ಲಿ ಪ್ರವಾಹ ಮತ್ತೆ ಮರುಕಳಿಸಿದಾಗ, ಸರ್ಕಾರ ಪ್ರವಾಹಪೀಡಿತ ಪ್ರದೇಶಗಳಲ್ಲಿ ಉಪಯೋಗಿಸಲು ಮೂಲಸೌಕರ್ಯಗಳನ್ನು ಹೊಂದಿರಲಿಲ್ಲ.[]

ಚೀನಾದಲ್ಲಿ ಪ್ರವಾಹ ದಿಕ್‌ಪರಿವರ್ತನೆ ಮಾಡುವ ಪ್ರದೇಶಗಳು ಗ್ರಾಮೀಣ ಪ್ರದೇಶಗಳಾಗಿವೆ. ನಗರಗಳನ್ನು ರಕ್ಷಿಸುವ ಸಲುವಾಗಿ ಉದ್ಧೇಶಪೂರ್ವಕಾಗಿಯೇ ಪ್ರವಾಹವನ್ನು ಗ್ರಾಮೀಣ ಪ್ರದೇಶಗಳಿಗೆ ತಿರುಗಿಸಲಾಗುತ್ತದೆ.[] ಈ ರೀತಿ ಮಾಡುವುದರಿಂದ ಸಸ್ಯವರ್ಗಗಳ (ಅರಣ್ಯನಾಶ) ಉಂಟಾಗುತ್ತದೆ. ಇದು ಇರುವ ಅಪಾಯವನ್ನು ಮತ್ತಷ್ಟು ಹೆಚ್ಚಿಸಬಹುದು ಎಂದು ಹಲವರು ವಾದಿಸಿದ್ದಾರೆ. ಸ್ವಾಭಾವಿಕ ಅರಣ್ಯಗಳಿಂದ ಪ್ರವಾಹದ ಅವಧಿ ಕಡಿಮೆಯಾಗಬೇಕು. ಅರಣ್ಯನಾಶದ ಪ್ರಮಾಣವನ್ನು ಕಡಿಮೆ ಮಾಡಿದ ಮೇಲೆ ಪ್ರವಾಹ ಘಟನೆಗಳು ಮತ್ತು ಅದರ ಉಗ್ರತೆ ಕಡಿಮೆಯಾಗಲೇಬೇಕು.[]

ಆಫ್ರಿಕಾ

ಬದಲಾಯಿಸಿ

ಈಜಿಪ್ಟ್‌ನಲ್ಲಿ ಆಸ್ವಾನ್‌ ಅಣೆಕಟ್ಟು(1902) ಮತ್ತು ಆಸ್ವಾನ್‌ ಉನ್ನತ ಅಣೆಕಟ್ಟು(1976) ಎರಡೂ ಕೂಡ ನೈಲ್‌ ನದಿಯುದ್ದಕ್ಕೂ ಸಾಕಷ್ಟು ಪ್ರಮಾಣದಲ್ಲಿ ಪ್ರವಾಹವನ್ನು ತಗ್ಗಿಸಿವೆ.

ಪ್ರವಾಹ ಸ್ವಚ್ಛತೆ ವೇಳೆ ಸುರಕ್ಷತೆ

ಬದಲಾಯಿಸಿ
  • ಪ್ರವಾಹ ತಗ್ಗಿದ ನಂತರ ನಡೆಯುವ ಸ್ವಚ್ಛತಾ ಕಾರ್ಯ ಇದರಲ್ಲಿ ತೊಡಗುವ ಕೆಲಸಗಾರರಿಗೆ ಮತ್ತು ಸ್ವಯಂ ಸೇವಕರಿಗೆ ಸಾಕಷ್ಟು ವೇಳೆ ಹಲವು ತೊಂದರೆಗಳನ್ನು ತೊಂದೊಡ್ಡುತ್ತದೆ. ಈ ಸಮಯದಲ್ಲಿ ಉಂಟಾಗಬಹುದಾದ ಕೆಲವು ಸಂಭಾವ್ಯ ತೊಂದರೆಗಳೆಂದರೆ: ಉಕ್ಕಿಹರಿಯುವ ಅನಾರೋಗ್ಯಕರವಾದ ಕಶ್ಮಲದ ನೀರಿನೊಂದಿಗೆ ಬರೆತು ಶುದ್ಧನೀರು ಮಲಿನಗೊಳ್ಳುವುದು, ವಿದ್ಯುತ್‌ ಅವಘಡಗಳು, ಇಂಗಾಲದ ಮೋನಾಕ್ಸೈಡ್‌ ಹರಡುವುದು, ಮಸ್ಕ್ಯುಲೋಸ್ಕೆಲಿಟಲ್‌ (=ನರಮೂಳೆ) ತೊಂದರೆಗಳು, ಉಷ್ಣ ಅಥವಾ ಶೀತದೊತ್ತಡ, ವಾಹನಗಳಿಗೆ ಸಂಬಂಧಪಟ್ಟ ತೊಂದರೆಗಳು, ಬೆಂಕಿ, ಡ್ರಾನಿಂಗ್ ಮತ್ತು ಹಾನಿಕಾರಕ ವಸ್ತುಗಳಿಗೆ ಒಡ್ಡಿಕೊಳ್ಳುವುದು ಮುಂತಾದ ಹಲವು ತೊಂದರೆಗಳಿಗೆ ಸ್ವಚ್ಛತಾ ಕೆಲಸಗಾರರು ಒಳಗಾಗುವ ಅಪಾಯವಿದೆ.[] ಏಕೆಂದರೆ ಪ್ರವಾಹಕ್ಕೆ ತುತ್ತಾದ ಪ್ರದೇಶ ಅಸ್ಥಿರವಾಗಿರುತ್ತವೆ. ಚೂಪಾದ ಇಲ್ಲವೇ ಹರಿತವಾದ ಕಸಕಡ್ಡಿಗಳ ಅಪಾಯ, ಪ್ರವಾಹದಲ್ಲಿ ಮಲಿನಗೊಂಡ ನೀರಿನಲ್ಲಿ ಉದ್ಭವಿಸಬಹುದಾದ ಜೈವಿಕ ತೊಂದರೆಗಳು, ತೆರೆದುಕೊಂಡಿರುವ ವಿದ್ಯುತ್‌ ತಂತಿಗಳು, ರಕ್ತ ಅಥವಾ ದೇಹದ ಮತ್ತಾವುದೇ ದ್ರವ ಪದಾರ್ಥಗಳು ಹಾಗೂ ಪ್ರಾಣಿ ಮತ್ತು ಮನುಷ್ಯನ ಕಶ್ಮಲ ಮುಂತಾದ ಅಪಾಯಗಳನ್ನು ಸ್ವಚ್ಚತಾ ಕಾರ್ಯದಲ್ಲಿ ತೊಡಗುವ ಕೆಲಸಗಾರರು ಎದುರಿಸಬೇಕಾಗುತ್ತದೆ.
  • ಪ್ರವಾಹ ದುರ್ಘಟನೆಗಳಿಗೆ ಸ್ಪಂದಿಸುವಾಗ ಮತ್ತು ಅದಕ್ಕಾಗಿ ಯೋಜನೆಗಳನ್ನು ಕೈಗೊಳ್ಳುವಾಗ ನಿರ್ವಾಹಕರು, ದೃಢವಾದ ಟೋಪಿಗಳು, ಕನ್ನಡಕಗಳು, ದಪ್ಪನೆಯ ಕೆಲಸದ ಕೈಚೀಲಗಳು, ಜೀವರಕ್ಷಕ ಜಾಕೆಟ್‌ಗಳು ಮತ್ತು ಉಕ್ಕಿನ ಪಾದ ಮತ್ತು ಒಳಹಟ್ಟೆಗಳಿರುವ ನೀರು ಒಳನುಗ್ಗದಂತಹ ಬೂಟ್‌ಗಳು ಮುಂತಾದ ಸುರಕ್ಷಾ ಪರಿಕರಳನ್ನು ಕೆಲಸಗಾರರಿಗೆ ಒದಗಿಸುತ್ತಾರೆ.[]

ಪ್ರವಾಹದ ಅನುಕೂಲತೆಗಳು

ಬದಲಾಯಿಸಿ
  • ಮಾನವ ವಸತಿ ಮತ್ತು ಆರ್ಥಿಕ ಚಟುವಟಿಕೆಗಳ ಮೇಲೆ ಪ್ರಭಾವ ಬೀರುವ ಪ್ರವಾಹದ ವಿಚ್ಛಿದ್ರಕಾರಕ ಪರಿಣಾಮಗಳು ಹಲವಾರಿವೆ.ಇಷ್ಟೆಲ್ಲಾ ತೊಂದರೆಗಳಿದ್ದರೂ, ಪ್ರವಾಹ (ನಿರ್ದಿಷ್ಟವಾಗಿ ಮರುಕಳಿಸುವ/ಚಿಕ್ಕ ಪ್ರವಾಹಗಳು) ಹಲವು ಅನುಕೂಲಗಳನ್ನೂ ತರುತ್ತವೆ. ಪ್ರವಾಹ ಬತ್ತಿಹೋದ ಅಂತರ್ಜಲವನ್ನು ಮರುಪೂರಣ ಮಾಡಿಸುತ್ತದೆ. ಮಣ್ಣನ್ನು ಮತ್ತಷ್ಟು ಫಲವತ್ತಾಗಿಸುತ್ತದೆ, ಅಲ್ಲದೆ ಮಣ್ಣಿಗೆ ಅಗತ್ಯವಾದ ಖನಿಜಾಂಶಗಳನ್ನು ಒದಗಿಸುತ್ತದೆ. ಪ್ರವಾಹದ ನೀರು ಅತ್ಯಗತ್ಯವಾಗಿ ಬೇಕಾದ ಜಲ ಸಂಪನ್ಮೂಲವನ್ನು ಒದಗಿಸುತ್ತದೆ.
  • ವರ್ಷದುದ್ದಕ್ಕೂ ನಿರ್ದಿಷ್ಟ ಮಳೆಯ ಪ್ರಮಾಣದ ಕೊರತೆಯಿರುವ ಶುಷ್ಕ ಮತ್ತು ಅರೆ ಶುಷ್ಕ ಪ್ರದೇಶಗಳಿಗಂತೂ ಇದು ವರದಾನವಾಗುತ್ತದೆ. ಹೊಸನೀರಿನ ಪ್ರವಾಹ, ನಿರ್ದಿಷ್ಟವಾಗಿ ನದಿ ಸುತ್ತಲಿನ ಪ್ರದೇಶದಲ್ಲಿ ಪರಿಸರ ವ್ಯವಸ್ಥೆಯನ್ನು ಸುಸ್ಥಿತಿಯಲ್ಲಿರಿಸಿಕೊಳ್ಳುವಲ್ಲಿ ‌ಪ್ರಮುಖ ಪಾತ್ರ ವಹಿಸು ತ್ತದೆ ಮತ್ತು ಸದಾ ಪ್ರವಾಹಕ್ಕೆ ತುತ್ತಾಗುವ ಪ್ರದೇಶಗಳ ಜೀವವೈವಿಧ್ಯತೆಯನ್ನು ಕಾಪಾಡುವಲ್ಲಿಯೂ ಮಹತ್ವದ ಪಾತ್ರ ವಹಿಸುತ್ತದೆ.[೧೦]
  • ಟೈಗ್ರಿಸ್‌-ಯುಪ್ರಟಿಸ್‌, ನೈಲ್‌ನದಿ, ಇಂಡಸ್‌ ನದಿ, ಗಂಗಾ ನದಿ ಹಾಗೂ ಯೆಲ್ಲೋ ರಿವರ್‌ಗಳ ಸುತ್ತ ಇದ್ದ ಪ್ರಾಚೀನ ನಾಗರೀಕತೆಗಳ ಯೋಗಕ್ಷೇಮಕ್ಕೆ ಮರುಕಳಿಸುತ್ತಿದ್ದ ಪ್ರವಾಹ ಬಹಳ ಮುಖ್ಯವಾಗಿತ್ತು. ನವೀಕರಿಸಬಹುದಾದ ಇಂಧನ ಮೂಲಗಳನ್ನು ಆಧರಿಸಿದ ಹೈಡ್ರಾಲಾಜಿಕಲ್‌ ಜೀವಶಕ್ತಿ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಹೆಚ್ಚಿರುತ್ತದೆ.

ಪ್ರವಾಹ ಅಧ್ಯಯನ

ಬದಲಾಯಿಸಿ
  • ಪ್ರವಾಹ ಅಧ್ಯಯನ ವಾಸ್ತವವಾಗಿ ಇತ್ತೀಚಿನ ಪದ್ಧತಿಯಾಗಿದ್ದರೂ, ಪ್ರವಾಹ ಪ್ರದೇಶದಲ್ಲಿ ಮಾಡುವ ಕೆಲಸದಲ್ಲಿ ಇರಬೇಕಾದ ವಿನ್ಯಾಸವನ್ನು ಅರ್ಥಮಾಡಿಕೊಳ್ಳುವ ಮತ್ತು ನಿರ್ವಹಿಸುವ ಪ್ರಯತ್ನಗಳು ಕನಿಷ್ಟ ಆರು ಶತಮಾನಗಳಿಂದಲೂ ನಡೆಯುತ್ತಾ ಬಂದಿವೆ.[೧೧]
  • ಕಂಪ್ಯೂಟರೀಕೃತ ಪ್ರವಾಹ ಅಧ್ಯಯನದ ಇತ್ತೀಚಿನ ಬೆಳವಣಿಗೆಗಳು ಈಗಾಗಲೇ ಪ್ರಯತ್ನಿಸಿರುವ ಮತ್ತು ಪ್ರಯೋಗ ನಡೆಸಿರುವ "ಹಿಡಿ ಅಥವಾ ಒಡೆ" ಮಾದರಿಯನ್ನು ಹಿಂದೆ ಸರಿಯುವಂತೆ ಮಾಡಿವೆ. ಅತ್ಯಾಧುನಿಕ ಇಂಜಿನಿಯರಿಂಗ್‌ ತಂತ್ರಜ್ಞಾನವುಳ್ಳ ಅಧ್ಯಯನ ಮಾದರಿಗಳನ್ನು ಉತ್ತೇಜಿಸುವುದು ಇದರ ಉದ್ದೇಶವಾಗಿದೆ. ಇತ್ತೀಚಿನ ವರ್ಷಗಳಲ್ಲಿ ವಿವಿಧ ಕಂಪ್ಯೂಟರೀಕೃತ ಪ್ರವಾಹ ಅಧ್ಯಯನ ಮಾದರಿಗಳು 1D(ಪ್ರವಾಹದ ಮಟ್ಟವನ್ನು ಈ ಚಾನೆಲ್‌ನಲ್ಲಿ ಅಳೆಯಲಾಗುತ್ತದೆ.)
  • ಮಾದರಿಯಲ್ಲಿ ಇಲ್ಲವೇ 2D (ಪ್ರವಾಹ ಪ್ರದೇಶದ ವ್ಯಾಪ್ತಿಯಲ್ಲಿ ಪ್ರವಾಹದ ಆಳವನ್ನು(=ಪರಿಣಾಮ) ಇದರಲ್ಲಿ ಅಳೆಯಲಾಗುತ್ತದೆ.) ಮಾದರಿಯಲ್ಲಿ ಅಭಿವೃದ್ಧಿಯಾಗಿವೆ. EC-RAS[೧೨], ಇದು ಹೈಡ್ರಾಲಿಕ್‌ ಇಂಜಿನಿಯರಿಂಗ್‌ ಕೇಂದ್ರದ ಮಾದರಿಯಾಗಿದ್ದು, ಸಧ್ಯ ಲಭ್ಯವಿರುವ ವಿವಿಧ ಮಾದರಿಗಳಲ್ಲಿ ಜನಪ್ರಿಯವಾಗಿದೆ.
  • ಯಾಕೆಂದರೆ ಇದು ಉಚಿತವಾಗಿ ಲಭ್ಯವಿದೆ. TUFLOW[೧೩]ನಂತಹ ಇತರೆ ಮಾದರಿಗಳು ಪ್ರವಾಹ ಪ್ರದೇಶದಲ್ಲಿ ಪ್ರವಾಹದ ಪರಿಣಾಮವನ್ನು ಅಳೆಯಲು 1D ಮತ್ತು 2D ಅಂಶಗಳನ್ನು ಒಳಗೊಂಡಿರುತ್ತವೆ. ಇಲ್ಲಿಯವರೆಗೆ ಅಲೆ ಮತ್ತು ನದಿ ಪ್ರವಾಹ ಘಟನೆಗಳ ಸಮೀಕ್ಷೆಯ ಮೇಲೆ ಗಮನ ಕೇಂದ್ರೀಕೃತವಾಗಿದೆ.
  • ಆದರೆ 2007ರಲ್ಲಿ UKಯಲ್ಲಿ ಉಂಟಾದ ಪ್ರವಾಹದ ಘಟನೆಗಳು ಮೇಲ್ಮೈ ಜಲ ಪ್ರವಾಹದ ಪರಿಣಾಮಗಳ ಮೇಲೆ ಒತ್ತು ನೀಡುವಂತೆ ಮಾಡಿತು. [೧೪]

ಮಾರಣಾಂತಿಕ ಪ್ರವಾಹಗಳು

ಬದಲಾಯಿಸಿ

ವಿಶ್ವದಾದ್ಯಂತ ಸಂಭವಿಸಿದ ಮಾರಣಾಂತಿಕ ಪ್ರವಾಹದ ದುರ್ಘಟನೆಗಳ ಪಟ್ಟಿಯನ್ನು ಕೆಳಗೆ ನೀಡಲಾಗಿದೆ. ಇದರಲ್ಲಿ 100,000 ಅಥವಾ ಅದಕ್ಕಿಂತ ಹೆಚ್ಚಿನ ಸಾವು ನೋವುಗಳು ಸಂಭವಿಸಿದ ಘಟನೆಗಳನ್ನು ಮಾತ್ರ ಪಟ್ಟಿ ಮಾಡಲಾಗಿದೆ.

ಸತ್ತವರ ಸಂಖ್ಯೆ ಘಟನೆ ಸ್ಥಳ ದಿನಾಂಕ
2,500,000–3,700,000[೧೫] 1931 ಚೀನಾ ಪ್ರವಾಹ ಚೀನಾ 1931
900,000–2,000,000 1887 ಯೆಲ್ಲೋ ರಿವರ್‌ (ಹಾಂಗ್‌ ಹೆ) ಪ್ರವಾಹ ಚೀನಾ 1887
500,000–700,000 1938 ಯೆಲ್ಲೋ ರಿವರ್‌ (ಹಾಂಗ್‌ ಹೆ) ಪ್ರವಾಹ ಚೀನಾ 1938
231,000 ತೈಫೂನ್‌ ನೈನ ಚಂಡಮಾರುತ ಅಪ್ಪಳಿಸಿದ ಪರಿಣಾಮದಿಂದ ಬ್ಯಾಂಕಿಯೋ ಅಣೆಕಟ್ಟು ವೈಫಲ್ಯ , ಅಂದಾಜು 86,000 ಜನರು ಪ್ರವಾಹದಿಂದ ತಮ್ಮ ಪ್ರಾಣತೆತ್ತರು ಮತ್ತು ಇದರ ನಂತರದಲ್ಲಿ ಉಂಟಾದ ರೋಗ-ರುಜಿನಗಳಲ್ಲಿ ಸುಮಾರು 145,000 ಜನರು ಸಾವನ್ನಪ್ಪಿದರು. ಚೀನಾ 1975
230,000 ಇಂಡಿಯನ್‌ ಓಷನ್‌ ಸುನಾಮಿ ಭಾರತ (ಬಹುತೇಕ ತಮಿಳುನಾಡಿನಲ್ಲಿ), ಥಾಯ್ಲೆಂಡ್‌, ಮಾಲ್ಡೀವ್ಸ್‌ 2004
145,000 1935 ಯಾಂಗ್ಝೆ ನದಿ ಪ್ರವಾಹ ಚೀನಾ 1935
100,000ಕ್ಕೂ ಹೆಚ್ಚು ಸೇಂಟ್‌ ಫೆಲಿಕ್ಸ್‌ ಪ್ರವಾಹ , ಚಂಡಮಾರುತದ ಅಲೆಗಳಿಂದ ನೆದರ್ಲೆಂಡ್ಸ್‌ 1530
100,000 ಹನೋಯಿ ಮತ್ತು ರೆಡ್‌ ರಿವರ್‌ನ ಮುಖಜಭೂಮಿ ಪ್ರವಾಹ ಉತ್ತರ ವಿಯೆಟ್ನಾಂ 1971
100,000 1911 ಯಾಂಗ್ಝೆ ನದಿ ಪ್ರವಾಹ ಚೀನಾ 1911


ಇದನ್ನೂ ನೋಡಿರಿ

ಬದಲಾಯಿಸಿ
 
2005ರ ಆರಂಭದಲ್ಲಿ ವಾಯುವ್ಯ ಬಾಂಗ್ಲಾದೇಶದಲ್ಲಿ ಸುರಿದ ಅತೀವ ಮಳೆಯಿಂದಾಗಿ ನದಿಗಳು ಹಲವಾರು ಹಳ್ಳಿಗಳನ್ನು ನೀರಲ್ಲಿ ಮುಳುಗಿಸಿದವು. ನಾಸಾದ ಟೆರ್ರಾ ಉಪಗ್ರಹದಲ್ಲಿರುವ ಮಾಡರೇಟ್ ರೆಸಲ್ಯೂಶನ್ ಇಮೇಜಿಂಗ್ ಸ್ಪೆಕ್ಟ್ರೋಮೀಟರ್ (MODIS) 2005ರ ಅಕ್ಟೋಬರ್ 12ರಲ್ಲಿ ತುಂಬಿಹರಿಯುತ್ತಿದ್ದ ಘಘಟ್ ಮತ್ತು ಅತ್ರೈ ನದಿಗಳ ಅತ್ಯುತ್ತಮ ಚಿತ್ರವನ್ನು ತೆಗೆದಿದೆ. ಪ್ರವಾಹದ ಚಿತ್ರದಲ್ಲಿ ನದಿಗಳ ಭೀಕರತೆಯು ಗ್ರಾಮಪ್ರದೇಶದವರೆಗೆ ಹರಡಿದೆ.

ಆಕರಗಳು

ಬದಲಾಯಿಸಿ

ಗ್ರಂಥಸೂಚಿ

ಬದಲಾಯಿಸಿ
  • O'ಕಾನ್ನರ್‌, ಜಿಮ್‌ E. ಮತ್ತು ಜಾನ್‌ E. ಕೋಸ್ಟ. 2004ದಿ ವರ್ಡ್ಸ್ ಲಾರ್ಜೆಸ್ಟ್‌ ಫ್ಲಡ್ಸ್‌, ಪಾಸ್ಟ್‌ ಅಂಡ್‌ ಪ್ರಸೆಂಟ್‌: ದೆಯರ್‌ ಕಾಸಸ್‌ ಅಂಡ್‌ ಮ್ಯಾಗ್ನಿಟ್ಯೂಡ್ಸ್‌ [ಸುತ್ತೋಲೆ 1254]. ವಾಷಿಂಗ್ಟನ್‌, D.C.: U.S. ಒಳನಾಡು ಇಲಾಖೆ , U.S.ಭೂ ಸರ್ವೇಕ್ಷಣೆ
  • ಥಾಮ್ಸನ್‌, M.T. (1964). ಹಿಸ್ಟಾರಿಕಲ್‌ ಫ್ಲಡ್ಸ್‌ ಇನ್‌ ನ್ಯೂ ಇಂಗ್ಲೆಂಡ್‌ [ಭೂ ಸರ್ವೇಕ್ಷಣೆ ನೀರು ಸರಬರಾಜು ಪತ್ರಿಕೆ 1779-M]. ವಾಷಿಂಗ್ಟನ್‌, D.C.: ಯುನೈಟೆಡ್‌ ಸ್ಟೇಟ್ಸ್‌ ಸರ್ಕಾರಿ ಮುದ್ರಣ ಕಚೇರಿ.
  • ಪೋವೆಲ್‌, W.ಗೇಬ್‌. (2009).ಸ್ಥಳೀಯ ಪ್ರವಾಹ ಪ್ರದೇಶ ನಿರ್ವಹಣೆಗೆ ರಾಷ್ಟ್ರೀಯ ಕೃಷಿ ಚಿತ್ರಣ ಯೋಜನೆ (NAIP)ಯನ್ನು ಒಳಗೊಳ್ಳುವ ಭೂಮಿ/ಬಳಕೆಯ ಭೂಮಿ(LULC) ಪತ್ತೆಹಚ್ಚುವ ದತ್ತಾಂಶಗಳ ಹೈಡ್ರಾಲಿಜ್‌ ಮಾದರಿಯನ್ನು ಅಳವಡಿಸುವುದು.

ಅನ್ವಯಿಕ ಸಂಶೋಧನಾ ಯೋಜನೆಟೆಕ್ಸಾಸ್‌ ಸ್ಟೇಟ್‌ ವಿಶ್ವವಿದ್ಯಾಲಯ - ಸ್ಯಾನ್‌ ಮಾರ್ಕೋಸ್‌. http://ecommons.txstate.edu/arp/296/ Archived 2012-03-05 ವೇಬ್ಯಾಕ್ ಮೆಷಿನ್ ನಲ್ಲಿ.

ಟಿಪ್ಪಣಿಗಳು

ಬದಲಾಯಿಸಿ
  1. MSN ಎರ್ನ್ಕಾರ್ಟ ವಿಶ್ವಕೋಶ ಪ್ರವಾಹ. Archived 2011-02-04 ವೇಬ್ಯಾಕ್ ಮೆಷಿನ್ ನಲ್ಲಿ. 2006-12-28ರಲ್ಲಿ ಮರು ಸಂಪಾದಿಸಲಾಗಿದೆ.
  2. ಪವನಶಾಸ್ತ್ರದ ಶಬ್ದಕೋಶ (2009). ಪ್ರವಾಹ. Archived 2007-08-16 ವೇಬ್ಯಾಕ್ ಮೆಷಿನ್ ನಲ್ಲಿ. 2009-01-09ರಲ್ಲಿ ಮರು ಸಂಪಾದಿಸಲಾಗಿದೆ.
    • ಜೆಫ್ಪರಿ H. ಜಾಕ್ಸನ್‌, ಪ್ಯಾರಿಸ್ ಅಂಡರ್ ವಾಟರ್: ಹೌ ದಿ ಸಿಟಿ ಆಫ್ ಲೈಟ್ ಸರ್ವೈವ್ಡ್ ದಿ ಗ್ರೇಟ್ ಫ್ಲಡ್ ಆಫ್‌ 1910 (ನ್ಯೂಯಾರ್ಕ್‌: ಪಾಲ್‌ಗ್ರೇವ್‌ ಮ್ಯಾಕ್‌ಮಿಲನ್‌, 2010) ನೋಡಿ.
  3. United States Department of Commerce (2006). "Hurricane Katrina Service Assessment Report" (PDF). Archived from [http: //www.weather.gov/om/assessments/pdfs/Katrina.pdf the original] (PDF) on 2006-07-23. Retrieved 2006-07-14. {{cite web}}: Check |url= value (help); Unknown parameter |month= ignored (help)
  4. ಅಮಂಡ್ ರಿಫ್ಲೆ. "ಪ್ರವಾಹ, ಟಾರ್ನೆಡೋಗಳು, ಹರಿಕೇನ್‌ಗಳು, ಕಾಡ್ಗಿಚ್ಚು, ಭೂಕಂಪಗಳು... Archived 2006-08-24 ವೇಬ್ಯಾಕ್ ಮೆಷಿನ್ ನಲ್ಲಿ.ನಾವೇಕೆ ಸಿದ್ಧರಾಗುವುದಿಲ್ಲ." Archived 2006-08-24 ವೇಬ್ಯಾಕ್ ಮೆಷಿನ್ ನಲ್ಲಿ. ಟೈಮ್. ಆಗಸ್ಟ್‌ 28, 2006.
  5. "ಪ್ರವಾಹವನ್ನು ವಿಕೇಂದ್ರಿಕರಿಸಲು ಚೀನಾ ಏಳನೇ ಕಾಲವೆಯನ್ನು ತೆರೆದಿದೆ." ಚೀನಾ ಡೈಲಿ. 2003-07-07.
  6. ಬ್ರ್ಯಾಡ್‌ಷಾ CJ, ಸೋದಿ NS, ಪೇ SH, ಬ್ರೂಕ್ BW. (2007ಅರಣ್ಯ ನಾಶವು ಅಭಿವೃದ್ಧಿ ಹೊಂದುತ್ತಿರುವ ಜಗತ್ತಿನಲ್ಲಿ ಪ್ರವಾಹದ ಅಪಾಯ ಮತ್ತು ತೀವ್ರತೆಯನ್ನು ಹೆಚ್ಚಿಸುತ್ತದೆ ಎನ್ನುವುದಕ್ಕೆ ಜಗತ್ತು ಸಾಕ್ಷಿಯಾಗಿದೆ.ಗ್ಲೋಬಲ್ ಚೇಂಜ್ ಬಯಾಲಜಿ , 13: 2379-2395.
  7. NIOSH. ''ಪ್ರವಾಹ ನಿರ್ಮಲೀಕರಣದ ಅಪಾಯವನ್ನು NIOSH ಎಚ್ಚರಿಸಿದೆ. NIOSH ಪ್ರಕಟಣೆ ಸಂ. 94-123.
  8. WMO/GWP ಪ್ರವಾಹ ನಿಯಂತ್ರಣಕ್ಕೆ ಸಂಬಂಧಿಸಿದಕಾರ್ಯಕ್ರಮ /pdf/ifm_environmenta l_aspects .pdf "ಏಕೀಕೃತ ಪ್ರವಾಹ ನಿರ್ವಹಣೆಯ ಪರಿಸರಕ್ಕೆ ಸಂಬಂಧಿಸಿದ ಅಂಶಗಳು." Archived 2021-01-26 ವೇಬ್ಯಾಕ್ ಮೆಷಿನ್ ನಲ್ಲಿ. WMO, 2007
  9. ಡೈಹೌಸ್‌, G. ಎಟ್ ಅಲ್. "HEC-RAS ಪ್ರವಾಹ ಮಾದರಿಗಳ ಬಳಕೆ (ಮೊದಲ ಆವೃತ್ತಿ)." ಹೇಸ್ಟಾಡ್‌ ಪ್ರೆಸ್‌, ವಾಟರ್‌ಬ್ಯರಿ (USA), 2003.
  10. ಯುನೈಟೆಡ್‌ ಸ್ಟೇಟ್ಸ್‌ ಆರ್ಮಿ ಕಾರ್ಪ್ಸ್‌ ಆಫ್‌ ಇಂಜಿನಿಯರ್ಸ್‌. ಡೇವಿಸ್‌, CA. ಹೈಡ್ರಾಲಿಕ್ ಇಂಜಿನಿಯರಿಂಗ್ ಕೇಂದ್ರ. Archived 2013-03-08 ವೇಬ್ಯಾಕ್ ಮೆಷಿನ್ ನಲ್ಲಿ.
  11. BMT WBM Ltd. ಸ್ಪ್ರಿಂಗ್ ಹಿಲ್, ಕ್ವಿನ್ಸ್‌ಲೆಂಡ್‌. "TUFLOW ಪ್ರವಾಹ ಮತ್ತು ಟೈಡ್ ಸಿಮ್ಯುಲೇಷನ್ ಸಾಪ್ಟವೇರ್‌."
  12. ಕ್ಯಾಬಿನೆಟ್ ಆಫೀಸ್, UK. " Archived 2010-08-07 at the UK Government Web Archiveಪಿಟ್ ರಿವ್ಯೂ: ಲೆಸನ್ಸ್‌ ಲರ್ನ್ಡ್ ಫ್ರಮ್ ದಿ 2007 ಫ್ಲಡ್ಸ್‌." Archived 2010-08-07 at the UK Government Web Archive ಜೂನ್ 2008.
  13. "ಇತಿಹಾಸದಲ್ಲಿ ನಡೆದ ಅತಿ ಕೆಟ್ಟ ಸ್ವಾಭಾವಿಕ ದುರಂತಗಳು". Archived from the original on 2008-04-21. Retrieved 2009-11-12.


ಹೊರಗಿನ ಕೊಂಡಿಗಳು

ಬದಲಾಯಿಸಿ
"https://kn.wikipedia.org/w/index.php?title=ಪ್ರವಾಹ&oldid=1198697" ಇಂದ ಪಡೆಯಲ್ಪಟ್ಟಿದೆ
  NODES