ವಚನ ಸಾಹಿತ್ಯ

(ವಚನಗಳು ಇಂದ ಪುನರ್ನಿರ್ದೇಶಿತ)

ಸಮಗ್ರ ವಚನ ಸಾಹಿತ್ಯ ಕನ್ನಡದ ಸಾಹಿತ್ಯದ ಪ್ರಮುಖ ಪ್ರಕಾರಗಳಲ್ಲಿ ಒಂದು. ೧೧ನೇ ಶತಮಾನದ ಉತ್ತರಾರ್ಧದಲ್ಲಿ ಉದಯಿಸಿ ೧೨ನೇ ಶತಮಾನದ ಕಡೆಯವರೆಗೂ ಬಸವಣ್ಣನವರ-ಜನಸಾಮಾನ್ಯರ ಆಂದೋಲನದ ಭಾಗವಾಗಿ ಬೆಳೆದು ಬಂತು. ಇದು ಸಾಹಿತ್ಯ ಪರಿಭಾಷೆಯ ಒಂದು ವಿಶಿಷ್ಟ ಸಾಹಿತ್ಯ ಪ್ರಕಾರದ ಕಾವ್ಯ. ಹಾಡಿದರೆ ಹಾಡಾಗುವ, ಓದಿದರೆ ಗದ್ಯವಾಗುವ ಕನ್ನಡದ ವಿಶೇಷ ಕಾವ್ಯ ಪ್ರಕಾರ. ವಚನ ಸಾಹಿತ್ಯವು ತನ್ನ ಕಾಲದಲ್ಲಿನ ಜನರ ಮನೋಭಿವ್ಯಕ್ತಿಗೆ ಸಂಗಾತಿಯಾಯಿತು.ವಚನ ಎಂದರೆ 'ಪ್ರಮಾಣ', 'ಕೊಟ್ಟ ಮಾತು' ಎಂದರ್ಥ.

ಇತಿಹಾಸ

೧೧ನೇ ಶತಮಾನದಲ್ಲಿ ಉದಯಿಸಿದ ಧರ್ಮ ಪ್ರೇರಿತ ಸಾಹಿತ್ಯವಾದ ವಚನವು, ಕನ್ನಡದ ಪ್ರಾಚೀನ ಸಾಹಿತ್ಯದಡಿಯಲ್ಲಿ ವರ್ಗಾಯಿಸಲ್ಪಟ್ಟಿದೆ. ಸ್ವಂತಿಕೆಯಿಂದ ಮೆರೆವ ವಚನಗಳು ಕನ್ನಡ ಸಾಹಿತ್ಯದಲ್ಲಿ ಪ್ರಭಾವಶಾಲಿ ಆತ್ಮವಿಮರ್ಶೆಯ ಮಾಧ್ಯಮವಾಗಿ ಸ್ವತಂತ್ರವಾಗಿ ಬೆಳೆದು ವಿಜೃಂಭಿಸಿ ಮುಂದಿನ ಸಾಹಿತ್ಯ ಪರಂಪರೆಗಳ ಮೇಲೆ ಪ್ರಭಾವ ಬೀರಿ ವಿಶ್ವಸಾಹಿತ್ಯದಲ್ಲೂ ಒಂದು ಅವಿಭಾಜ್ಯ ಅಂಗವಾಗಿ ಉಳಿದಿದೆ. ವಚನ ಸಾಹಿತ್ಯವನ್ನು, ವಚನಗುರು ದೇವರ ಜೇಡರ ದಾಸಿಮಯ್ಯ, ಮಾದಾರ ಚೆನ್ನಯ್ಯ ನವರ ಆದಿಯಾಗಿ ಗುರು ಬಸವಣ್ಣನವರು ಮತ್ತು ಅವರ ಸಮಕಾಲೀನ ಶರಣರು ನೀಡಿದರು.

ವಚನಗುರು ಮಾದಾರ ಚನ್ನಯ್ಯ ರವರು ೧೦ ರಿಂದ ೧೧ನೇ ಶತಮಾನದ ಬಸವ ಪೂರ್ವ ಯುಗ ದಲ್ಲಿಯೇ ಇದ್ದರು ಎಂದು ಸಂಶೋಧನೆಗಳ ಮೂಲಕ ತಿಳಿದುಬಂದಿದೆ. ಶಿವಮೊಗ್ಗ ಜಿಲ್ಲೆಯ ಬಿಳಿಗಾವಲು ಗ್ರಾಮದಲ್ಲಿ ಜನಿಸಿದ್ದರು ಎನ್ನಲಾಗಿದೆ. ಇವರು ರಚಿಸಿದ ಹಲವು ವಚನಗಳಲ್ಲಿ ೧೦ ವಚನಗಳು ಮಾತ್ರ ಲಭ್ಯವಾಗಿದೆ. ಮಾದಾರ ಚನ್ನಯ್ಯ ನವರು ವಚನಕಾರರಲ್ಲಿಯೇ ಮೊದಲಿಗರು ಎಂದು ತಿಳಿಯಲು ಜೇಡರ ದಾಸಿಮಯ್ಯ ತಮ್ಮ ವಚನಗಳಲ್ಲಿ ಸ್ಮರಿಸಿರುವುದನ್ನು ಕಾಣಬಹುದಾಗಿದೆ.

ಪರಿಣಾಮ

ಸಮಾಜದ ಎಲ್ಲಾ ಜಾತಿಯವರೂ ವಚನಗಳನ್ನು ಮುಖ್ಯ ಮಾಧ್ಯಮವನ್ನಾಗಿ ಮಾಡಿಕೊಂಡು, ತಮ್ಮ ಅನುಭವಗಳನ್ನು ಹೇಳಿಕೊಳ್ಳತೊಡಗಿದ್ದರಿಂದ ವಚನ ಸಾಹಿತ್ಯ ಒಂದು ಚಳವಳಿಯೂ ಆಯಿತು. ಬಂಡಾಯ ಸಾಹಿತ್ಯಕ್ಕಿಂತ ಮೊದಲು ಕನ್ನಡ ನಾಡಿನಲ್ಲಿ ವಚನವು ಒಂದು ಮುಖ್ಯ ಚಳುವಳಿಯಾಗಿತ್ತು ಮುಖವಾಣಿಯಾಗಿತ್ತೆಂದರೆ ಅದರ ಸಾಮಾಜಿಕ ವ್ಯಾಪಕತೆ ಅಪಾರವಾದುದೆಂಬುದು ಅರಿವಿಗೆ ಬಾರದೆ ಇರದು. ವಚನಗಳು ಅತ್ಯಂತ ಸರಳ ಹಾಗೂ ನೇರವಾಗಿ ದೇಸಿಯ ಸೊಗಡಿನಿಂದ ಸೊಬಗಿನಿಂದ ಕೂಡಿವೆ. ಹಲವಾರು ಕವಿಗಳು, ಮಠಾಧೀಶರು ಲಿಂಗಾಯತ ಸಿದ್ಧಾಂತವನ್ನು ಅಳವಡಿಸಿ ಸಾಹಿತ್ಯ ರಚಿಸಿದರು , ಇಡೀ ಲಿಂಗಾಯತ ಸಾಹಿತ್ಯದಲ್ಲಿ ಮುಖ್ಯ ಮತ್ತು ಅಪರೂಪದ ಅಭಿವ್ಯಕ್ತಿಯೆಂದರೆ ಅದು ವಚನ ಸಾಹಿತ್ಯ. ಅದು ಸ್ಥಾವರ ಸಮಾಜವನ್ನು ತಿರಸ್ಕರಿಸಿ ಜಂಗಮ ಸಮಾಜವನ್ನು ನಂಬಿದ ಬಹಳ ದೊಡ್ಡ ಮಾನವೀಯ ಮೌಲ್ಯ. ಕಾಯಕ ಮತ್ತು ದಾಸೋಹಗಳ ಮೂಲಕ ಸಮಾಜೋತ್ಪನ್ನಗಳ ಸಮಪಾಲು ಸಿದ್ಧಾಂತವನ್ನು ಮಂಡಿಸುವ ಈ ಚಳವಳಿ ಭಾರತೀಯ ಸಂಸ್ಕೃತಿಯಲ್ಲೇ ಅತಿ ಪ್ರಮುಖವಾದುದು.

ಪ್ರಮುಖ ವಚನಕಾರರು

ವಚನ ಸಾಹಿತ್ಯದ ಶ್ರೀಮಂತಿಕೆಗೆ ನೂರಾರು ಜನ ಶರಣರು ಶ್ರಮಿಸಿದ್ದಾರೆ. ತಮ್ಮ ವಚನಗಳಲ್ಲಿ ತಮ್ಮದೇ ಆದ ಅಂಕಿತನಾಮಗಳನ್ನು ಬಳಸಿದ್ದಾರೆ. ದೇವರ ದಾಸಿಮಯ್ಯ 'ರಾಮನಾಥ' ಎಂದು ಬಳಸಿದರೆ, ಅಕ್ಕಮಹಾದೇವಿಯು 'ಚೆನ್ನಮಲ್ಲಿಕಾರ್ಜುನ' ಹಾಗೂ ಬಸವಣ್ಣನವರು 'ಕೂಡಲ ಸಂಗಮದೇವ' ಮತ್ತು ಎಂದು ಬಳಸಿದ್ದಾರೆ. ಮತ್ತಿತರ ಸುಪ್ರಸಿದ್ಧ ವಚನಕಾರರೆಂದರೆ:

  1. ಅಲ್ಲಮಪ್ರಭುದೇವರು
  2. ಅಂಬಿಗರ ಚೌಡಯ್ಯ
  3. ಮಾದಾರ ಚೆನ್ನಯ್ಯ
  4. ಸೂಳೆ ಸಂಕವ್ವೆ
  5. ಏಕಾಂತ ರಾಮಯ್ಯ
  6. ಹಡಪದ ಅಪ್ಪಣ್ಣ
  7. ಒಕ್ಕಲು ಮಾದಯ್ಯ
  8. ಮಡಿವಾಳ ಮಾಚಯ್ಯ
  9. ಆಯ್ದಕ್ಕಿ ಲಕ್ಕಮ
  10. ಹೆಂಡದ ಮಾರಯ್ಯ
  11. ಅಂಗಸೋಂಕಿನ ಲಿಂಗತಂದೆ
  12. ಅಂಬಿಗರ ಚೌಡಯ್ಯ
  13. ಡೋಹರ ಕಕ್ಕಯ್ಯ
  14. ಅಕ್ಕಮ್ಮ
  15. ಅಖಂಡ ಮಂಡಲೇಶ್ವರ
  16. ಅಗ್ಘವಣಿ ಹಂಪಯ್ಯ
  17. ಅಗ್ಘವಣಿ ಹೊನ್ನಯ್ಯ
  18. ಅಜಗಣ್ಣ ತಂದೆ
  19. ಅರಿವಿನ ಮಾರಿತಂದೆ
  20. ಅನುಗಲೇಶ್ವರ
  21. ಅನಾಮಿಕ ನಾಚಯ್ಯ
  22. ಅಪ್ರಮಾಣ ಗುಹೇಶ್ವರ
  23. ಅಪ್ಪಿದೇವಯ್ಯ
  24. ಅವಸರದ ರೇಕಣ್ಣ
  25. ಅಮರಗುಂಡದ ಮಲ್ಲಿಕಾರ್ಜುನ ತಂದೆ
  26. ಅಮುಗೆ ರಾಯಮ್ಮ
  27. ಅಮುಗಿದೇವಯ್ಯ
  28. ಅಶ್ವಥರಾಮ
  29. ಆಯ್ದಕ್ಕಿ ಮಾರಯ್ಯ
  30. ಆಯ್ದಕ್ಕಿ ಲಕ್ಕಮ್ಮ
  31. ಆದಯ್ಯ
  32. ಆನಂದ ಸಿದ್ಧೇಶ್ವರ
  33. ಆನಂದಯ್ಯ
  34. ಇಮ್ಮಡಿ ಮುರಿಘಾ ಗುರುಸಿದ್ಧ / ಗುರುಸಿದ್ಧಸ್ವಾಮಿ
  35. ಈಶ್ವರೀಯ ವರದ ಚೆನ್ನರಾಮ
  36. ಉಗ್ಘಡಿಸುವ ಗಬ್ಬಿದೇವಯ್ಯ
  37. ಉರಿಲಿಂಗದೇವ
  38. ಉರಿಲಿಂಗಪೆದ್ದಿ
  39. ಉರಿಲಿಂಗಪೆದ್ದಿಗಳ ಪುಣ್ಯಸ್ತ್ರೀ ಕಾಳವ್ವೆ
  40. ಉಪ್ಪರಗುಡಿಯ ಸೋಮಿದೇವಯ್ಯ
  41. ಉಳಿಯುಮೇಶ್ವರ ಚಿಕ್ಕಣ್ಣ
  42. ಎಚ್ಚರಿಕೆ ಕಾಯಕದ ಮುಕ್ತನಾಥಯ್ಯ
  43. ಎಡೆಮಠದ ನಾಗಿದೇವಯ್ಯಗಳ ಪುಣ್ಯಸ್ತ್ರೀ ಮಸಣಮ್ಮ
  44. ಎಲೆಗಾರ ಕಾಮಣ್ಣ
  45. ಏಕಾಂತ ವೀರಸೊಡ್ಡಳ
  46. ಏಕಾಂತರಾಮಿತಂದೆ
  47. ಏಕೋರಾಮೇಶ್ವರ ಲಿಂಗ
  48. ಏಲೇಶ್ವರ ಕೇತಯ್ಯ
  49. ಒಕ್ಕಲಿಗ ಮುದ್ದಣ್ಣ
  50. ಕಂಬದ ಮಾರಿತಂದೆ
  51. ಕರಸ್ಥಲದ ಮಲ್ಲಿಕಾರ್ಜುನೊಡೆಯ
  52. ಕರುಳ ಕೇತಯ್ಯ
  53. ಕದಿರಕಾಯಕದ ಕಾಳವ್ವೆ
  54. ಕದಿರರೆಮ್ಮವ್ವೆ
  55. ಕನ್ನಡಿಕಾಯಕದ ಅಮ್ಮಿದೇವಯ್ಯ
  56. ಕನ್ನಡಿಕಾಯಕದ ರೇಮಮ್ಮ
  57. ಕನ್ನಡ ಮಾರಿತಂದೆ
  58. ಕಲಕೇತಯ್ಯ
  59. ಕಲ್ಲಯ್ಯದೇವರು
  60. ಕುರಂಗಲಿಂಗ
  61. ಕುರಂಗೇಶ್ವರಲಿಂಗ
  62. ಕುಷ್ಟಗಿ ಕರಿಬಸವೇಶ್ವರ
  63. ಕೂಗಿನ ಮಾರಯ್ಯ
  64. ಕೂಡಲಸಂಗಮೇಶ್ವರ
  65. ಕಾಟಕೂಟಯ್ಯಗಳ ಪುಣ್ಯಸ್ತ್ರೀ ರೇಚವ್ವೆ
  66. ಕಾಡಸಿದ್ಧೇಶ್ವರ
  67. ಕಾಮಾಟದ ಭೀಮಣ್ಣ
  68. ಕಾಲಕಣ್ಣಿಯ ಕಾಮಮ್ಮ
  69. ಕೊಂಡೆಮಂಚಣ್ಣಗಳ ಪುಣ್ಯಸ್ತ್ರೀ ಲಕ್ಷ್ಮಮ್ಮ
  70. ಕೊಟ್ಟಣದ ಸೋಮಮ್ಮ
  71. ಕೊಟಾರದ ಸೋಮಣ್ಣ
  72. ಕೋಲ ಶಾಂತಯ್ಯ
  73. ಕಿನ್ನರಿ ಬ್ರಹ್ಮಯ್ಯ
  74. ಕೀಲಾರದ ಭೀಮಣ್ಣ
  75. ಗಂಗಾಂಬಿಕೆ
  76. ಗಜೇಶ ಮಸಣಯ್ಯ
  77. ಗಜೇಶಮಸಣಯ್ಯದ ಪುಣ್ಯಸ್ತ್ರೀ
  78. ಗಣದಾಸಿ ವೀರಣ್ಣ
  79. ಗುಂಡಯ್ಯಗಳ ಪುಣ್ಯಸ್ತ್ರೀ ಕೇತಲದೇವಿ
  80. ಗುರು ವಿಶ್ವೇಶ್ವರಾ
  81. ಗುರುಪುರದ ಮಲ್ಲಯ್ಯ
  82. ಗುರುಬಸವೇಶ್ವರ
  83. ಮೋಳಿಗೆ ಮಾರಯ್ಯ

ವಚನಗಳು

ಅಲ್ಲಮ ಪ್ರಭುಗಳ ವಚನದ ಒಂದು ಸಣ್ಣ ತುಣುಕು ಹೀಗಿದೆ:

ಹೊನ್ನು ಮಾಯೆ ಎಂಬರು
ಹೆಣ್ಣು ಮಾಯೆ ಎಂಬರು
ಮಣ್ಣು ಮಾಯೆ ಎಂಬರು
ಹೊನ್ನು ಮಾಯೆಯಲ್ಲ
ಹೆಣ್ಣು ಮಾಯೆಯಲ್ಲ
ಮಣ್ಣು ಮಾಯೆಯಲ್ಲ
ಮನದ ಮುಂದಣ ಆಶೆಯೇ ಮಾಯೆ ಕಾಣ ಗುಹೇಶ್ವರ ||

ಸಂಕೀರ್ಣ ವ್ಯಕ್ತಿತ್ವವನ್ನು ಪಡೆದು ಬಾಳಿದ ಮಹಾಯೋಗಿಯಾದ ಪ್ರಭುಗಳ ಅನುಭವದ ತೀವ್ರತೆಯು ತಮ್ಮ ಈ ಸಣ್ಣ ವಚನ ಸಾರಿ ಹೇಳುತ್ತದೆ.


ಸಾವನ್ನಕ್ಕ ಸರಸ ಮಾಡಿದರೆ
ಇನ್ನುಕಾಣದುವ ದಿನವಾವುದು?
ಬಾಳುವನ್ನಕ್ಕರ ಭಜಿಸುತ್ತಿದ್ದರೆ
ತಾನಹ ದಿನವಾವುದು?
ಅರ್ಥವುಳ್ಳನ್ನಕ್ಕರ ಅರಿವುತ್ತಿದ್ದರೆ
ನಿಜವನೈದುವ್ ದಿನವಾವುದು?
ಕಾರ್ಯಕ್ಕೆ ಬಂದು ಕಾರ್ಯ
ಕೈಸಾರಿದ ಬಳಿಕ ಇನ್ನು
ಮರ್ತ್ಯಲೋಕದ ಹಂಗೇಕೆ?

ಬಾಹ್ಯ ಸಂಪರ್ಕಗಳು

 
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ:
  NODES
languages 1