ಸೊಂಟ

ಪಕ್ಕೆಗೂಡು ಮತ್ತು ನಿತಂಬಗಳ ನಡುವಿನ ಉದರದ ಭಾಗ

ಸೊಂಟ ಎಂದರೆ ಪಕ್ಕೆಗೂಡು ಮತ್ತು ನಿತಂಬಗಳ ನಡುವಿನ ಉದರದ ಭಾಗ. ತೆಳ್ಳನೆಯ ದೇಹವಿರುವ ವ್ಯಕ್ತಿಗಳಲ್ಲಿ, ಸೊಂಟವು ಮುಂಡದ ಅತ್ಯಂತ ಕಿರಿದಾದ ಭಾಗವಾಗಿರುತ್ತದೆ. ಸೊಂಟದ ಸುತ್ತು ಪದವು ಸೊಂಟವು ಅತ್ಯಂತ ಕಿರಿದಾಗಿರುವ ಅಡ್ಡಗೆರೆಯನ್ನು, ಅಥವಾ ಸೊಂಟದ ಸಾಮಾನ್ಯ ನೋಟವನ್ನು ಸೂಚಿಸುತ್ತದೆ. ಈ ಕಾರಣದಿಂದ ಮತ್ತು ಸೊಂಟ ಪದವು ಹಲವುವೇಳೆ ಹೊಟ್ಟೆ ಪದದೊಂದಿಗೆ ಸಮಾನಾರ್ಥಕವಾಗಿರುವುದರಿಂದ, ಒಬ್ಬರು ಸೊಂಟದ ನಿಖರ ಸ್ಥಳದ ಬಗ್ಗೆ ಗೊಂದಲಗೊಳ್ಳಬಹುದು. ಸೊಂಟದ ಸುತ್ತು ವಿಭಿನ್ನ ಜನರಲ್ಲಿ ಭಿನ್ನವಾಗಿರುವುದು ಮತ್ತೊಂದು ಗೊಂದಲಗೊಳಿಸುವ ಅಂಶವಾಗಿದೆ. ಸಹಜ ಸೊಂಟದ ಸುತ್ತನ್ನು ಗುರುತಿಸಲು, ಒಬ್ಬರು ಕೇವಲ ನೆಟ್ಟಗೆ ನಿಂತು ನಂತರ ಕಾಲುಗಳು ಮತ್ತು ನಿತಂಬಗಳನ್ನು ನೇರವಾಗಿಟ್ಟು ಪಕ್ಕಕ್ಕೆ ಬಾಗಬೇಕಾಗುತ್ತದೆ. ಮುಂಡವು ಎಲ್ಲಿ ನೆರಿಗೆ ಆಗುತ್ತದೆಯೊ ಅದೇ ಸಹಜ ಸೊಂಟದ ಸುತ್ತು ಆಗಿರುತ್ತದೆ.

ಸೊಂಟ

ಕಟ್ಟುನಿಟ್ಟಾಗಿ, ಸೊಂಟದ ಸುತ್ತಳತೆಯನ್ನು ಅತ್ಯಂತ ಕೆಳಗಿನ ಪಕ್ಕೆಲುಬು ಮತ್ತು ಕಟ್ಯಸ್ಥಿ ಶಿಖರದ ನಡುವಿನ ಮಧ್ಯದ ಮಟ್ಟದಲ್ಲಿ ಅಳೆಯಲಾಗುತ್ತದೆ.[] ಮಾನವಮಾಪನದಲ್ಲಿ ಹೆಚ್ಚಿನ ಪ್ರಸ್ತುತತೆಯ ಪರ್ಯಾಯ ಅಂದಾಜೆಂದರೆ ಬೆನ್ನಿನ ಕಿರಿದಾದ ಭಾಗ + ೨ ಸೆ.ಮಿ. ಮಾನವಮಾಪನದಲ್ಲಿ, ಸೊಂಟದ ಸ್ಥಳವನ್ನು ಕುತ್ತಿಗೆಯ ಎತ್ತರದ ಶೇಕಡ ೭೨ ಎಂದು ಊಹಿಸಬಹುದು, ಅಥವಾ ಕಟ್ಯಸ್ಥಿ ಶಿಖರ (ಒಟ್ಟು ಎತ್ತರದ ಶೇಕಡ ೬೦ರಷ್ಟು) ಮತ್ತು ಅತ್ಯಂತ ಕೆಳಗಿನ ಸ್ಪರ್ಶಿಸಬಲ್ಲ ಪಕ್ಕೆಲುಬು (ಒಟ್ಟು ಎತ್ತರದ ಶೇಕಡ ೬೪ರಷ್ಟು) ಎಂದು ಊಹಿಸಬಹುದು.

ಸೊಂಟ-ನಿತಂಬದ ಅನುಪಾತವು ಸೊಂಟದ ಸುತ್ತಳತೆಯನ್ನು ನಿತಂಬದ ಸುತ್ತಳತೆಯಿಂದ ಭಾಗಿಸಿದಾಗ ಬರುವ ಲಬ್ಧಕ್ಕೆ ಸಮವಾಗಿರುತ್ತದೆ. ಆದರೆ, ಪ್ರಾಯೋಗಿಕವಾಗಿ, ಸೊಂಟವನ್ನು ಸಾಮಾನ್ಯವಾಗಿ ಸಹಜ ಸೊಂಟದ ಅತ್ಯಂತ ಸಣ್ಣ ಸುತ್ತಳತೆಯಲ್ಲಿ ಅಳೆಯಲಾಗುತ್ತದೆ, ಸಾಮಾನ್ಯವಾಗಿ ಮಹಿಳೆಯರಿಗೆ ಹೊಕ್ಕಳಿನ ಸ್ವಲ್ಪ ಮೇಲೆ ಮತ್ತು ಪುರುಷರಿಗೆ ಹೊಕ್ಕಳಿನ ಸ್ವಲ್ಪ ಕೆಳಗೆ. ಸೊಂಟವು ನಿಮ್ನವಾಗಿರುವುದರ ಬದಲು ಪೀನವಾಗಿದ್ದರೆ, ಉದಾಹರಣೆಗೆ ಗರ್ಭಾವಸ್ಥೆಯಲ್ಲಿ ಅಥವಾ ಸ್ಥೂಲಕಾಯತೆಯಲ್ಲಿ, ಸೊಂಟವನ್ನು ಹೊಕ್ಕಳದ ಮೇಲೆ ಲಂಬ ಮಟ್ಟದಲ್ಲಿ ೧ ಇಂಚು ಮೇಲೆ ಅಳೆಯಬಹುದು. ಭಂಗಿ/ನಿಲುವಿನಂತಹ ಚರಗಳು ಗಣನೀಯವಾಗಿ ಸೊಂಟದ ಅಳತೆಯ ಮೇಲೆ ಪ್ರಭಾವ ಬೀರುತ್ತವೆ ಎಂದು ಗಮನಿಸುವುದು ಮುಖ್ಯವಾಗಿದೆ, ಮತ್ತು ಹಾಗಾಗಿ ಒಂದು ಗುಂಪಿಗೆ ನಡೆಸಲಾಗುವ ಯಾವುದೇ ಅಳತೆಗಳು ವ್ಯಕ್ತಿಗಳ ನಡುವೆ ಸ್ಥಿರ ಭಂಗಿಯನ್ನು ಕಾಪಾಡಿಕೊಳ್ಳಬೇಕಾಗುತ್ತದೆ.

ಉಲ್ಲೇಖಗಳು

ಬದಲಾಯಿಸಿ
  1. [೧] Han, T.; Van Leer, E.; Seidell, J.; Lean, M. (1995). "Waist circumference action levels in the identification of cardiovascular risk factors: prevalence study in a random sample". BMJ (Clinical research ed.). 311 (7017): 1401–1405. doi:10.1136/bmj.311.7017.1401. PMC 2544423. PMID 8520275.
"https://kn.wikipedia.org/w/index.php?title=ಸೊಂಟ&oldid=846273" ಇಂದ ಪಡೆಯಲ್ಪಟ್ಟಿದೆ
  NODES