ಹುಳು

ಕೈ ಅಥವಾ ಕಣ್ಣುಗಳನ್ನು ಹೊಂದಿಲ್ಲದ ಉದ್ದನೆಯ ಕೊಳವೆಯಾಕಾರದ ಪ್ರಾಣಿ

ಹುಳು (ಜಂತು, ಕ್ರಿಮಿ) ಪದವು ಸಾಮಾನ್ಯವಾಗಿ ಉದ್ದ, ಉರುಳೆಯಾಕಾರದ ಕೊಳವೆಯಂಥ ಶರೀರವನ್ನು ಹೊಂದಿರುವ ಮತ್ತು ಅವಯವಗಳಿರದ ಅನೇಕ ಭಿನ್ನ, ದೂರದ ಸಂಬಂಧವಿರುವ ಪ್ರಾಣಿಗಳನ್ನು ಸೂಚಿಸುತ್ತದೆ. ಹುಳುಗಳು ಗಾತ್ರದಲ್ಲಿ ಬಹಳ ಚಿಕ್ಕ ಗಾತ್ರದಿಂದ ಹಿಡಿದು ೧ ಮೀಟರ್‌ಗಿಂತ ಹೆಚ್ಚು ಉದ್ದದವರೆಗೆ ಬದಲಾಗುತ್ತವೆ (ಉದಾ. ಕಡಲ ಪಾಲಿಕೀಟ್ ಹುಳುಗಳು (ಬ್ರಿಸಲ್‍ವರ್ಮ್), ೬.೭ ಮೀಟರ್ ಉದ್ದದ ಆಫ಼್ರಿಕನ್ ದೈತ್ಯ ಎರೆಹುಳು ಮೈಕ್ರೊಕೀಟಸ್ ರಾಪಿ[] ಮತ್ತು ೫೮ ಮೀಟರ್ ಉದ್ದದ ಕಡಲ ನೆಮರ್ಟಿಯನ್ ಹುಳುವಾದ ಬೂಟ್‍ಲೇಸ್ ವರ್ಮ್, ಲಿನೀಯಸ್ ಲಾಂಜಿಸಿಮಸ್). ವಿವಿಧ ಪ್ರಕಾರಗಳ ಹುಳುಗಳು ಸಣ್ಣ ವೈವಿಧ್ಯದ ಪರಜೀವಿ ನೆಲೆಗಳನ್ನು ಆಕ್ರಮಿಸುತ್ತವೆ, ಅಂದರೆ ಇತರ ಪ್ರಾಣಿಗಳ ದೇಹಗಳಲ್ಲಿ ಜೀವಿಸುತ್ತವೆ. ಮುಕ್ತವಾಗಿ ವಾಸಿಸುವ ಹುಳುಗಳ ಜಾತಿಗಳು ನೆಲದ ಮೇಲೆ ಇರುವುದಿಲ್ಲ, ಬದಲಾಗಿ ಕಡಲ ಅಥವಾ ಸಿಹಿನೀರು ಪರಿಸರಗಳು, ಅಥವಾ ನೆಲದಡಿ ಬಿಲತೋಡಿ ವಾಸಿಸುತ್ತವೆ.

ಎರೆಹುಳು

ಉಲ್ಲೇಖಗಳು

ಬದಲಾಯಿಸಿ
  1. Keely Parrack (21 June 2005) "The Mighty Worm". Worm Digest.


"https://kn.wikipedia.org/w/index.php?title=ಹುಳು&oldid=892443" ಇಂದ ಪಡೆಯಲ್ಪಟ್ಟಿದೆ
  NODES