ಅಂತರಜಾಲ

ಕಂಪ್ಯೂಟರ್‍ಗೆ ಅಳವಡಿಸುವ ಜಾಗತಿಕ ವ್ಯವಸ್ಥೆ

ಅಂತರಜಾಲ (ಆಂಗ್ಲ: Internet ಇಂಟರ್‌ನೆಟ್) ಎನ್ನುವುದು ಕಂಪ್ಯೂಟರ್ ನೆಟ್‌ವರ್ಕ್‌ಗಳ (ಜಾಲಬಂಧಗಳ) ಒಂದು ನೆಟ್‌ವರ್ಕ್‌ ಆಗಿದೆ. ಇದು ವಿಶ್ವವ್ಯಾಪಕವಾಗಿದ್ದು ಮಿಲಿಯಗಟ್ಟಲೆ ಸಂಖ್ಯೆಯ ಸ್ಥಳೀಯ ಹಾಗೂ ಅಂತರಾಷ್ಟ್ರೀಯ ಕಂಪ್ಯೂಟರ್ ನೆಟ್‌ವರ್ಕ್‌ಗಳ ನಡುವೆ ಪರಸ್ಪರ ಸಂಪರ್ಕ ಕಲ್ಪಿಸುತ್ತದೆ.

ಅಂತರಜಾಲದ ನಕ್ಷೆ (ಕಾಲ್ಪನಿಕ)

ಇಂಟರ್‌ನೆಟ್ ಅಥವಾ ಅಂತರಜಾಲ ಕ್ರಿ.ಶ ೧೯೭೦ರ ದಶಕದಲ್ಲಿ ಯು.ಎಸ್.ಎ ಯಲ್ಲಿ ರಚನೆಯಾಯಿತು. ಆದರೆ ಅದು ಜನಸಾಮಾನ್ಯರಿಗೆ ಗೋಚರವಾಗಿದ್ದು ೧೯೯೦ರ ದಶಕದಲ್ಲಿ.

ರಚನಾ ವ್ಯವಸ್ಥೆ

ಬದಲಾಯಿಸಿ
  • ಅಂತರಜಾಲವನ್ನು, ಅಂತರಜಾಲದ ಪರಿಕಲ್ಪನೆ ಹಾಗು ತಂತ್ರಜ್ಞಾನಗಳನ್ನು ಬಳಸಿಕೊಂಡು ನಿರ್ಮಿಸಲಾಗುತ್ತದೆ. ಉದಾಹರಣೆಗೆ ಕ್ಲೈಂಟ್-ಸರ್ವರ್ ಗ್ರಾಹಕ ಸೇವಾ ಪರಿಕರ ಕಂಪ್ಯೂಟಿಂಗ್ ಹಾಗು ಇಂಟರ್ನೆಟ್ ಪ್ರೋಟೋಕಾಲ್ ಸೂಟ್(TCP/IP)ಅಂತರಜಾಲ ನಿಯಮಗಳ ಬಳಕೆ ಮಾಡಲಾಗುತ್ತದೆ.ಯಾವುದೇ ಒಂದು ಜನಪ್ರಿಯ ಇಂಟರ್ನೆಟ್ ಪ್ರೋಟೋಕಾಲ್ ಗಳನ್ನೂ ಒಂದು ಅಂತರಜಾಲದಲ್ಲಿ ಪತ್ತೆ ಮಾಡಬಹುದು.
  • ಉದಾಹರಣೆಗೆ HTTP(ಜಾಲ ಸೇವೆಗಳು), SMTP(ಇ-ಮೇಲ್), ಹಾಗು FTP(ಫೈಲ್ ವರ್ಗಾವಣೆ). ಅಂತರಜಾಲ ಮಾಹಿತಿಗಳು ಸಾಮಾನ್ಯವಾಗಿ ತಾಂತ್ರಿಕ ಮಾಹಿತಿಯ ದತ್ತಾಂಶವನ್ನು ಹೊಂದಿರುತ್ತವೆ. ಆಧುನಿಕ ಮಾಹಿತಿ ವ್ಯವಸ್ಥೆಗಳಿಗೆ ಕಾರ್ಪೊರೇಟ್ ವಿವರವನ್ನು ಮುಖಾಮುಖಿ ಯಾಗಿ,ಆಧುನಿಕ ಇಂಟರ್ ಫೇಸ್ ಒದಗಿಸುತ್ತದೆ.
  • ಅಂತರಜಾಲವನ್ನು, ಅಂತರಜಾಲದ ಒಂದು ಖಾಸಗಿ ಆನ್ಯಲಾಗ್(ಸದೃಶವಾದ ವಸ್ತು) ಎಂದು ಅರ್ಥೈಸಿಕೊಳ್ಳಬಹುದು,ಅಥವಾ ಒಂದು ಸಂಸ್ಥೆಗೆ ಸೀಮಿತ ಅಂತರಜಾಲದ ಒಂದು ಖಾಸಗಿ ವಿಸ್ತರಣೆಯೆಂದು ಪರಿಗಣಿಸಬಹುದು. ಮೊದಲ ಬಾರಿಗೆ ಅಂತರಜಾಲ ವೆಬ್ಸೈಟ್ ಗಳು ಹಾಗು ಹೋಂ ಪೇಜಸ್ ಗಳು ೧೯೯೦-೧೯೯೧ ರಲ್ಲಿ ಆಯಾ ಸಂಸ್ಥೆಗಳಲ್ಲಿ, ಕಂಡುಬಂದವು.
  • ಅಧಿಕೃತವಾಗಿ ಗುರುತಿಸಲಾಗಿರದಿದ್ದರೂ, ೧೯೯೨ರಲ್ಲಿ ಅಂತರಜಾಲ ಎಂಬ ಪದವು ಮೊದಲು ಅಳವಡಿಸಿಕೊಂಡವರಲ್ಲಿ ಹೆಚ್ಚಿನ ಪ್ರಾಶಸ್ತ್ಯ ಪಡೆಯಿತು. ಉದಾಹರಣೆಗೆ ವಿಶ್ವವಿದ್ಯಾಲಯಗಳು ಹಾಗು ತಂತ್ರಜ್ಞಾನ ಸಂಸ್ಥೆಗಳು.(Dubious|date=October 2009) ಅಂತರಜಾಲಗಳನ್ನು ಎಕ್ಸಟ್ರಾನೆಟ್ ಗಳೊಂದಿಗೂ ಸಹ ವಿರುದ್ದಾರ್ಥಕವಾಗಿ ಬಳಸಲಾಗುತ್ತದೆ.
  • ಅಂತರಜಾಲಗಳು ಸಾಧಾರಣವಾಗಿ ಸಂಸ್ಥೆಯ ನೌಕರರಿಗೆ ಮಾತ್ರ ಸೀಮಿತವಾಗಿದ್ದರೆ, ಎಕ್ಸ್ಟ್ರಾನೆಟ್ ಗಳನ್ನು ಗ್ರಾಹಕರು, ಸರಬರಾಜುದಾರರು, ಅಥವಾ ಇತರ ಅಂಗೀಕೃತ ಗುಂಪುಗಳೂ ಸಹ ಬಳಕೆಮಾಡಬಹುದು. ಎಕ್ಸ್ಟ್ರಾನೆಟ್ ಗಳು, ಅದಕ್ಕೆ ಆಕ್ಸೆಸ್(ಪ್ರವೇಶ), ಆಥರೈಸೇಶನ್ (ಪ್ರಮಾಣೀಕರಣ), ಹಾಗು ಅಥೆಂಟಿಕೆಶನ್(ದೃಢೀಕರಣ)ದಂತಹ (AAA ಪ್ರೋಟೋಕಾಲ್)ವಿಶೇಷ ಸೌಕರ್ಯವನ್ನು ಅಂತರಜಾಲದ ಮೂಲಕ ಖಾಸಗಿ ನೆಟ್ವರ್ಕ್ ಗೆ ವಿಸ್ತರಿಸುತ್ತವೆ.
  • ಅಂತರಜಾಲಗಳು, ಅಂತರಜಾಲಕ್ಕೆ ಫೈರ್ ವಾಲ್ (ಸಾಫ್ಟ್ವೇರ್ ಮತ್ತು ಹಾರ್ಡ್ ವೇರ್)ನೊಂದಿಗೆ ನೆಟ್ವರ್ಕ್ ಪ್ರವೇಶವನ್ನು ಒದಗಿಸುತ್ತವೆ. ಈ ಮೂಲಕ ಬಾಹ್ಯ, ಅನಧಿಕೃತ ಪ್ರವೇಶದಿಂದ ಅಂತರಜಾಲಕ್ಕೆ ರಕ್ಷಣೆ ಒದಗಿಸುತ್ತವೆ. ಸಾಮಾನ್ಯವಾಗಿ ಪ್ರವೇಶಗಳೂ ಸಹ ಬಳಕೆದಾರನ ದೃಢೀಕರಣ, ಸಂದೇಶಗಳ ಗೋಪ್ಯತೆ ಹಾಗು ಸಾಮಾನ್ಯವಾಗಿ ವರ್ಚ್ಯುವಲ್ ಪ್ರೈವೇಟ್ ನೆಟ್ವರ್ಕ್(VPN) ಕನೆಕ್ಟಿವಿಟಿಯನ್ನು ಕಂಪನಿಯ ಬಗ್ಗೆ ಮಾಹಿತಿ, ಕಂಪ್ಯೂಟರ್ ಸಾಧನಗಳು ಹಾಗು ಆಂತರಿಕ ಸಂವಹನಕ್ಕೆ ಪ್ರವೇಶದ ಅಧಿಕಾರವನ್ನು ಬಾಹ್ಯ ನೌಕರವರ್ಗಕ್ಕೆ ನೀಡುವುದರ ಮೂಲಕ ನಿರ್ವಹಣೆ ಮಾಡುತ್ತವೆ.

ಉಪಯೋಗಗಳು

ಬದಲಾಯಿಸಿ
  • ಹೆಚ್ಚಾಗಿ, ಅಂತರಜಾಲಗಳನ್ನು ಸಾಧನೋಪಕರಣ ಹಾಗು ಅಳವಡಿಕೆಗಳನ್ನು ವಿತರಿಸಲು ಬಳಸಲಾಗುತ್ತದೆ. ಉದಾಹರಣೆಗೆ: ಸಹಯೋಗ(ಗುಂಪುಗಳಲ್ಲಿ ಹಾಗು ದೂರವಾಣಿ ಮೂಲಕ ಸಮಾಲೋಚನೆ ಮಾಡುವವರಿಗೆ ಅನುಕೂಲ ಒದಗಿಸುವುದು) ಅಥವಾ ಅತ್ಯಾಧುನಿಕ ಕಾರ್ಪೋರೇಟ್ ನಿರ್ದೇಶಿಕೆಗಳು, ಮಾರಾಟಗಾರ ಹಾಗು ಗ್ರಾಹಕ ಸಂಬಂಧಿತ ನಿರ್ವಹಣಾ ಸಾಧನಗಳು, ಯೋಜನಾ ನಿರ್ವಹಣೆ ಮುಂತಾದವುಗಳನ್ನು ಉತ್ಪಾದಕತೆ ಹೆಚ್ಚಿಸಲು ಬಳಸಲಾಗುತ್ತದೆ.
  • ಅಂತರಜಾಲಗಳನ್ನು ಕಾರ್ಪೋರೇಟ್ ಕಾರ್ಯ-ಚಟುವಟಿಕೆಯ ಸಂಸ್ಕೃತಿ-ಬದಲಾವಣಾ ವೇದಿಕೆಗಳಾಗಿಯೂ ಸಹ ಬಳಸಲಾಗುತ್ತದೆ. ಉದಾಹರಣೆಗೆ, ಅಂತರಜಾಲ ಚರ್ಚಾವೇದಿಕೆಯನ್ನು ಬಳಸಿಕೊಂಡು ದೊಡ್ಡ ಸಂಖ್ಯೆಯ ನೌಕರವರ್ಗವು ಪ್ರಮುಖ ವಿಷಯಗಳನ್ನು ಚರ್ಚಿಸಿದರೆ; ಇದು ನಿರ್ವಹಣೆ, ಉತ್ಪಾದಕತೆ, ಗುಣಮಟ್ಟ ಹಾಗು ಇತರ ಕಾರ್ಪೋರೇಟ್ ವಿವಾದ-ವಿಷಯಗಳಿಗೆ ಸಂಬಂಧಿಸಿದ ಹೊಸ ಯೋಜನೆಗಳಿಗೆ ದಾರಿ ಮಾಡಿಕೊಡಬಹುದು.
  • ದೊಡ್ಡ ಅಂತರಜಾಲಗಳಲ್ಲಿ, ವೆಬ್ಸೈಟ್ ಸೇವಾ ಬಳಕೆಯು ಸಾಮಾನ್ಯವಾಗಿ ಸಾರ್ವಜನಿಕ ವೆಬ್ಸೈಟ್ ಸೇವಾ ಬಳಕೆಗೆ ಸದೃಶವಾಗಿರುತ್ತದೆ. ಅಲ್ಲದೇ ಇದರ ಒಟ್ಟಾರೆ ಚಟುವಟಿಕೆಯನ್ನು ವೆಬ್ ಮೆಟ್ರಿಕ್ ಸಾಫ್ಟ್ ವೇರ್ (ಮಾನದಂಡ)ಮೂಲಕ ಪತ್ತೆ ಮಾಡಿ ಸೂಕ್ತವಾಗಿ ಅರ್ಥೈಸಬಹುದು. ಅಂತರಜಾಲ ವೆಬ್ಸೈಟ್ ಪರಿಣಾಮಕಾರಿತ್ವವನ್ನು ಬಳಕೆದಾರ ಸಮೀಕ್ಷೆಗಳೂ ಸಹ ಉತ್ತಮಪಡಿಸುತ್ತಾರೆ.
  • ದೊಡ್ಡ ಉದ್ದಿಮೆಗಳು, ತನ್ನ ಬಳಕೆದಾರರಿಗೆ ತನ್ನ ಅಂತರಜಾಲದೊಳಗೆ ಫೈರ್ ವಾಲ್ ಸರ್ವರ್ ಗಳ ಮೂಲಕ ಸಾರ್ವಜನಿಕ ಅಂತರಜಾಲಕ್ಕೆ ಪ್ರವೇಶ ಕಲ್ಪಿಸಿಕೊಡುತ್ತವೆ. ಇವುಗಳಿಗೆ ಸಂಪೂರ್ಣ ಭದ್ರತೆಯೊಂದಿಗೆ ಬರುವ ಹಾಗು ಹೋಗುವ ಸಂದೇಶಗಳನ್ನು ಹಿಡಿದಿಟ್ಟು ಪ್ರದರ್ಶಿಸುವ ಸಾಮರ್ಥ್ಯವಿರುತ್ತದೆ. ಅಂತರಜಾಲದ ಒಂದು ಭಾಗದ ಮಾಹಿತಿಯನ್ನು ಗ್ರಾಹಕರಿಗೆ ಹಾಗು ವ್ಯಾಪಾರಕ್ಕೆ ಸಂಬಂಧಿಸದ ಇತರರಿಗೆ ಲಭ್ಯವಾಗುವಂತೆ ಮಾಡಿದರು.
  • ಇದು ಒಂದು ಎಕ್ಸ್ಟ್ರಾನೆಟ್ ನ ಭಾಗವಾಗುತ್ತದೆ. ವ್ಯಾಪಾರ ಸಂಸ್ಥೆಗಳು ಖಾಸಗಿ ಸಂದೇಶಗಳನ್ನು ಸಾರ್ವಜನಿಕ ನೆಟ್ವರ್ಕ್ ಮೂಲಕ, ವಿಶೇಷವಾದ ಸಂದೇಶ ಗೋಪ್ಯತೆ/ಅಸಂಕೇತೀಕರಣವನ್ನು ಬಳಸಿಕೊಂಡು ಕಳುಹಿಸಬಹುದು.

ಪ್ರಯೋಜನಗಳು

ಬದಲಾಯಿಸಿ
  • ಕಾರ್ಯತಂಡದ ಉತ್ಪಾದಕತೆ : ಅಂತರಜಾಲಗಳು ಬಳಕೆದಾರರಿಗೆ ಗುರುತಿಸಲು ಹಾಗು ಮಾಹಿತಿಯನ್ನು ಶೀಘ್ರದಲ್ಲಿ ಸಂಗ್ರಹಿಸಲು ಸಹಾಯಮಾಡುತ್ತವೆ. ಅಲ್ಲದೇ ಅವರ ಪಾತ್ರ ಹಾಗು ಜವಾಬ್ದಾರಿಗಳಿಗೆ ಅನುಸಾರವಾಗಿ ಅನ್ವಯಗಳನ್ನು ಬಳಕೆ ಮಾಡಬಹುದು. ವೆಬ್ ಬ್ರೌಸರ್ ಇಂಟರ್ಫೇಸ್ ನ ಸಹಾಯದಿಂದ, ಬಳಕೆದಾರರು, ದತ್ತಾಂಶ ಸಂಗ್ರಹದಲ್ಲಿರುವ ಸಂಸ್ಥೆಗೆ ಬೇಕಾದ ಯಾವುದೇ ದತ್ತಾಂಶವನ್ನು ಯಾವುದೇ ಸಮಯದಲ್ಲಿ ಸುಲಭದಲ್ಲಿ ಪಡೆಯಬಹುದು.
  • ಅಲ್ಲದೇ- ಇದು ಭದ್ರತಾ ನಿಬಂಧನೆಗಳಿಗೆ ಒಳಪಟ್ಟಿರುತ್ತದೆ - ಇದು ಸಂಸ್ಥೆಯ ಯಾವುದೇ ಕಾರ್ಯತಾಣಗಳೊಳಗಿರಬಹುದು. ತಮ್ಮ ಕಾರ್ಯವನ್ನು ಬೇಗನೆ ಮುಗಿಸಲು ನೌಕರರ ಸಾಮರ್ಥ್ಯವನ್ನು ಹೆಚ್ಚು ನಿಖರವಾಗಿ ಹೆಚ್ಚಿಸುವುದು, ಹಾಗು ತಮ್ಮ ಮಾಹಿತಿ ಸರಿಯಾಗಿದೆಯೆಂಬ ಭರವಸೆ ನೀಡುವುದು. ಇದು ಬಳಕೆದಾರರಿಗೆ ಒದಗಿಸಲಾದ ಸೇವೆಗಳನ್ನು ಉತ್ತಮಪಡಿಸಲೂ ಸಹ ಸಹಾಯಮಾಡುತ್ತದೆ.
  • ಸಮಯ : ಅಂತರಜಾಲಗಳು ಸಂಸ್ಥೆಗಳಿಗೆ, ನೌಕರರಿಗೆ ಅಗತ್ಯವಿದ್ದ ಸಮಯದಲ್ಲಿ ಮಾಹಿತಿಯನ್ನು ಹಂಚಿಕೆ ಮಾಡಲು ಅವಕಾಶ ನೀಡುತ್ತದೆ; ನೌಕರರು ಇಲೆಕ್ಟ್ರಾನಿಕ್ ಮೇಲ್ ನ ಮೂಲಕ ಮಾಹಿತಿಯ ಅವ್ಯವಸ್ಥೆಯಿಂದಾಗಿ ಉಂಟಾಗುವ ಗೊಂದಲಕ್ಕಿಂತ, ತಮಗೆ ಅನುಕೂಲವಾಗುವ ರೀತಿಯಲ್ಲಿ ಮಾಹಿತಿಯನ್ನು ಅವರು ಸಂಯೋಜಿಸಬಹುದು.
  • ಸಂವಹನ : ಅಂತರಜಾಲಗಳು ಒಂದು ಸಂಸ್ಥೆಯೊಳಗೆ ಸಮಗ್ರವಾಗಿ ಹಾಗು ಸಮಾನವಾಗಿ ಸಂವಹನದ ಪ್ರಬಲ ಸಾಧನವಾಗಿ ಕಾರ್ಯನಿರ್ವಹಿಸುತ್ತವೆ. ಸಂಪರ್ಕ-ಸಂವಹನದ ದೃಷ್ಟಿಕೋನದಿಂದ, ಅಂತರಜಾಲಗಳು ಸಂಸ್ಥೆಯುದ್ದಕ್ಕೂ ಸಮಗ್ರವಾದ ನಿಲುಕಿನಲ್ಲಿರುವ ಕಾರ್ಯ ನೀತಿಯ ಉಪಕ್ರಮವನ್ನು ಜಾಗತಿಕವಾಗಿ ಅಗತ್ಯ ಮಾಹಿತಿ ತಿಳಿಸಲು ಸಹಕಾರಿಯಾಗಿವೆ.ಸಂಘಟನೆಯ ಸಂಪೂರ್ಣ ಆರಂಭಿಕ ಕಾರ್ಯವಿಧಾನಗಳನ್ನು ಅವು ದೃಢಪಡಿಸಲು ಸಮರ್ಥವಾಗಿವೆ. ಮಾಹಿತಿಯ ಮಾದರಿಯನ್ನು ಸುಲಭವಾಗಿ ತಿಳಿಯಪಡಿಸುವುದು ಉಪಕ್ರಮದ ಉದ್ದೇಶವಾಗಿದೆ. *ಅದು ಉಪಕ್ರಮವು ಏನನ್ನು ಸಾಧಿಸಲು ಉದ್ದೇಶಿಸಿದೆ, ಉಪಕ್ರಮದ ಹಿಂದಿರುವ ಅಂಶಗಳು ಯಾವವು, ಇಲ್ಲಿಯವರೆಗೂ ದೊರೆತ ಫಲಿತಾಂಶ, ಹಾಗು ಹೆಚ್ಚಿನ ಮಾಹಿತಿಗಾಗಿ ಯಾರನ್ನು ಸಂಪರ್ಕಿಸಬೇಕು. ಅಂತರಜಾಲದಲ್ಲಿ ಈ ಮಾಹಿತಿಯನ್ನು ಒದಗಿಸುವ ಮೂಲಕ, ಸಿಬ್ಬಂದಿಯು ಕಾರ್ಯವಿಧಾನದೊಂದಿಗೆ ಇಂದಿನತನಕದ ಮಾಹಿತಿಯನ್ನು ಸಂಗ್ರಹಿಸಿ ಕಲೆಹಾಕುವ ಅವಕಾಶ ದೊರೆಯುತ್ತದೆ. ಸಂವಹನದ ಕೆಲ ಉದಾಹರಣೆಗಳೆಂದರೆ ಚಾಟ್, ಇಮೇಲ್, ಹಾಗು ಅಥವಾ ಬ್ಲಾಗ್ ಗಳು.
  • ಅಂತರಜಾಲವು ಸಂವಹನದಿಂದಾಗಿ ಒಂದು ಸಂಸ್ಥೆಗೆ ನೆರವಾದ ವಾಸ್ತವ ಜಗತ್ತಿನ ಒಂದು ಉತ್ತಮ ಉದಾಹರಣೆಯೆಂದರೆ, ನೆಸ್ಲೆ ಸಂಸ್ಥೆ, ಇದು ಸ್ಕ್ಯಾಂಡಿನೇವಿಯದಲ್ಲಿ ಆರಂಭಿಸಿದ ಹಲವಾರು ಆಹಾರ ಸಂಸ್ಕರಣ ಘಟಕಗಳ ಬಗ್ಗೆ ಅಂತರಜಾಲ ಸಂವಹನದಿಂದ ಹೊರ ಜಗತ್ತಿಗೆ ಇದರ ಬಗ್ಗೆ ಮಾಹಿತಿ ದೊರೆಯಿತು. ಅವರ ಪ್ರಮುಖ ಬೆಂಬಲದ, ನೆರವಿನ ವ್ಯವಸ್ಥೆಯು ಪ್ರತಿ ದಿನ ಹಲವಾರು ಪ್ರಶ್ನೆಗಳಿಗೆ ಉತ್ತರಿಸಿ ವ್ಯವಾಹರಿಕ ಸಮಸ್ಯೆಗಳನ್ನು ಬಗೆಹರಿಸಬೇಕಿತ್ತು.[]
  • ನೆಸ್ಲೆ ಸಂಸ್ಥೆಯು ಅಂತರಜಾಲದ ಮೇಲೆ ತನ್ನ ಬಂಡವಾಳ ಹೂಡಲು ನಿರ್ಧರಿಸಿದಾಗ, ಅದು ಇದರಿಂದ ಆಗುವ ಉಳಿತಾಯವನ್ನು ಬೇಗನೆ ಗುರುತಿಸಿತು. ಮ್ಯಾಕ್ಗೋವರ್ನ್ ಪ್ರಕಾರ ಪ್ರಶ್ನೆಗಳಿಗಾಗಿ ಮಾಡಲಾಗುತ್ತಿದ್ದ ದೂರವಾಣಿ ಕರೆಗಳ ನಂತರ ಉಂಟಾಗುತ್ತಿದ್ದ ಉಳಿತಾಯವು ಅಂತರಜಾಲದ ಮೇಲೆ ಹೂಡಲಾದ ಬಂಡವಾಳಕ್ಕಿಂತ ಮೂಲಭೂತವಾಗಿ ಅಧಿಕವಾಗಿತ್ತು.
  • ವೆಬ್ ಪ್ರಕಟಣೆ , ಹೈಪರ್ ಮೀಡಿಯ ಹಾಗು ವೆಬ್ ತಂತ್ರಜ್ಞಾನಗಳನ್ನೂ ಬಳಸಿಕೊಂಡು ಸಂಸ್ಥೆಯುದ್ದಕ್ಕೂ ಅಡ್ಡಿ ಆತಂಕಗಳೊಂದಿಗೆ ನಿಧಾನ ಗತಿಯ ಕಾರ್ಪೋರೆಟ್ ಜ್ಞಾನ ನಿರ್ವಹಣೆ ಹಾಗು ಸುಲಭವಾಗಿ ತಲುಪಲು ಅವಕಾಶ ನೀಡುತ್ತದೆ. ಉದಾಹರಣೆಗಳಲ್ಲಿ: ನೌಕರರ ಕೈಪಿಡಿ, ಪ್ರಯೋಜನಗಳ ದಾಖಲೆ ಆಧಾರ, ಕಂಪನಿಯ ನೀತಿ-ಸೂತ್ರಗಳು, ವ್ಯಾಪಾರ ಗುಣಮಟ್ಟಗಳು, ನ್ಯೂಸ್ ಫೀಡ್ ಗಳು, ಹಾಗು ತರಬೇತಿಯನ್ನೂ ಸಹ ಒಳಗೊಂಡಿದೆ.
  • ಇವುಗಳನ್ನು ಸಾಮಾನ್ಯವಾದ ಅಂತರಜಾಲ ಗುಣಮಟ್ಟಗಳನ್ನು ಬಳಸಿಕೊಂಡು ಸುಲಭವಾಗಿ ತಲುಪಬಹುದು.(ಆಕ್ರೊಬ್ಯಾಟ್ ಫೈಲುಗಳು, ಫ್ಲ್ಯಾಶ್ ಫೈಲುಗಳು, CGI ಅಪ್ಲಿಕೇಶನ್ ಗಳು). ಪ್ರತಿಯೊಂದು ವ್ಯಾಪಾರ ಘಟಕವು ತನ್ನ ದಾಖಲೆಗಳ ಆಧಾರದ ಆನ್ಲೈನ್ ಪ್ರತಿಯನ್ನು ನವೀಕರಿಸಿಕೊಳ್ಳಬಹುದು. ತೀರ ಇತ್ತೀಚಿನ ರೂಪಾಂತರವು ಸಾಮಾನ್ಯವಾಗಿ ಅಂತರಜಾಲ ಬಳಕೆಮಾಡುವ ನೌಕರರಿಗೆ ದೊರಕುತ್ತದೆ.
  • ವ್ಯಾಪಾರ ಕಾರ್ಯ ಚಟುವಟಿಕೆಗಳ ಪ್ರಕ್ರಿಯೆ ಹಾಗು ನಿರ್ವಹಣೆ : ಅಂತರಜಾಲಗಳನ್ನು ವ್ಯಾಪಾರ ಪ್ರಕ್ರಿಯೆಗಳಿಗೆ ನೆರವಾಗಲು ಹಾಗು ಅಂತರಜಾಲದ ಮೇಲೆ ಕೆಲಸ ಮಾಡುವ ವ್ಯಾಪಾರ ಸಂಸ್ಥೆಯುದ್ದಕ್ಕೂ ಅಭಿವೃದ್ಧಿ ಹೊಂದುತ್ತಿರುವ ಹಾಗು ಪರಿಣಾಮಕಾರಿ ಅನುಷ್ಠಾನ, ಅನ್ವಯಗಳ ವೇದಿಕೆಯಾಗಿಯೂ ಸಹ ಬಳಕೆ ಮಾಡಲಾಗುತ್ತದೆ.
  • ಆಕರ್ಷಕ, ನ್ಯಾಯಸಮ್ಮತ ಪರಿಣಾಮಕಾರಿ-ಬೆಲೆ  : ಬಳಕೆದಾರರು ಕಾರ್ಯ-ವಿಧಾನ ಕೈಪಿಡಿಗಳು, ಆಂತರಿಕ ದೂರವಾಣಿ ಪಟ್ಟಿ ಹಾಗು ಕೋರಿಕೆ ಅರ್ಜಿಗಳಂತಹ ದಾಖಲೆಗಳ ಆಧಾರ ಪ್ರಮಾಣಗಳ ನಿರ್ವಹಣೆಗಿಂತ ವೆಬ್ ಬ್ರೌಸರ್ ನ ಮೂಲಕ ಮಾಹಿತಿ ಹಾಗು ಅಗತ್ಯ ದತ್ತಾಂಶ ಸಂಗ್ರಹಿಸಬಹುದು. ಇದು ಮುದ್ರಣ, ಆಧಾರ ದಾಖಲೆ,ಪ್ರಮಾಣಗಳ ನಕಲು ಪ್ರತಿ ಮಾಡಿಸುವುದು ಹಾಗು ಸಾಂದರ್ಭಿಕ ಪರಿಸರದ ಅಗತ್ಯದ ದಾಖಲೆ ಆಧಾರ ಪ್ರಮಾಣದ ನಿರ್ವಹಣೆಗೆ ತಗಲುವ ವೆಚ್ಚವನ್ನು ಸಂಭಾವ್ಯವಾಗಿ ಕಡಿಮೆ ಮಾಡುತ್ತದೆ.
  • ಉದಾಹರಣೆಗೆ, ಪೀಪಲ್ ಸಾಫ್ಟ್ ನಿಂದ ಪಡೆದ "ಅಂತರಜಾಲಕ್ಕೆ HR ಪ್ರಕ್ರಿಯೆಗಳನ್ನು ವರ್ಗಾವಣೆ ಮಾಡುವ ಮೂಲಕ ಗಮನಾರ್ಹ ವೆಚ್ಚ ಉಳಿತಾಯ ಮಾಡಿತು".[] ಮ್ಯಾಕ್ಗವರ್ನ್, ಪ್ರಯೋಜನಗಳಲ್ಲಿ ಕೈಪಿಡಿಗಾದ ವೆಚ್ಚವು ಪ್ರತಿ ದಾಖಲಾತಿಗೆ USD109.48ರಷ್ಟೆಂದು ಹೇಳುತ್ತಾರೆ. "ಈ ಕಾರ್ಯಚಟುವಟಿಕೆಯ-ಪ್ರಕ್ರಿಯೆಯನ್ನು ಅಂತರಜಾಲಕ್ಕೆ ವರ್ಗಾವಣೆ ಮಾಡಿದಾಗ, ಇದು ಪ್ರತಿ ದಾಖಲಾತಿಗೆ $21.79ನಷ್ಟು ವೆಚ್ಚ ತಗ್ಗಿತು; ಹಾಗೆ ನೋಡಿದರೆ ಇದು ಶೇಖಡ 80ರಷ್ಟು ಉಳಿತಾಯವೆನಿಸುತ್ತದೆ".
  • ವೆಚ್ಚದ ವರದಿಯನ್ನಾಧರಿಸಿ ಗಮನಿಸಿದಾಗ ವೆಚ್ಚ ಪ್ರಮಾಣದ ಮೇಲೆ ಹಣ ಉಳಿತಾಯ ಮಾಡಿದ ಮತ್ತೊಂದು ಸಂಸ್ಥೆಯೆಂದರೆ ಸಿಸ್ಕೋ. "1996ರಲ್ಲಿ, ಸಿಸ್ಕೋ 54,000 ವರದಿಗಳನ್ನು ಸಂಸ್ಕರಿಸುವುದರ ಜೊತೆಗೆ USD 19 ದಶಲಕ್ಷ ಡಾಲರ್ ಉಳಿತಾಯ ಮಾಡಿತು".[]
  • ಸಹಯೋಗದ ವರ್ಧನೆ : ಎಲ್ಲ ಅಧಿಕೃತ ಬಳಕೆದಾರರ ಮೂಲಕ ಮಾಹಿತಿಯನ್ನು ಸುಲಭವಾಗಿ ಸಂಗ್ರಹಿಸಬಹುದು. ಇದು ಜತೆಯಾಗಿ ತಂಡದಲ್ಲಿ ಕಾರ್ಯನಿರ್ವಹಿಸಲು ಅನುಕೂಲ ಮಾಡಿಕೊಡುತ್ತದೆ.
  • ವಿವಿಧ-ವೇದಿಕೆಗಳ ಸಾಮರ್ಥ್ಯ :ವಿಭಿನ್ನ ಗುಣಮಟ್ಟದ-ಅನುವರ್ತನಾಶೀಲ ವೆಬ್ ಬ್ರೌಸರ್ ಗಳು ವಿಂಡೋಸ್, ಮ್ಯಾಕ್, ಹಾಗು UNIXಗೆ ಲಭ್ಯವಿದೆ.
  • ಒಬ್ಬನೇ ವೀಕ್ಷಕನಿಗಾಗಿ ನಿರ್ಮಿತ ವಿನ್ಯಾಸ : ಹಲವು ಸಂಸ್ಥೆಗಳು ಕಂಪ್ಯೂಟರ್ ನಿರ್ದಿಷ್ಟತೆಗಳನ್ನು ನಿರ್ದೇಶಿಸುತ್ತವೆ. ಇದಕ್ಕೆ ಬದಲಿಯಾಗಿ ಇದು ಅಂತರಜಾಲದ ಅಭಿವರ್ಧಕರಿಗೆ ಒನ್ ಬ್ರೌಸರ್ ನ ಮೇಲೆ ಕಾರ್ಯನಿರ್ವಹಿಸುವಂತೆ ಅಳವಡಿಕೆಗಾಗಿ,ಅಪ್ಲಿಕೇಶನ್ ಗಳನ್ನು ಬರೆಯಲು ಅವಕಾಶ ಮಾಡಿಕೊಡುತ್ತದೆ.(ಯಾವುದೇ ವಿವಿಧ-ಬ್ರೌಸರ್ ನ ಹೊಂದಾಣಿಕೆ ಸಮಸ್ಯೆಗಳು ಉದ್ಭವಿಸುವುದಿಲ್ಲ.) ನಿರ್ದಿಷ್ಟವಾಗಿ ನಿಮ್ಮ "ವೀಕ್ಷಕನನ್ನು" ಸಂಬೋಧಿಸುವ ಸಾಮರ್ಥ್ಯವು ಒಂದು ದೊಡ್ಡ ಪ್ರಯೋಜನವಾಗಿ ಪರಿಣಮಿಸುತ್ತದೆ.
  • ಅಂತರಜಾಲಗಳು ಬಳಕೆದಾರನ-ನಿರ್ದಿಷ್ಟ ಉದ್ದೇಶದ ಮೇಲೆ ಅವಲಂಬಿತವಾಗಿರುವುದರಿಂದ(ಇದರ ಪ್ರವೇಶಕ್ಕೆ ಮುಂಚೆ ದತ್ತಾಂಶ ಸಂಗ್ರಹ/ನೆಟ್ವರ್ಕ್ ದೃಢೀಕರಣದ ಅಗತ್ಯವಿರುತ್ತದೆ.) ನೀವು ಯಾರೊಂದಿಗೆ ಇಂಟರ್ಫೇಸ್ (ಮುಖಾಮುಖಿ)ಮಾಡುತ್ತಿರುವಿರೆಂದು ನಿಮಗೆ ನಿರ್ದಿಷ್ಟವಾಗಿ ತಿಳಿದಿರುತ್ತದೆ. ಅಲ್ಲದೇ ಕೆಲಸದ ಆಧಾರದ ಮೇಲೆ ನಿಮ್ಮ ಅಂತರಜಾಲವನ್ನು ವೈಯಕ್ತಿಕತೆಗೆ ಅಗತ್ಯವಾದ ವೈಶಿಷ್ಟ್ಯವಾಗಿಸಬಹುದು.(ಕೆಲಸದ ಶೀರ್ಷಿಕೆ, ವಿಭಾಗ) ಅಥವಾ ವೈಯಕ್ತಿಕವಾಗಿ("ನಮ್ಮ ಕಂಪನಿಯಲ್ಲಿ ನೀವು ಮೂರು ವರ್ಷ ಪೂರೈಸಿದ್ದಕ್ಕಾಗಿ ನಿಮಗೆ ಹಾರ್ದಿಕ ಅಭಿನಂದನೆಗಳು ಜೇನ್)

!").

  • ಸಾಮಾನ್ಯ ಕಾರ್ಪೋರೆಟ್ ಸಂಸ್ಕೃತಿಗೆ ಉತ್ತೇಜನ : ಪ್ರತಿಯೊಬ್ಬ ಬಳಕೆದಾರನು ಅಂತರಜಾಲದೊಳಗಿರುವ ಒಂದೇ ರೀತಿಯ ಮಾಹಿತಿಯನ್ನು ವೀಕ್ಷಿಸಲು ಸಮರ್ಥನಾಗಿರುತ್ತಾನೆ.
  • ತಕ್ಷಣದ ನವೀಕರಣಗಳು : ಸಾರ್ವಜನಿಕರೊಂದಿಗೆ ಯಾವುದೇ ಸಾಮರ್ಥ್ಯದಲ್ಲಿ ವ್ಯವಹರಿಸಬೇಕಾದರೆ, ಕಾನೂನುಗಳು, ನಿರ್ದಿಷ್ಟತೆಗಳು, ಹಾಗು ಲಕ್ಷಣಗಳು ಬದಲಾಗಬಹುದು. ಅಂತರಜಾಲಗಳು ವೀಕ್ಷಕರಿಗೆ "ನೇರವಾದ" ಜೀವಂತಿಕೆಯ ಬದಲಾವಣೆಗಳನ್ನು ಒದಗಿಸುತ್ತವೆ. ಇದರಿಂದಾಗಿ ಅವರು ಇಂದಿನತನಕದ ಮಾಹಿತಿಯನ್ನು ಪಡೆಯಬಹುದು, ಇದರಿಂದಾಗಿ ಸಂಸ್ಥೆಯ ಜವಾಬ್ದಾರಿಗಳು ಸೀಮಿತಗೊಳ್ಳುತ್ತವೆ.
  • ವಿಂಗಡಣೆಯಾದ ಕಂಪ್ಯೂಟಿಂಗ್ ವಿನ್ಯಾಸ ರಚನೆಗೆ ನೆರವು ನೀಡುತ್ತದೆ : ಅಂತರಜಾಲವನ್ನು ಒಂದು ಸಂಸ್ಥೆಯ ನಿರ್ವಹಣಾ ಮಾಹಿತಿ ವ್ಯವಸ್ಥೆಗೂ ಸಹ ತಳುಕು ಹಾಕಬಹುದು, ಉದಾಹರಣೆಗೆ ಸಮಯ ಪಾಲನಾ ವ್ಯವಸ್ಥೆಯ ವಿಧಾನ.

ಯೋಜನೆ ಹಾಗು ರಚನೆ

ಬದಲಾಯಿಸಿ

ಹಲವು ಸಂಸ್ಥೆಗಳು, ತಮ್ಮ ಅಂತರಜಾಲದ ಯೋಜನೆ ಹಾಗು ಕಾರ್ಯಗತಗೊಳಿಸುವಿಕೆಗೆ ಗಮನಾರ್ಹ ಸಂಪನ್ಮೂಲವನ್ನು ಮೀಸಲಾಗಿ ಇಡುತ್ತವೆ. ಏಕೆಂದರೆ ಇದು ಸಂಸ್ಥೆಯ ಯಶಸ್ಸಿಗೆ ಸೃಷ್ಟಿಸುವ ಯೋಜನಾ ಪ್ರಾಮುಖ್ಯತೆಯಾಗುತ್ತದೆ. ಯೋಜನೆಯಲ್ಲಿ ಒಳಗೊಳ್ಳುವ ಕೆಲ ವಿಷಯ ಗಳೆಂದರೆ:

  • ಅಂತರಜಾಲದ ಉದ್ದೇಶ ಹಾಗು ಧ್ಯೇಯಗಳು
  • ಕಾರ್ಯಗತಗೊಳಿಸುವಿಕೆ ಹಾಗು ನಿರ್ವಹಣೆಗೆ ಜವಾಬ್ದಾರರಾದ ವ್ಯಕ್ತಿಗಳು ಅಥವಾ ವಿಭಾಗಗಳು
  • ಅಧಿಕೃತ ಯೋಜನೆಗಳು, ಮಾಹಿತಿ ಚೌಕಟ್ಟುಗಳ ರಚನೆ, ಪೇಜ್ ಲೇಔಟ್ ಗಳು,(ಪುಟಗಳ ಸೃಷ್ಟಿ) ವಿನ್ಯಾಸ[]
  • ಅನುಷ್ಠಾನದ ವಿವರಗಳು ಹಾಗು ಅಸ್ತಿತ್ವದಲ್ಲಿರುವ ವ್ಯವಸ್ಥೆಗಳನ್ನು ನಿಧಾನಗತಿಯಲ್ಲಿ ಹಂತ-ಹಂತವಾಗಿ ಅಂತ್ಯಗೊಳಿಸುವುದು
  • ಅಂತರಜಾಲದ ಭದ್ರತೆಗಳ ನಿರೂಪಣೆ,ವ್ಯಾಖ್ಯಾನ ಹಾಗು ಕಾರ್ಯಗತಗೊಳಿಸುವುದು
  • ಕಾನೂನು ಪರಿಮಿತಿ ಹಾಗು ಇತರ ನಿರ್ಬಂಧದೊಳಗೆ ಹೇಗೆ ಇದನ್ನು ರಕ್ಷಿಸುವುದು
  • ಅಪೇಕ್ಷಿತ ಪರಸ್ಪರ ಕಾರ್ಯಕಾರಿತ್ವದ ಮಟ್ಟ(ಉದಾಹರಣೆಗೆ ವಿಕಿಗಳು, ಆನ್ಲೈನ್ ಮಾದರಿಗಳು)
  • ಹೊಸ ದತ್ತಾಂಶದ ಇನ್ ಪುಟ್ ಹಾಗು ನವೀಕರಣಗೊಂಡ ಅಸ್ತಿತ್ವದಲ್ಲಿರುವ ದತ್ತಾಂಶವನ್ನು ಪ್ರಮುಖವಾಗಿ ನಿಯಂತ್ರಿಸುವುದು ಅಥವಾ ವರ್ಗಾವಣೆ ಮಾಡುವುದು.
  • ಇವೆಲ್ಲವೂ ಹಾರ್ಡ್ ವೇರ್ ಹಾಗು ಸಾಫ್ಟ್ ವೇರ್ ನಿರ್ಣಯಕ್ಕೆ ಜೊತೆಯಾಗಿವೆ.(ವಿಷಯಸೂಚಿ ನಿರ್ವಹಣಾ ವ್ಯವಸ್ಥೆಗಳ ಮಾದರಿಯಲ್ಲಿ), ಪಾಲ್ಗೊಳ್ಳುವಿಕೆಯಲ್ಲಿ ಉಂಟಾಗುವ ಸಮಸ್ಯೆಗಳು(ಉತ್ತಮ ಅಭಿರುಚಿ, ಕಿರುಕುಳ, ಗೋಪ್ಯತೆಗಳ ಮಾದರಿಯಲ್ಲಿ), ಹಾಗು ನೆರವಾಗುವ ವೈಶಿಷ್ಟ್ಯ ಗಳು.[]
  • ಅಂತರಜಾಲಗಳು ಸಾಮಾನ್ಯವಾಗಿ ಸ್ಥಿರ ಸೈಟ್ ಗಳಾಗಿರುತ್ತವೆ. ಮೂಲತಃ ಇವುಗಳು ಹಂಚಿಕೆಯಾದ ಡ್ರೈವ್ ಗಳಾಗಿರುತ್ತವೆ, ಇವುಗಳು ಆಂತರಿಕ ನಿಯಮಾವಳಿ ಅಥವಾ ಸಂವಹನಗಳೊಂದಿಗೆ ಪ್ರಧಾನವಾಗಿ ಶೇಖರಣೆಯಾದ ದಾಖಲೆ ಆಧಾರ ಪ್ರಮಾಣಗಳಿಗೆ ನೆರವಾಗುತ್ತವೆ.(ಸಾಮಾನ್ಯವಾಗಿ ಒಂದೇ ಕಡೆಯ ಸಂವಹನ). ಆದಾಗ್ಯೂ ಸಂಸ್ಥೆಗಳು ಇತ್ತೀಚಿಗೆ ಹೇಗೆ ಅಂತರಜಾಲಗಳು, ಸಮಾಜೀಕರಿತ ಅಂತರಜಾಲದಲ್ಲಿ ವಿಶೇಷತೆಯನ್ನು ಪಡೆದಿವೆ.ಅದನ್ನು ಆ ಮೂಲದ ಸಂಸ್ಥೆಗಳನ್ನು ಬಳಸಿಕೊಂಡು ಹೇಗೆ ತಮ್ಮ ತಂಡಕ್ಕೆ 'ಸಂವಹನದ ಮಾಹಿತಿ ಕೇಂದ್ರ ವಾಗಬಹುದೆಂದು' ಯೋಜಿಸುತ್ತಿದೆ.[]

ವಾಸ್ತವವಾಗಿಯೂ ಕಾರ್ಯಗತಗೊಳಿಸುವಿಕೆಯು ಈ ಕೆಳಕಂಡ ಹಂತಗಳನ್ನು ಒಳಗೊಂಡಿದೆ:

  • ಹಿರಿತನದ ನಿರ್ವಹಣಾ ನೆರವು ಹಾಗು ಆರ್ಥಿಕ ನಿಧಿ-ಬೆಂಬಲವನ್ನು ಗಳಿಸಿಕೊಳ್ಳುವುದು.[]
  • ವ್ಯಾಪಾರ ಅವಶ್ಯಕತೆಗಳ ವಿಶ್ಲೇಷಣೆ.
  • ಬಳಕೆದಾರರ ಮಾಹಿತಿ ಅಗತ್ಯಗಳನ್ನು ಗುರುತಿಸಲು ಬಳಕೆದಾರನು ಪಾತ್ರ ವಹಿಸುವುದು.
  • ವೆಬ್ ಸರ್ವರ್ ನ ಅಳವಡಿಕೆ ಹಾಗು ಬಳಕೆದಾರರು ಸುಲಭವಾಗಿ ಪ್ರವೇಶಿಸುವ ನೆಟ್ವರ್ಕ್.
  • ಕಂಪ್ಯೂಟರ್ ಗಳಲ್ಲಿ ಬಳಕೆದಾರನಿಗೆ ಅಗತ್ಯವಿರುವ ಅಪ್ಲಿಕೇಶನ್ ಗಳನ್ನು(ಅನ್ವಯಿಕೆ) ಸಂಸ್ಥಾಪಿಸುವುದು.
  • ರಚಿತವಾಗಬೇಕಿರುವ ವಿಷಯಸೂಚಿಗೆ ದಾಖಲೆಯ ಆಧಾರ ಪ್ರಮಾಣ ಚೌಕಟ್ಟನ್ನು ರೂಪಿಸುವುದು.[]
  • ಅಂತರಜಾಲ ಪರೀಕ್ಷಿಸುವಾಗ ಬಳಕೆದಾರನ ಪಾತ್ರ ಹಾಗು ಅದರ ಬಳಕೆಯನ್ನು ಉತ್ತೇಜಿಸುವುದು.
  • ಮುಂದುವರೆಯುತ್ತಿರುವ ಮಾಪನ ಹಾಗು ಅರ್ಹತೆ ನಿರ್ಧಾರ, ಇದರಲ್ಲಿ ಇತರ ಅಂತರಜಾಲಗಳ ವಿರುದ್ಧ ನಿಗದಿತ ಮಾನದಂಡವನ್ನು ಅಳೆದು ರೂಪಿಸುವುದು ಸೇರಿದೆ.[]

ಅಂತರಜಾಲದ ವಿಭಾಗ ರಚನೆಯಲ್ಲಿರುವ ಮತ್ತೊಂದು ಉಪಯೋಗಿ ಅಂಶವೆಂದರೆ, ಅಂತರಜಾಲದ ನಿರ್ವಹಣೆಗೆ ಬದ್ಧನಾದ ಒಬ್ಬ ಪ್ರಮುಖ ವ್ಯಕ್ತಿಯ ಜೊತೆಗೆ ಈತನು ವಿಷಯಸೂಚಿಗಳನ್ನು ಪ್ರಚಲಿತದಲ್ಲಿಡಲು ಜವಾಬ್ದಾರನಾಗಿರುತ್ತಾನೆ. ಅಂತರಜಾಲದ ಕುರಿತ ಪ್ರತಿಕ್ರಿಯೆಗಾಗಿ, ಬಳಕೆದಾರರ ಒಂದು ಸಾಮಾಜಿಕ ನೆಟ್ವರ್ಕಿಂಗ್ ಮೂಲಕ ಪಡೆಯಬಹುದು. ಇದರಿಂದ ಬಳಕೆದಾರರಿಗೆ ಏನು ಬೇಕು ಹಾಗು ಅವರು ಏನನ್ನು ಬಯಸುತ್ತಾರೆಂಬುದನ್ನು ಸೂಚಿಸಬಹುದು.

ಇವನ್ನೂ ಗಮನಿಸಿ

ಬದಲಾಯಿಸಿ
  • ಎಂಟರ್ಪ್ರೈಸ್ ಪೋರ್ಟಲ್
  • ಇಂಟ್ರಾನೆಟ್ ಪೋರ್ಟಲ್
  • ಅಂತರಜಾಲ ಕಾರ್ಯವಿಧಾನಗಳು
  • ಇಂಟ್ರಾವೆಬ್
  • ಸ್ಥಳೀಯ ವಲಯ ಜಾಲ
  • ವ್ಯಾಪಕ ವಲಯ ಜಾಲ
  • ವೆಬ್ ಪೋರ್ಟಲ್
  • ಕ್ವಾಂಗ್ಮ್ಯೊಂಗ್ (ಅಂತರಜಾಲ)
  • ಗೂಗಲ್‌ ಕ್ರೋಮ್‌ ಬ್ರೌಸರ್

ಉಲ್ಲೇಖಗಳು

ಬದಲಾಯಿಸಿ
  1. ೧.೦ ೧.೧ ೧.೨ ಮ್ಯಾಕ್ಗೋವರ್ನ್, ಗೆರ್ರಿ
  2. Ward, Toby (2006-06-11). "Leading an intranet redesign". IntranetBlog. Archived from the original on 2010-01-06. Retrieved 2009-04-03.
  3. LaMee, James A. (2002-04-30). "Intranets and Special Libraries: Making the most of inhouse communications". University of South Carolina. Archived from the original on 2009-02-18. Retrieved 2009-04-03.
  4. Scaplehorn, geoff (2010-03-01). "Bringing the internet indoors - socialising your intranet". IntranetBlog. Archived from the original on 2010-03-04. Retrieved 2010-03-03.
  5. Ward, Toby. "Planning: An Intranet Model for success Intranet". Archived from the original on 2009-03-22. Retrieved 2009-04-03.
  6. "Intranet: Table of Contents – Macmillan Computer Sciences: Internet and Beyond". Bookrags.com. Retrieved 2009-04-03.
  7. "Intranet benchmarking explained". Intranet Benchmarking Forum. Archived from the original on 2011-07-13. Retrieved 2009-04-03.
"https://kn.wikipedia.org/w/index.php?title=ಅಂತರಜಾಲ&oldid=1260625" ಇಂದ ಪಡೆಯಲ್ಪಟ್ಟಿದೆ
  NODES
Intern 3
languages 1
mac 1
os 3