ಇಕ್ಸಿಯ
ಇಕ್ಸಿಯ | |
---|---|
Scientific classification | |
ಸಾಮ್ರಾಜ್ಯ: | |
(ಶ್ರೇಣಿಯಿಲ್ಲದ್ದು): | |
(ಶ್ರೇಣಿಯಿಲ್ಲದ್ದು): | |
ಗಣ: | |
ಕುಟುಂಬ: | |
ಉಪಕುಟುಂಬ: | |
ಪಂಗಡ: | |
ಕುಲ: | Ixia |
Type species | |
Ixia polystachya L.
| |
Synonyms[೧] | |
ಇಕ್ಸಿಯ ಇರಿಡಿಯೇಸಿ ಕುಟುಂಬದ ಒಂದು ಜಾತಿ; ಹೂ ಬಿಡುವ ಲಶುನ ಸಸ್ಯ. ಕಾರನ್ ಲಿಲ್ಲಿ ಇದರ ಪರ್ಯಾಯ ನಾಮ. ಸಸ್ಯದ ತುದಿಯಲ್ಲಿ ಬಿಟ್ಟಿರುವ ಗಾಜಿನಂತಿರುವ ಎಲೆಗಳ ಸುಂದರ ದೃಶ್ಯ ಆಕರ್ಷಕ. ಕುಂಡ ಸಸ್ಯ ಮತ್ತು ಮಡಿಸಸ್ಯವಾಗಿ ಇದನ್ನು ಬೆಳೆಸುತ್ತಾರೆ. ಇಕ್ಸಿಯ ಹೂಗಳನ್ನು ಕಳಸದ ಅಲಂಕಾರಕ್ಕಾಗಿ ಉಪಯೋಗಿಸುವುದುಂಟು. ಇಕ್ಸಿಯ ಜಾತಿಯಲ್ಲಿ ಆಫ್ರಿಕ ಮೂಲನಿವಾಸಿಗಳಾದ ಸುಮಾರು ೨೫ ಪ್ರಭೇದಗಳಿವೆ. ಈ ಸಸ್ಯದ ಕುಬ್ಜಕಾಂಡ ಆಕಾರದಲ್ಲಿ ಗುಂಡು; ಪದರ ಪದರವಾಗಿದ್ದು ಮೇಲುಭಾಗ ನಾರಿನಿಂದ ಕೂಡಿದೆ. ಎಲೆ ಸರಳ. ನೀಳಾಕಾರ; ನಯವಾದ ಅಂಚು. ಮೊನಚು ತುದಿ; ಗಾಜಿನಂತೆ ಹೊಳೆಯುತ್ತದೆ. ನೇರವಾಗಿ ನಿಂತಿರುವ ಹೂಗೊಂಚಲು ಅಂತ್ಯಾರಂಭಿ ಅಥವಾ ಸ್ಪೈಕ್ ಮಾದರಿಯದು. ಆದರೆ ಕೆಲವು ಪ್ರಭೇದದ ಸಸ್ಯಗಳಲ್ಲಿ ಹೂಗೊಂಚಲು ಕವಲೊಡೆದಿರುತ್ತದೆ. ಹೂವು ಆಲಿಕೆಯಾಕಾರ, ಕೂಡುದಳದ ಹೊರಭಾಗ ೬; ಹೂವಿನ ಬಣ್ಣಪ್ರಭೇದಕ್ಕೆ ಅನುಗುಣವಾಗಿ ಬಿಳುಪು, ಹಳದಿ, ಕಿತ್ತಲೆ, ಊದಾ, ನಸುಗೆಂಪು, ಕೆಂಪು, ವಿರಳವಾಗಿ ಹಸಿರು, ಕೇಸರುಗಳು ೩; ಇವುಗಳ ಬುಡಗಳು ಹೂಗಂಟಲಿಗೆ ಅಂಟಿಕೊಂಡಿವೆ; ಕೇಸರ ಶಲಾಕೆ ಬಿಡಿಯಾಗಿದೆ. ಅಂಡಾಶಯ ಆಯತಾಕಾರ, ಮೂರು ಕೋಶದ್ದಾಗಿದ್ದು ಬಹು ಬೀಜಗಳಿಂದ ಕೂಡಿದೆ. ಕ್ಯಾಪ್ಸೂಲ್ ಮಾದರಿಯ ಹಣ್ಣು; ಇದು ಮೂರು ಭಾಗವಾಗಿದೆ; ಇದಕ್ಕೆ ರೆಕ್ಕೆ ಇದೆ. ಈ ಜಾತಿಯಲ್ಲಿರುವ ೨೫ ಪ್ರಭೇದಗಳ ಪೈಕಿ ಮುಂದೆ ಕಾಣಿಸಿರುವ ಮೂರು ಪ್ರಭೇದಗಳು ಉದ್ಯಾನಗಾರಿಕೆ ದೃಷ್ಟಿಯಿಂದ ಮುಖ್ಯವಾದುವು. ಈ ಮೂರು ಪ್ರಭೇದಗಳಲ್ಲಿ ಅನೇಕ ವಿಧವಾದ ಬಣ್ಣಗಳಲ್ಲಿ ಹೂ ಬಿಡುವ ತಳಿಗಳು ಬೇಸಾಯದಲ್ಲಿವೆ.[೨]
ಬಾಹ್ಯ ಸಂಪರ್ಕಗಳು
ಬದಲಾಯಿಸಿಉಲ್ಲೇಖಗಳು
ಬದಲಾಯಿಸಿ