ಆಧುನಿಕ ಉಡುಪು ಮತ್ತು ವಸ್ತ್ರ ವಿನ್ಯಾಸದಲ್ಲಿ, ಗುಂಡಿ ಈಗ ಹೆಚ್ಚು ಸಾಮಾನ್ಯವಾಗಿ ಪ್ಲಾಸ್ಟಿಕ್‍ನಿಂದ ತಯಾರಿಸಲಾದ, ಆದರೆ ಆಗಾಗ್ಗೆ ಲೋಹ, ದಾರು ಅಥವಾ ಕಪ್ಪೆ ಚಿಪ್ಪಿನಿಂದಲೂ ತಯಾರಿಸಲಾದ, ಬಟ್ಟೆಯ ಎರಡು ತುಂಡುಗಳನ್ನು ಒಟ್ಟಾಗಿ ಭದ್ರಪಡಿಸುವ ಒಂದು ಸಣ್ಣ ಸಾಧನ. ಪುರಾತತ್ವ ಶಾಸ್ತ್ರದಲ್ಲಿ, ಗುಂಡಿಯು ಒಂದು ಪ್ರಮುಖ ವಸ್ತುವಾಗಿರಬಹುದು. ಅನ್ವಯಿಕ ಕಲೆಗಳು ಮತ್ತು ಕುಶಲಕರ್ಮದಲ್ಲಿ, ಗುಂಡಿಯು ಒಂದು ಜಾನಪದ ಕಲೆ, ಕಲಾಮಂದಿರ ಕುಶಲಕರ್ಮ, ಅಥವಾ ಕಿರು ಕಲಾಕೃತಿಯ ಉದಾಹರಣೆಯಾಗಿರಬಹುದು.

ಸಸ್ಯದಂತದಿಂದ ತಯಾರಿಸಲಾದ ಆಧುನಿಕ ಗುಂಡಿಗಳು

ಗುಂಡಿಗಳನ್ನು ಹೆಚ್ಚಾಗಿ ಹಲವುವೇಳೆ ಉಡುಪಿನ ಸಾಮಾನುಗಳಿಗೆ ಲಗತ್ತಿಸಲಾಗುತ್ತದೆ ಆದರೆ ಕಿಸೆಹೊತ್ತಗೆ ಮತ್ತು ಚೀಲಗಳಂಥ ಧಾರಕಗಳ ಮೇಲೂ ಬಳಸಬಹುದು. ಆದರೆ, ಗುಂಡಿಗಳನ್ನು ಉಡುಪುಗಳು ಮತ್ತು ಅಂತಹುದೇ ವಸ್ತುಗಳ ಮೇಲೆ ಏಕಮಾತ್ರವಾಗಿ ಅಲಂಕಾರದ ಉದ್ದೇಶಗಳಿಗಾಗಿ ಹೊಲಿಯಬಹುದು. ಭದ್ರಪಡಿಸುವ ಸಾಧನಗಳಾಗಿ ಕಾರ್ಯನಿರ್ವಹಿಸುವ ಗುಂಡಿಗಳು ಬಟ್ಟೆ ಅಥವಾ ದಾರದ ಕುಣಿಕೆಯ ಒಳಗೆ ಜಾರಿ, ಅಥವಾ ಕಾಜದ ಒಳಗೆ ಜಾರಿ ಕೆಲಸಮಾಡುತ್ತವೆ.

"https://kn.wikipedia.org/w/index.php?title=ಗುಂಡಿ&oldid=750560" ಇಂದ ಪಡೆಯಲ್ಪಟ್ಟಿದೆ
  NODES