ಗೋಲಿಯು ಒಂದು ಸಣ್ಣ ಗೋಲಾಕಾರದ ಆಟಿಕೆ. ಇದನ್ನು ಹಲವುವೇಳೆ ಗಾಜು, ಜೇಡಿಮಣ್ಣು, ಉಕ್ಕು, ಪ್ಲಾಸ್ಟಿಕ್ ಅಥವಾ ಅಗೇಟ್‍ನಿಂದ ತಯಾರಿಸಲಾಗುತ್ತದೆ. ಈ ಚೆಂಡಿನಾಕಾರದ ವಸ್ತುಗಳು ಗಾತ್ರದಲ್ಲಿ ಬದಲಾಗುತ್ತವೆ. ಅತ್ಯಂತ ಸಾಮಾನ್ಯವಾಗಿ, ಇವು ಸುಮಾರು ೧೩ ಮಿ.ಮಿ. ವ್ಯಾಸವನ್ನು ಹೊಂದಿರುತ್ತವೆ. ಆದರೆ ಇವುಗಳ ವ್ಯಾಸವು ೧.ಮಿ.ಮಿ ಕಡಿಮೆಯಿಂದ ಹಿಡಿದು ೮ ಸೆ.ಮಿ. ಗಿಂತ ಹೆಚ್ಚಿನವರೆಗೆ ವ್ಯಾಪಿಸಬಹುದು. ಪ್ರದರ್ಶನ ಉದ್ದೇಶಗಳಿಗಾಗಿ ಇರುವ ಕೆಲವು ಕಲಾತ್ಮಕ ಗಾಜಿನ ಗೋಲಿಗಳು ೩೦ ಸೆ.ಮಿ. ಗಿಂತ ಹೆಚ್ಚು ಅಗಲವಿರುತ್ತವೆ. ಗೋಲಿಗಳನ್ನು ಗೋಲಿ ಆಟದಲ್ಲಿ ಬಳಸಲಾಗುತ್ತದೆ. ಇವುಗಳನ್ನು ಹಲವುವೇಳೆ ಸಂಗ್ರಹಿಸಲಾಗುತ್ತದೆ, ಹಿಂದಿನ ನೆನಪು ಮತ್ತು ಅವುಗಳ ಸುಂದರ ಬಣ್ಣಗಳು ಎರಡೂ ಉದ್ದೇಶಗಳಿಗಾಗಿ.

ವಿಭಿನ್ನ ಗಾತ್ರಗಳು ಮತ್ತು ಪ್ರಕಾರಗಳ ಗೋಲಿಗಳು

ಇತಿಹಾಸ

ಬದಲಾಯಿಸಿ

ಇಪ್ಪತ್ತನೇ ಶತಮಾನದ ಮುಂಚಿನ ಭಾಗದಲ್ಲಿ, ಸುಮಾರು ಕ್ರಿ.ಪೂ. ೨೫೦೦ರ ಕಾಲದ ಸಣ್ಣ ಚೆಂಡುಗಳು ಮೊಹೆಂಜೊ-ದಾರೋದ ಹತ್ತಿರ ಉತ್ಖನದಿಂದ ಸಿಕ್ಕಿದವು.[]: 553  ಇವನ್ನು ಪುರಾತತ್ವಶಾಸ್ತ್ರಜ್ಞರು ಗೋಲಿಗಳೆಂದು ಗುರುತಿಸಿದರು. ಗೋಲಿಗಳನ್ನು ಹಲವುವೇಳೆ ರೋಮನ್ ಸಾಹಿತ್ಯದಲ್ಲಿ ಉಲ್ಲೇಖಿಸಲಾಗಿದೆ, ಉದಾಹರಣೆಗೆ ಓವಿಡ್‍ನ ಕವನ ನಕ್ಸ್ನಲ್ಲಿ, ಮತ್ತು ಮೆಸೊಪಟ್ಯಾಮಿಯಾ ಮತ್ತು ಪ್ರಾಚೀನ ಈಜಿಪ್ಟ್‌ನ ಚಾಲ್ಡಿಯನ್ನರೊಂದಿಗೆ ಸಂಬಂಧಿಸಲಾದ ಸ್ಥಳಗಳ ಉತ್ಖನನದಿಂದ ಗೋಲಿಗಳು ದೊರೆತ ಅನೇಕ ಉದಾಹರಣೆಗಳಿವೆ. ಸಾಮಾನ್ಯವಾಗಿ ಇವುಗಳನ್ನು ಜೇಡಿಮಣ್ಣು, ಕಲ್ಲು ಅಥವಾ ಗಾಜಿನಿಂದ ತಯಾರಿಸಲಾಗಿರುತ್ತಿತ್ತು. ಬ್ರಿಟನ್‍ನಲ್ಲಿ ಗೋಲಿಗಳು ಮಧ್ಯಯುಗದಲ್ಲಿ ನಿಮ್ನತಲದ ದೇಶಗಳಿಂದ ಆಮದು ಮಾಡಿಕೊಂಡ ನಂತರ ಆಗಮಿಸಿದವು.[]: 19 

ಉಲ್ಲೇಖಗಳು

ಬದಲಾಯಿಸಿ
  1. Marshall, John, ed. (1931). Mohenjo-Daro and the Indus Civilization: Being an Official Account of Archaeological Excavations Carried out by the Government of India between the Years 1922 and 1927. New Delhi: Asian Educational Services. ISBN 9788120611795.
  2. Joy, Jody; Gunn, Imogen; Harknett, Sarah-Jane; Wilkinson, Eleanor (2016). Hide and Seek: Looking for Children in the Past. Cambridge: Museum of Archaeology and Anthropology, University of Cambridge. ISBN 978-0-947595-23-4.
"https://kn.wikipedia.org/w/index.php?title=ಗೋಲಿ&oldid=975702" ಇಂದ ಪಡೆಯಲ್ಪಟ್ಟಿದೆ
  NODES
languages 1