ಠಂಡಾಯಿ ಬಾದಾಮಿ, ಸೊಂಪು ಬೀಜಗಳು, ಕಲ್ಲಂಗಡಿ ಬೀಜ, ಗುಲಾಬಿ ಪಕಳಿಗಳು, ಕರಿಮೆಣಸು, ಲಾವಂಚದ ಬೀಜಗಳು, ಏಲಕ್ಕಿ, ಕೇಸರಿ, ಹಾಲು ಮತ್ತು ಸಕ್ಕರೆಯ ಮಿಶ್ರಣದಿಂದ ತಯಾರಿಸಲಾದ ಒಂದು ಭಾರತೀಯ ತಂಪು ಪಾನೀಯ. ಇದು ಭಾರತಕ್ಕೆ ಸ್ಥಳೀಯವಾಗಿದೆ ಮತ್ತು ಹಲವುವೇಳೆ ಮಹಾ ಶಿವರಾತ್ರಿ ಹಾಗೂ ಹೋಳಿ ಹಬ್ಬಗಳೊಂದಿಗೆ ಸಂಬಂಧಿಸಲ್ಪಡುತ್ತದೆ. ಈ ಠಂಡಾಯಿಯ ಗ್ರಾಹಕರು ಬಹುತೇಕವಾಗಿ ರಾಜಸ್ಥಾನ ಮತ್ತು ಉತ್ತರ ಭಾರತದವರಾಗಿದ್ದಾರೆ. ಠಂಡಾಯಿಯ ರೂಪಗಳಿವೆ ಮತ್ತು ಅತ್ಯಂತ ಸಾಮಾನ್ಯವಾದವುಗಳೆಂದರೆ ಬಾದಾಮ್ ಠಂಡಾಯಿ ಹಾಗೂ ಭಾಂಗ್ ಠಂಡಾಯಿ.

ಠಂಡಾಯಿ
ಮೂಲ
ಮೂಲ ಸ್ಥಳಭಾರತ
ಪ್ರಾಂತ್ಯ ಅಥವಾ ರಾಜ್ಯಉತ್ತರ ಪ್ರದೇಶ ಮತ್ತು ರಾಜಸ್ಥಾನ
ವಿವರಗಳು
ಸೇವನಾ ಸಮಯಪಾನೀಯ
ಬಡಿಸುವಾಗ ಬೇಕಾದ ಉಷ್ಣತೆಶೈತ್ಯೀಕೃತ
ಮುಖ್ಯ ಘಟಕಾಂಶ(ಗಳು)ಹಾಲು ಪ್ರಧಾನ ಘಟಕಾಂಶ, ಏಲಕ್ಕಿ, ಬಾದಾಮಿ, ಸಕ್ಕರೆ, ಮತ್ತು ಕೇಸರಿ, ಕ್ಯಾನಬಿನಾಯ್ಡ್‌ಗಳು (ಭಾಂಗ್ ಠಂಡಾಯಿಯಲ್ಲಿ ಮಾತ್ರ)

ಭಾಂಗ್ ಠಂಡಾಯಿಯು ಭಾರತೀಯ ಉಪಖಂಡದ ಅನೇಕ ಭಾಗಗಳಲ್ಲಿ ಜನಪ್ರಿಯವಾಗಿರುವ ಗಾಂಜಾ ಸೇರಿಸಿದ ಪಾನೀಯ. ಇದನ್ನು ಸ್ವಲ್ಪ ಪ್ರಮಾಣದ ಭಾಂಗ್ ಅನ್ನು ಠಂಡಾಯಿಗೆ ಸೇರಿಸಿ ತಯಾರಿಸಲಾಗುತ್ತದೆ (ಕೊಬ್ಬು ತೆಗೆದಿರದ ಹಾಲನ್ನು ಬಳಸಲಾಗುತ್ತದೆ). ಹಾಲಿನ ಕೊಬ್ಬಿನಾಂಶ ಮತ್ತು ಕಡಲೇಕಾಯಿಗಳು ಕೊಬ್ಬಿನಲ್ಲಿ ಕೊಬ್ಬಿನಲ್ಲಿ ಕರಗಬಲ್ಲ ಕ್ಯಾನಬಿನಾಯ್ಡ್‌ಗಳು ಕರಗಲು ನೆರವಾಗುತ್ತವೆ.

ರೂಪಗಳು

ಬದಲಾಯಿಸಿ
ಠಂಡಾಯಿಯ ಪ್ರಕಾರಗಳು
ಹೆಸರು ಮುಖ್ಯ ಘಟಕಾಂಶಗಳು
ಠಂಡಾಯಿ[] ಇದನ್ನು ಬಾದಾಮಿ ಠಂಡಾಯಿ ಎಂದೂ ಕರೆಯಲಾಗುತ್ತದೆ. ಇದು ಪರದೇಶದ ನಟ್‍ಗಳು ಮತ್ತು ಸಂಬಾರ ಪದಾರ್ಥಗಳಿಂದ ತಯಾರಿಸಲಾದ ಒಂದು ಸಾಂಪ್ರದಾಯಿಕ ಪಾಕವಿಧಾನವಾಗಿದೆ.
ಗುಲಾಬಿ ಠಂಡಾಯಿ[] ಈ ಪ್ರಕಾರದ ಠಂಡಾಯಿಯು ರುಚಿಕರವಾದ ರೂಪವಾಗಿದ್ದು, ಇದನ್ನು ಗುಲಾಬಿ ಪಕಳೆಗಳು ಮತ್ತು ಗುಲಾಬಿ ಪರಿಮಳದಿಂದ ತಯಾರಿಸಲಾಗುತ್ತದೆ.
ಮಾವಿನಹಣ್ಣಿನ ಠಂಡಾಯಿ[] ಸಾಮಾನ್ಯ ಠಂಡಾಯಿಗೆ ಬದಲಾವಣೆ ಮಾಡಿ, ಇದಕ್ಕೆ ಮಾವಿನ ಹಣ್ಣಿನ ತಿಳ್ಳನ್ನು ಸೇರಿಸುವುದರಿಂದ ಪರಿಪೂರ್ಣ ಬೇಸಿಗೆ ತಂಪು ಪಾನೀಯ ತಯಾರಾಗುತ್ತದೆ.
ಬಾದಾಮ್ ಕೇಸರ್ ಠಂಡಾಯಿ ಬಾದಾಮಿ ಮತ್ತು ಕೇಸರಿಯಿಂದ ತಯಾರಾದ ಈ ಪಾನೀಯ ಸುಡು ಬೇಸಿಗೆಯಲ್ಲಿ ಒಂದು ಆನಂದದಾಯಕ ಪೇಯವಾಗಿರುತ್ತದೆ.

ಉಲ್ಲೇಖಗಳು

ಬದಲಾಯಿಸಿ
  1. "Recipe: Thandai". TipHero. Archived from the original on 2019-06-08. Retrieved 2018-05-09.
  2. "Recipe: Rose Thandai". The Times of India.
  3. "Recipe: Mango Thandai". Ranveer Brar.
"https://kn.wikipedia.org/w/index.php?title=ಠಂಡಾಯಿ&oldid=1129250" ಇಂದ ಪಡೆಯಲ್ಪಟ್ಟಿದೆ
  NODES