ತುಕಡಿಯು ಸೈನ್ಯದ ಒಂದು ಘಟಕವಾಗಿದೆ. "ತುಕಡಿ" ಪದದ ಬಳಕೆಯು ರಾಷ್ಟ್ರೀಯತೆ ಮತ್ತು ಸೇವಾ ಶಾಖೆಯ ಪ್ರಕಾರ ಬದಲಾಗುತ್ತದೆ. ಸಾಮಾನ್ಯವಾಗಿ ಒಂದು ತುಕಡಿಯು ೩೦೦ ರಿಂದ ೮೦೦ ಸೈನಿಕರನ್ನು ಹೊಂದಿರುತ್ತದೆ ಮತ್ತು ಇದನ್ನು ಅನೇಕ ದಳಗಳಾಗಿ ವಿಭಜಿಸಲಾಗುತ್ತದೆ. ಸಾಮಾನ್ಯವಾಗಿ ಒಂದು ತುಕಡಿಯನ್ನು ಲೆಫ಼್ಟಿನೆಂಟ್ ಕರ್ನಲ್ ನಿಯಂತ್ರಿಸುತ್ತಾನೆ. ಕೆಲವು ದೇಶಗಳಲ್ಲಿ, "ತುಕಡಿ" ಶಬ್ದವನ್ನು ಪದಾತಿ ಪಡೆಯೊಂದಿಗೆ ಸಂಬಂಧಿಸಲಾಗುತ್ತದೆ.

ಸ್ವತಂತ್ರ ಕಾರ್ಯಾಚರಣೆ

ಬದಲಾಯಿಸಿ

ತುಕಡಿಯು "ಸೀಮಿತ ಸ್ವತಂತ್ರ ಕಾರ್ಯಾಚರಣೆ" ಕೈಗೊಳ್ಳಲು ಸಮರ್ಥವಾಗಿರುವ ಅತ್ಯಂತ ಚಿಕ್ಕ ಸೇನಾ ಘಟಕವಾಗಿದೆ[], ಇದರರ್ಥ ಇದು ಒಬ್ಬ ಕಾರ್ಯನಿರ್ವಾಹಕ, ಬೆಂಬಲ ಹಾಗೂ ಸೇವಾ ಘಟಕ (ಉದಾ. ಮುಖ್ಯಶಾಖೆ ಮತ್ತು ಮುಖ್ಯ ಶಾಖಾ ದಳ) ಜೊತೆಗಿರುವ ಸಿಬ್ಬಂದಿಯನ್ನು (ಅಂದರೆ ಎಸ್-೧, ಎಸ್-೨, ಇತ್ಯಾದಿ) ಒಳಗೊಂಡಿರುತ್ತದೆ. ತುಕಡಿಯು ಕೆಲವು ದಿನಗಳಿಗಿಂತ ಹೆಚ್ಚು ಕಾಲ ಕಾರ್ಯಾಚರಣೆಯನ್ನು ಬಿಡದೆ ನಡೆಸಲು ಸಾಧ್ಯವಾಗಲು, ಅದರ ಬಳಿ ಮರುಪೂರೈಕೆಯ ಮೂಲವಿರಬೇಕಾಗುತ್ತದೆ.

ಉಲ್ಲೇಖಗಳು

ಬದಲಾಯಿಸಿ
  1. Piehler, G. Kurt, ed. (2013). Encyclopedia of Military Science. Sage Publications. p. 874. ISBN 9781412969338.
"https://kn.wikipedia.org/w/index.php?title=ತುಕಡಿ&oldid=1145117" ಇಂದ ಪಡೆಯಲ್ಪಟ್ಟಿದೆ
  NODES
languages 1
os 1