ದೇವಿ ಘರ್ ಅರಮನೆ ಒಂದು ಪಾರಂಪರಿಕ ಹೋಟೆಲ್ ಮತ್ತು ರೆಸಾರ್ಟ್, ದೆಲ್ವರ ಹಳ್ಳಿಯಲ್ಲಿ 18 ನೇ ಶತಮಾನದ ದೇವಿ ಘರ್ ಅರಮನೆಯಲ್ಲಿ ಸ್ಥಾಪಿಸಲಾಗಿದೆ. ಇದು ದೆಲ್ವರ ಸಂಸ್ಥಾನದ ಆಡಳಿತ ರಾಜಮನೆತನದ ನಿವಾಸವಾಗಿ, 18 ನೇ ಶತಮಾನದ ಮಧ್ಯದಿಂದ 20 ನೇ ಶತಮಾನದ ಮಧ್ಯಭಾಗದ ತನಕ ಉಪಯೋಗಿಸಲ್ಪಡುತ್ತಿತ್ತು. ರಾಜಸ್ಥಾನದ ಅರಾವಳಿ ಬೆಟ್ಟಗಳಲ್ಲಿರುವ, ಉದಯ್ಪುರದ 28 ಕಿ ದೂರದಲ್ಲಿ ಈಶಾನ್ಯ ದಿಕ್ಕಿನ ಭಾಗದಲ್ಲಿರುವ ದೇವಿ ಘರ್ ಉದಯ್ಪುರ ಕಣಿವೆಯ ಮೂರು ಪ್ರಮುಖ ಹಾದುಗಳಲ್ಲಿ ಒಂದಾಗಿ ರೂಪಗೊಳ್ಳುತ್ತದೆ.[]

ಇದು ಭಾರತದ ಪ್ರಮುಖ ಐಷಾರಾಮಿ ಹೋಟೆಲ್ಗಳಲ್ಲಿ ಒಂದು ಎಂದು 2006 ರಲ್ಲಿ ನ್ಯೂಯಾರ್ಕ್ ಟೈಮ್ಸ್, ಮತ್ತು ಫ್ರೋಮರ್ಸ್ ವಿಮರ್ಶೆ ಮಾಡಿದ್ದು, ಇದನ್ನು "ಉಪಖಂಡದಲ್ಲಿ ಅತ್ಯುತ್ತಮ ಹೋಟೆಲ್" ಎಂದು ಕರೆಯಲಾಗಿದೆ, ಮತ್ತು "ದೇವಿ ಘರ್ ಎಷ್ಟು ಸುಂದರವೋ ಅದಕ್ಕಿಂತ ಹೆಚ್ಚಾಗಿ ಇದು ಸ್ಪೂರ್ತಿದಾಯಕವಾಗಿ ಇದೆ" ಎಂದು ಹೇಳಲಾಗಿದೆ.[] 2008 ರಲ್ಲಿ, ಜೀವನಶೈಲಿ ಚಾನೆಲ್ ಡಿಸ್ಕವರಿ ಟ್ರಾವೆಲ್ ಮತ್ತು ಲಿವಿಂಗ್ ಸರಣಿಯಲ್ಲಿ 'ಐದು ಖಂಡಗಳ ಮೇಲೆ ಇರುವ ಡ್ರೀಮ್ ಹೊಟೇಲ್' ನಲ್ಲಿ ತೋರಿಸಲ್ಪತ್ತಿತ್ತು, ಇತರ ಎರಡು ಭಾರತೀಯ ಹೋಟೆಲ್ಗಳು ಈ ಪ್ರತಿಷ್ಠಿತ ಪಟ್ಟಿಗೆ ೫೫ ಹೋಟೆಲ್ಗಳಲ್ಲಿ ಒಂದಾಗಿದ್ದವೆಂದರೆ ತಾಜ್ ಲೇಕ್ ಪ್ಯಾಲೇಸ್, ಉದಯ್ಪುರ, ಮತ್ತು ರಾಮ್ಬಗ್ಹ್ ಅರಮನೆ, ಜೈಪುರ []

ಇತಿಹಾಸ

ಬದಲಾಯಿಸಿ

ರಾಜ್ ರಾಣಾ ಪ್ರಗ್ಯತ್ ಸಿಂಗ್ಜಿ ಅವರು 20ನೇ ಮತ್ತು 1999 ರಿಂದ ದೆಲ್ವರದ ಪ್ರಸ್ತುತ ರಾಜ ರಾಣಾ ಸಾಹೇಬ್ ಆಗಿದ್ದರೆ. ಇವರು ಡೂನ್ ಸ್ಕೂಲ್, ದೆಹ್ರಾದೂನ್ ಇಂದ ಶಿಕ್ಷಣ ಪದೆದ್ದಿದ್ದಾರೆ,ಮತ್ತು ಇವರ ವಿವಾಹ ,ರಾಣಿ ಸಾಹೇಬ್ ಶಿವಾನಿ ರಾಜ್ಯ ಲಕ್ಷ್ಮಿ ಅವರೊಂದಿಗೆ ಆಗಿದ್ದು , ರಾಣಿಯವರು ಪ್ರಸ್ತುತ ನೇಪಾಳದ ಆಡಳಿತ ರಾಜ ವಂಶಸ್ಥರಾಗಿರುವ ನಂದಾ ಸುಮ್ಷೆರ್ ಜಂಗ್ ಬಹಾದೂರ್ ರಾಣಾರ ಪುತ್ರಿಯಾಗಿದ್ದಾರೆ ಮತ್ತು ಮೇಯೊ ಕಾಲೇಜ್ ಗರ್ಲ್ಸ್ ಸ್ಕೂಲ್, ಅಜ್ಮೀರ ಮತ್ತು ಲೇಡಿ ಶ್ರೀ ರಾಮ್ ಕಾಲೇಜ್, ದೆಹಲಿಯಲ್ಲಿ ಶಿಕ್ಷಣ ಪಡೆದ್ದಿದ್ದಾರೆ.[]

ದೆಲ್ವರ: ದೇವತೆಗಳ ಪಟ್ಟಣವೆಂದೆ ಕರೆಯಲ್ಪಡುವ ಇದು ಮೂಲತಃ ಮೇವಾರ್ ಸಾಮ್ರಾಜ್ಯದ 16 ರಾಜ್ವಾಡಗಳಲ್ಲಿ ದೆಲ್ವರ ಕೂಡ ಒಂದಾಗಿತ್ತು . ಬಡಿ ಸದ್ರಿ ಮತ್ತು ಗೊಗುಂಡಾದ ಜೊತೆಗೆ, ದೆಲ್ವರವನ್ನು ಜಾಲಾ ರಜಪೂತರು ಆಳಿದರು. ದೇವಿ ಘರ್ ಕೋಟೆ: ಅರಾವಳಿ ಬೆಟ್ಟಗಳಲ್ಲಿ ನೆಲೆಸಿದೆ, 18 ನೇ ಶತಮಾನದ ದೆಲ್ವರ ಹಳ್ಳಿಯಲ್ಲಿ ದೇವಿ ಘರ್ ಅರಮನೆ , ಉದಯ್ಪುರಕ್ಕೆ ಕಣಿವೆಯ ಹಾಡು ಹೋಗುವ ಮೂರು ಪ್ರಮುಖ ರಸ್ತೆಗಳಲ್ಲಿ ಒಂದಾಗಿ ರೂಪಿಸಲಾಗಿದೆ. ಅದರ ಪ್ರಾಮುಖ್ಯತೆಯನ್ನು, ದೆಲ್ವಾರ ಪ್ರಭುತ್ವದ ಗುಜರಾತ್ ಮೂಲದ ಸಜ್ಜಾ ಸಿಂಗ್ , ಖನವ ಯುದ್ಧದಲ್ಲಿ ಮತ್ತು ನಂತರ ಮೊಘಲ್ ಚಕ್ರವರ್ತಿ ಬಾಬರ್ ವಿರುದ್ಧ ಮೇವಾರದ ಮಹಾರಾಣ ಸಂಗ ಅವರೊಂದಿಗೆ ತನ್ನ ಶೌರ್ಯ ಮತ್ತು ನಿಷ್ಠೆ ಪ್ರದರ್ಶಿಸಿ ಕೀರ್ತಿ ಮೆರೆದದ್ದಕ್ಕಾಗಿ ನೀಡಲಾಗಿತ್ತು. ಅವರು ಮರಣ ಎರಡನೇ ಚಿತ್ತೂರು ಮುತ್ತಿಗೆ ಯುದ್ದದಲ್ಲಿ ಆಯಿತು(1534). ನಂತರದ ರಾಜರು ಕಟ್ಟಡಕ್ಕೆ ಅನೇಕ ಸೇರ್ಪಡೆಗಳನ್ನು ಮಾಡಿದರು ನಂತರ 1960 ರಲ್ಲಿ ಪ್ರಭುತ್ವವು ರಾಜಸ್ಥಾನದ ಸಂಸ್ಥಾನವನ್ನು ಸೇರಿಕೊಂಡಿತು ನಂತರ ಅರಮನೆ ಪಾಳು ಬಿಡಲಾಯಿತು. ನಂತರ ರಾಜಸ್ಥಾನ ಸಂಸ್ಥಾನವು ಈ ಅರಮನೆಯನ್ನು ನವೀಕರಿಸಲಾಯಿತು. 39 ಕೋಣೆಗಳು ಒಳಗೊಂಡ ಈ ಎಲ್ಲಾ ಸೂಟ್ ಐಷಾರಾಮಿ ಹೋಟೆಲ್ ಆಧುನಿಕ ಭಾರತದ ನೋಟ, ಸ್ಥಳೀಯ ಮಾರ್ಬಲ್ಸ್ ಮತ್ತು ಅಮೂಲ್ಯ ರತ್ನಗಳನ್ನು ಬಳಸಿಕೊಂಡು, ವಿನ್ಯಾಸ ಮತ್ತು ವಿವರಗಳ ಮೇಲೆ ಒತ್ತು ತೆಗೆದುಕೊಳ್ಳುತ್ತದೆ. ರಾಜಸ್ಥಾನದ ದೆಲ್ವಾರ, 'ದೇವತೆಗಳ ಪಟ್ಟಣವನ್ನಾಗಿ' ಕರೆಯಲು ಕಾರಣ ದೇವಾಲಯಗಳ ಹೆಚ್ಚಿನ ಸಾಂದ್ರತೆ ಇರುವುದರಿಂದ ಇದನ್ನು ಹಾಗೆ ಕರೆಯಲಾಗುತ್ತದೆ ಎಂದು ಸನಾ ಅಮೀರ್ ವಿವರಿಸುತ್ತಾರೆ.

ದೆಲ್ವರ ಮೂಲತಃ ದೇವಕುಲ ಪ್ಯಾಟನ್ ನಗರಿ ಎಂದು ಕರೆಯಲ್ಪಡುತ್ತಿತ್ತು ಅದರ ಅರ್ಥ ದೇವರ ಪಟ್ಟಣ ಎಂದು. ಮತ್ತು ಅದರ ಹೆಸರಿನ ನಿಜವಾದ ಒಂದು ಸಮಯದಲ್ಲಿ ಪಟ್ಟಣದ ಸುಮಾರು 1000 ದೇವಾಲಯಗಳು ಇದ್ದು ಅದರಲ್ಲಿ ಸುಮಾರು 400 ಜೈನ್ ಮಂದಿರ್ ದೇವಾಲಯಗಳು ಇದ್ದವು.

ಪುನಃರುಜ್ಜೀವನ

ಬದಲಾಯಿಸಿ

ಎರಡು ಶತಮಾನಗಳ ನಂತರ, ಇದು ಒಂದು ಖಾಲಿ ಅವಶೇಷಗಳನ್ನುಹೋಲುತ್ತಿತ್ತು ಮತ್ತು 20 ವರ್ಷಗಳ ಕಾಲ ಬಿಡಲಾಗಿದ್ದ, ಇದನ್ನು 1984 ರಲ್ಲಿ ಶೇಖಾವತಿ ಪ್ರದೇಶದ ಪೊದ್ದಾರ್, ಒಂದು ಕೈಗಾರಿಕಾ ಕುಟುಂಬ ಸ್ವಾಧೀನಪಡಿಸಿಕೊಂಡಿತು ಮತ್ತು ಇದರ ಮರುಸ್ಥಾಪನೆ 15 ವರ್ಷ ತೆಗೆದುಕೊಂಡಿತು ಮತ್ತು 750 ಜನರ ಒಂದು ತಂಡ, ವಾಸ್ತುಶಿಲ್ಪಿ ಗೌತಮ್ ಭಾಟಿಯಾ ನೇತೃತ್ವದಲ್ಲಿ ವಾಸ್ತುಶಿಲ್ಪಿ ನವೀನ್ ಗುಪ್ತಾ ರಚಿಸಿದರು. ಆಂತರಿಕ ವಾಸ್ತು ಶಿಲ್ಪವನ್ನು ಮುಂಬಯಿ ಮೂಲದ ಒಳಾಂಗಣ ವಿನ್ಯಾಸಕಾರ ರಾಜೀವ್ ಸೈನಿ ಮೂಲಕ ಕನಿಷ್ಠ ಶೈಲಿಯಲ್ಲಿ ಮರುವಿನ್ಯಾಸಗೊಳಿಸಲಾಯಿತು, ಒಂದು ಐಷಾರಾಮಿ ಹೋಟೆಲ್ ಆಗಿ ಮಾಡಲು ಎಲ್ಲಾ ಸೂಟ್, ಸ್ಪಾ ಮತ್ತು ಒಂದು ಆಯುರ್ವೇದ ಸ್ಪ ಈ ಅರಮನೆಯನ್ನು ಭಾರತದ ಅತ್ಯುತ್ತಮ ವಿನ್ಯಾಸ ಹೊಂದಿರುವ, ಹೋಟೆಲ್ಗಳಲ್ಲಿ ಒಂದನ್ನಗಿಸಿದೆ.[][]

ಪ್ರವಾಸಿಗರು ಮತ್ತು ಘಟನೆಗಳು

ಬದಲಾಯಿಸಿ

2004 ರಲ್ಲಿ, ಬ್ರಿಟಿಷ್ ಮಾಡೆಲ್ ಮತ್ತು ನಟಿ ಲಿಜ್ ಹರ್ಲಿ ಮತ್ತು ತನ್ನ ಎನ್ನಾರೈ ಗೆಳೆಯ ಅರುಣ್ ನಾಯರ್ ಹರ್ಲಿಯ ಹುಟ್ಟುಹಬ್ಬ ಆಚರಿಸಲು ದೇವಿ ಘರ್ ಅರಮನೆಗೆ ಭೇಟಿಕೊಟ್ಟದ್ದು ಇದನ್ನು ಬೆಳಕಿಗೆ ತಂದಿತು. ಅಂದಿನಿಂದ ಇದಕ್ಕೆ ಅಮಿತಾಭ್ ಬಚ್ಚನ್, ಸೈಫ್ ಅಲಿ ಖಾನ್ ಮತ್ತು ಫರ್ದೀನ್ ಖಾನ್ ಮತ್ತು ಅಂಬಾನಿ ಸಹೋದರರು ಭೇಟಿ ನೀಡಿದ್ದಾರೆ.2007ರ ಹಿಂದಿ ಚಲನಚಿತ್ರ ಏಕಲವ್ಯ: ದಿ ರಾಯಲ್ ಗಾರ್ಡ್ ಸೆಟ್ಸ್ಥಾ ಅನ್ನು ಇಲ್ಲೇ ಪಿಸಲಾಯಿತು ಮತ್ತು ವ್ಯಾಪಕವಾಗಿ ದೇವಿ ಘರ್ನಲ್ಲೆ ಚಿತ್ರಿಸಲಾಗಿದೆ.[]

ಇದು ಉದಯ್ಪುರದಿಂದ 28 ಕಿ.ಮೀ ಈಶಾನ್ಯ ದಿಕ್ಕಿಗೆ ಇದೆ, ಉದಯ್ಪುರ ಮತ್ತು ನಾಥದ್ವಾರಾ ಧಾರ್ಮಿಕ ಪಟ್ಟಣ ನಡುವೆ ರಸ್ತೆಯಲ್ಲಿ, ದೇವಿ ಘರ್ ಕ್ಕೆ ನಗರದಿಂದ 45 ನಿಮಿಷಗಳ ಪ್ರಯಾಣ.

ಉಲ್ಲೇಖಗಳು

ಬದಲಾಯಿಸಿ

ಉಲ್ಲೇಖಗಳು

ಬದಲಾಯಿಸಿ
  1. ೧.೦ ೧.೧ "New York Times Review - Devi Garh". New York Times. Retrieved Aug 23, 2016.
  2. "Discovery brings home global Dream Hotels from Aug 21". The Economic Times. Retrieved Aug 23, 2016.
  3. "About Hotel Raas Devigarh". cleartrip.com. Retrieved Aug 23, 2016.
  4. ...The Mumbai-based Saini’s big moment was designing Devigarh Palace in Udaipur. Archived 2012-09-25 ವೇಬ್ಯಾಕ್ ಮೆಷಿನ್ ನಲ್ಲಿ. Indian Express, Aug 03, 2008.Retrieved Aug 23, 2016.
  5. India: Palace hotel with a minimalist twist The Daily Telegraph, Feb 6, 2001.Retrieved Aug 23, 2016.
  6. "Eklavya belongs to Amitabh Bachchan!". Indian Express. February 16, 2007. Archived from the original on ಸೆಪ್ಟೆಂಬರ್ 25, 2012. Retrieved Aug 23, 2016.
  NODES
HOME 1
languages 1