ಪಿಕಾಸಿ
ಪಿಕಾಸಿಯು ಮಣ್ಣನ್ನು ಎತ್ತಲು ಬಳಸಲಾಗುವ, ಸಾಮಾನ್ಯವಾಗಿ T-ಆಕಾರದ ಕೈ ಉಪಕರಣ. ಇದರ ಶಿರವು ಸಾಮಾನ್ಯವಾಗಿ ಲೋಹದ್ದಾಗಿದ್ದು, ಸಾಂಪ್ರದಾಯಿಕವಾಗಿ ಕಟ್ಟಿಗೆಯಿಂದ ತಯಾರಿಸಲಾದ ಉದ್ದನೆಯ ಹಿಡಿಕೆಗೆ (ಸಾಂದರ್ಭಿಕವಾಗಿ ಲೋಹ ಮತ್ತು ಹೆಚ್ಚಾಗಿ ನಾರುಗಾಜು) ಲಂಬವಾಗಿ ಜೋಡಣೆಗೊಂಡಿರುತ್ತದೆ.[೧]
ಸಾಮಾನ್ಯ ಪಿಕಾಸಿಯು ಶಿರದ ಒಂದು ಕಡೆ ಚೂಪಾದ ತುದಿಯನ್ನು ಹೊಂದಿದ್ದು ವಿರುದ್ಧ ತುದಿಯಲ್ಲಿ ಅಗಲವಾದ ಚಪ್ಪಟೆ "ಕೊಡಲಿ" ಅಲಗನ್ನು ಹೊಂದಿರುತ್ತದೆ. ಕ್ರಮೇಣವಾದ ವಕ್ರರೇಖೆಯು ಶಿರದ ಉದ್ದವನ್ನು ವ್ಯಾಪಿಸಿರುವುದು ಲಕ್ಷಣವಾಗಿರುತ್ತದೆ.
ಚೂಪಾದ ತುದಿಯನ್ನು ಮುರಿಯಲು ಮತ್ತು ಮೀಟಿ ತೆಗೆಯಲು ಎರಡಕ್ಕೂ ಬಳಸಲಾಗುತ್ತದೆ, ಕೊಡಲಿಯನ್ನು ನೆಲ ಅಗೆಯಲು, ಮೇಲಿನ ಪದರವನ್ನು ತೆಗೆಯಲು ಮತ್ತು ಬೇರುಗಳನ್ನು ಕತ್ತರಿಸಲು ಬಳಸಲಾಗುತ್ತದೆ.
ಪ್ರಾಗೈತಿಹಾಸಿಕ ಕಾಲದಲ್ಲಿ ಕೃಷಿ ಉಪಕರಣವಾಗಿ ಅಭಿವೃದ್ಧಿಪಡಿಸಲಾದ ಪಿಕಾಸಿಯು ನೇಗಿಲು ಮತ್ತು ಮ್ಯಾಟಕ್‍ನಂತಹ ಇತರ ಉಪಕರಣಗಳಾಗಿ ವಿಕಸನಗೊಂಡಿದೆ.
ಉಲ್ಲೇಖಗಳು
ಬದಲಾಯಿಸಿ