ಮುಂಗುಸಿಗಳು[]
ಸಾಮಾನ್ಯ ಕುಬ್ಜ ಮುಂಗುಸಿ,
ಹೆಲೊಗೇಲ್ ಪಾರ್ವೂಲಾ
Scientific classification
ಸಾಮ್ರಾಜ್ಯ:
ವಿಭಾಗ:
ವರ್ಗ:
ಗಣ:
ಕಾರ್ನಿವೋರಾ
ಉಪಗಣ:
ಫ಼ೆಲಿಫ಼ಾರ್ಮಿಯಾ
ಕುಟುಂಬ:
ಹರ್ಪೆಸ್ಟಿಡೀ

Bonaparte, 1845
Synonyms
  • ಸೈನಿಕ್ಟಿಡೀ Cope, 1882
  • ಹರ್ಪೆಸ್ಟಾಯ್ಡಿಯೈ Winge, 1895
  • ಮೋಂಗೊಟಿಡೀ Pocock, 1919
  • ರೈನೊಗ್ಯಾಲಿಡೀ Gray, 1869
  • ಸೂರಿಕ್ಯಾಟಿಡೀ Cope, 1882
  • ಸೂರಿಕ್ಯಾಟಿನೀ Thomas, 1882

ಮುಂಗುಸಿ (ಹರ್ಪೆಸ್ಟಿಡೀ) ಎಂಬುದು ಸಣ್ಣಗಾತ್ರದ ಮಾಂಸಾಹಾರಿ (ಕಾರ್ನಿವೊರಾ) ಗಳ 33 ಸಸ್ತನಿ ಜಾತಿಗಳುಳ್ಳ ಕುಟುಂಬ. ಮುಂಗುಸಿಗಳು ಯುರೇಷ್ಯಾ ಮತ್ತು ಆಫ್ರಿಕಾದ ಪ್ರಮುಖ ಪ್ರಾದೇಶಿಕ ನೆಲೆಯಲ್ಲಿ ಕಾಣಸಿಗುತ್ತವೆ. ಗ್ಯಾಲಿಡಿಯಿನೀ (Galidiinae) ಉಪಕುಟುಂಬದ ಹೆಚ್ಚುವರಿ ಜಾತಿಯ ಮುಂಗುಸಿಗಳು ಮಡಗಾಸ್ಕರ್‌ನಲ್ಲಿವೆ. ಇವನ್ನು ಮುಂಚೆ ಇದೇ ಕುಟುಂಬದೊಂದಿಗೆ ಸೇರಿಸಲಾಗಿತ್ತು. ಇವನ್ನು ಸಹ ಆಗಾಗ್ಗೆ 'ಮುಂಗುಸಿಗಳು' ಎಂದು ಉಲ್ಲೇಖಿಸಲಾಗುತ್ತದೆ. ತಳೀಯ ಸಾಕ್ಷ್ಯಗಳ ಪ್ರಕಾರ, ಗೆಲಿಡೀನೆ ಉಪಕುಟುಂಬದ ಮುಂಗುಸಿಗಳು, ಯುಪ್ಲೆರಿಡೀ (Eupleridae) ಕುಟುಂಬದ ಇತರೆ ಮಡಗಾಸ್ಕರ್‌ ಮಾಂಸಾಹಾರಿಗಳೊಂದಿಗೆ ನಿಕಟ ಸಂಬಂಧ ಹೊಂದಿವೆ. ಈ ಕುಟುಂಬವು ಮುಂಗುಸಿಗಳಿಗೆ ಬದುಕುಳಿದಿರುವ ಅತಿ ನಿಕಟ ಕುಟುಂಬ ಎನ್ನಲಾಗಿದೆ.

ಮುಂಗುಸಿ (mongoose) ಎಂಬ ಪದವನ್ನು ಮರಾಠಿ ಹೆಸರು mangus (मंगूस) ನಿಂದ ಪಡೆಯಲಾಗಿದೆ. ಬಹುಶಃ ಇದನ್ನು ಅಂತಿಮವಾಗಿ ದ್ರಾವಿಡ ಭಾಷೆಗಳಾದ ತೆಲುಗು mungeesa (ముంగిస), ಕನ್ನಡ mungisi (ಮುಙಿಸಿ) ಭಾಷೆಗಳಿಂದ ಆಯ್ದುಕೊಳ್ಳಲಾಗಿದೆ. 1698 ರಿಂದಲೂ ಬಳಕೆಯಲ್ಲಿದ್ದ ಇಂಗ್ಲಿಷ್‌ ಹೆಸರನ್ನು ಜಾನಪದ-ವ್ಯುತ್ಪತ್ತಿ ಶಾಸ್ತ್ರೀಯವಾಗಿ -goose ಎಂದು ಅಂತ್ಯಗೊಳ್ಳುವಂತೆ ಮಾರ್ಪಾಡು ಮಾಡಲಾಯಿತು. goose ಎಂಬ ಶಬ್ದದೊಂದಿಗೆ ಯಾವುದೇ ವ್ಯುತ್ಪತ್ತಿಶಾಸ್ತ್ರೀಯ ಸಂಬಂಧ ಹೊಂದಿಲ್ಲ. ಇದರ ಬಹುವಚನ ರೂಪ ಮುಂಗುಸಿಗಳು (mongooses),[] ಅಥವಾ, ಅಪರೂಪಕ್ಕೆ, mongeese.[] ಇದನ್ನು ಕೆಲವೊಮ್ಮೆ mungoose ಎಂದೂ ಬರೆಯಲಾಗುತ್ತದೆ.[]

ವಿವರಣೆ

ಬದಲಾಯಿಸಿ

ಮುಂಗುಸಿಗಳು ಏಷ್ಯಾ, ಆಫ್ರಿಕಾ ಹಾಗೂ ದಕ್ಷಿಣ ಯುರೋಪ್‍ನ ವಲಯಗಳಲ್ಲಿ ವಾಸಿಸುತ್ತವೆ. ಜೊತೆಗೆ, ಕೆಲವು ಕೆರಿಬ್ಬಿಯನ್‌ ಮತ್ತು ಹವಾಯಿಯನ್‌ ದ್ವೀಪಗಳಲ್ಲಿ ಮುಂಗುಸಿ ಪರಿಯಚಯಿಸಲಾದ ಜಾತಿಯಾಗಿದೆ.‌ ಮುಂಗುಸಿಗಳದ್ದು ಸುಮಾರು ಮುವತ್ತಕ್ಕೂ ಹೆಚ್ಚು ಜಾತಿಗಳಿವೆ. ಇವು ೧ ರಿಂದ ೪ ಅಡಿ ಉದ್ದನೆಯ ಶ್ರೇಣಿಯಲ್ಲಿವೆ. ಮುಂಗುಸಿಯ ತೂಕದ ಶ್ರೇಣಿಯು, ಅಳಿಲು-ಗಾತ್ರದ 280 g (9.9 oz) ಉದ್ದನೆಯ ಸಾಮಾನ್ಯ ಸಣ್ಣ ಮುಂಗುಸಿ (Common Dwarf Mongoose) ಇಂದ ಹಿಡಿದು, ಬೆಕ್ಕಿನ ಗಾತ್ರದ 4 kg (8.8 lb) ಉದ್ದನೆಯ ಬಿಳಿ-ಬಾಲದ ಮುಂಗುಸಿ (White-tailed Mongoose) ವರೆಗಿದೆ. ಕೆಲವು ಜಾತಿಗಳು ಬಹುಶಃ ಒಂಟಿಯಾಗಿ ಬದುಕುತ್ತವೆ, ಕೇವಲ ತಮಗಾಗಿಯೇ ಆಹಾರ ಹುಡುಕಿಕೊಂಡು ಹೋಗುತ್ತವೆ. ಇನ್ನು ಕೆಲವು ಗುಂಪುಗಳಲ್ಲಿ ಸಂಚರಿಸಿ, ಗುಂಪಿನ ಸದಸ್ಯರೊಂದಿಗೆ ಆಹಾರ ಹಂಚಿಕೊಳ್ಳುವುದುಂಟು.

ಅಂಗರಚನಾ ಶಾಸ್ತ್ರ

ಬದಲಾಯಿಸಿ
 
ಉದ್ದನೆಯ, ಚಪ್ಪಟೆಯಾದ ಹಾಗೂ ಕಳೆಗಳುಳ್ಳ ಮುಂಗುಸಿ ತಲೆಬುರುಡೆ.

ಮುಂಗುಸಿಯ ಮುಖ ಮತ್ತು ಶರೀರ ಉದ್ದವಿರುತ್ತದೆ. ಸಣ್ಣ, ದುಂಡಗಿನ ಕಿವಿಗಳು, ಕಿರಿದಾದ ಕಾಲುಗಳು, ಹಾಗೂ ಉದ್ದನೆಯ, ಚೂಪಾದ ಬಾಲ ಹೊಂದಿದೆ. ಹಲವು ಮುಂಗುಸಿಗಳು ನಸುಬೂದು ಬಣ್ಣದ್ದಾಗಿವೆ. ಕೆಲವು ಮುಂಗುಸಿಗಳ ತುಪ್ಪುಳುಗಳ ಮೇಲೆ ಎದ್ದುಕಾಣುವಂತಹ ಗುರುತುಗಳಿವೆ. ಮುಂಗುಸಿಗಳು ಹಿಂದೆಳೆಯಲಾಗದ ಉಗುರುಗಳನ್ನು ಹೊಂದಿದ್ದು, ಭೂಮಿಯನ್ನು ಅಗೆಯಲು ಅವನ್ನು ಬಳಸುತ್ತವೆ. ಮೇಕೆಗಳಂತೆಯೇ ಮುಂಗುಸಿಗಳೂ ಕಿರಿದಾದ, ಅಂಡಾಕಾರದ ಕಣ್ಣುಪಾಪೆ ಹೊಂದಿವೆ. ಬಹಳಷ್ಟು ಜಾತಿಗಳು ಗುದದ್ವಾರದ ಬಳಿ ದೊಡ್ಡ ಗಂಧ ಗ್ರಂಥಿ ಹೊಂದಿದ್ದು, ತಮ್ಮ ಸರಹದ್ದುಗಳನ್ನು ಗುರುತಿಸಲು ಹಾಗೂ ತಮ್ಮ ಸಂತಾನೋತ್ಪತ್ತಿ ಮಾಡುವ ಸ್ಥಿತಿಯನ್ನು ತಿಳಿಸಲು ಈ ಗಂಧ ಗ್ರಂಥಿಯನ್ನು ಬಳಸುತ್ತವೆ. ಮುಂಗುಸಿಗಳ ದಂತವಿನ್ಯಾಸವು ಪುನುಗುಬೆಕ್ಕುಗಳದಂತೆಯೇ ಇದೆ. 3.1.3-4.1-23.1.3-4.1-2 ಮುಂಗುಸಿಗಳು ಸಹ ಅಸಿಟಿಲ್ಕೊಲೀನ್‌ ಎಂಬ ರಾಸಾಯನಿಕ ದ್ರವ ಮೂಸುವ ಸಂವೇದಿ ಅಂಗ ಹೊಂದಿವೆ. ಇವುಗಳ ರಚನೆ ಮತ್ತು ಆಕಾರವು ಹಾವುಗಳ ಸಂವೇದಿ ಅಂಗಗಳಂತೆಯೇ ಇದೆ. ಇದರಿಂದಾಗಿ, ಹಾವಿನ ನರಘಾತಕ ವಿಷವು ಮುಂಗುಸಿಗಳ ಮೇಲೆ ಯಾವುದೇ ಪ್ರಭಾವ ಬೀರುವುದಿಲ್ಲ. ಇದೇ ರೀತಿ, ರಕ್ತ-ಘಾತಕ ಹಾವಿನ ವಿಷಗಳಿಂದಲೂ ಮುಂಗುಸಿಗೆ ರಕ್ಷಣೆಯಿದೆಯೇ ಎಂಬುದರ ಬಗ್ಗೆ ಸಂಶೋಧಕರು ಪತ್ತೆ ಮಾಡುವಲ್ಲಿ ಮಗ್ನರಾಗಿದ್ದಾರೆ.[]

ವೀಜಲ್‌ ಪ್ರಾಣಿಯ ತದ್ರೂಪಿ

ಬದಲಾಯಿಸಿ

ನಿಕಟ ಸಂಬಂಧವಿಲ್ಲದಿದ್ದರೂ, ಮುಂಗುಸಿಯು ರೂಪದಲ್ಲಿ ವೀಜಲ್‌ ಪ್ರಾಣಿಯನ್ನು ಹೋಲುತ್ತದೆ. ಅವುಗಳ ಉದ್ದ ಮತ್ತು ತೆಳ್ಳಗಿನ ಶರೀರಗಳು ಹಾಗೂ ಕಿರಿದಾದ ತುಪ್ಪುಳುಗಳಿಂದಾಗಿ, ಒಂದೇ ತರಹದ ಪರಿಸರಕ್ಕೆ ಹೊಂದಿಕೊಳ್ಳುತ್ತವೆ. ಎರಡೂ ಪ್ರಾಣಿಗಳು ಒಂದೇ ರೀತಿಯ ಹವಾಗುಣಗಳಿರುವ ಪ್ರದೇಶಗಳಲ್ಲಿ ವಾಸಿಸುತ್ತವೆ ಹಾಗೂ ಭೂಮಿಯಡಿಯಲ್ಲಿ ಬಿಲ ತೋಡುವ ಪ್ರವೃತ್ತಿ ಹೊಂದಿವೆ. ವೀಜಲ್‌ ಪ್ರಾಣಿಗಳಂತೆ, ಮುಂಗುಸಿಗಳು ಕಿರಿದಾದ ಕಾಲುಗಳು ಮತ್ತು ಬಾಲ ಹೊಂದಿವೆ.

ಮುಂಗುಸಿಯ ಬದುಕಿನ ಇತಿಹಾಸ

ಬದಲಾಯಿಸಿ
  • ವೃಕ್ಷವಾಸಿ ಹಾಗೂ ನಿಶಾಚರಿ ಪುನುಗುಬೆಕ್ಕುಗಳಿಗೆ ತದ್ವಿರುದ್ಧವಾಗಿ, ಮುಂಗುಸಿಗಳು ಸಾಮಾನ್ಯವಾಗಿ ಭೂಚರ ಹಾಗೂ ಹಗಲಿನ ವೇಳೆ ಸಕ್ರಿಯವಾಗಿರುವ ಪ್ರಾಣಿಗಳು. ಈಜಿಪ್ಟ್‌ ಮುಂಗುಸಿಯನ್ನು (ಹರ್ಪೆಸ್ಟೆಸ್‌ ಇಕ್ನೂಮನ್‌ (Herpestes ichneumon)) ಕೆಲವೊಮ್ಮೆ ಒಂಟಿಯಾಗಿ ಜೀವಿಸುವ ಮುಂಗುಸಿಯ ಉದಾಹರಣೆ ಎನ್ನಲಾಗಿದೆ. ಆದರೂ ಇದು ಕೆಲವೊಮ್ಮೆ ಗುಂಪುಗಳಲ್ಲಿ ಓಡಾಡುವುದು ಕಂಡುಬಂದಿದೆ.[]
  • ಮೀರ್ಕಟ್‌ ಅಥವಾ ಸುರಿಕೇಟ್‌ (ಸುರಿಕೆಟಾ ಸುರಿಕೆಟ್ಟಾ (Suricata suricatta)) ಎಂಬ ಇನ್ನಷ್ಟು ಸಣ್ಣ ಜಾತಿಯ ಮುಂಗುಸಿಗಳು 20 ರಿಂದ 30 ಮುಂಗುಸಿಗಳ ಗುಂಪಿನಲ್ಲಿ ವಾಸಿಸುತ್ತವೆ. ಆಫ್ರಿಕಾ ಖಂಡದ ದಕ್ಷಿಣ ಭಾಗದ ದೇಶಗಳಾದ ಅಂಗೊಲಾ, ನಮೀಬಿಯಾ, ಬೊಟ್ಸ್ವಾನಾ ಹಾಗೂ ದಕ್ಷಿಣ ಆಫ್ರಿಕಾ ದೇಶಗಳ ಬಯಲುಸೀಮೆ ಪ್ರದೇಶಗಳಲ್ಲಿ ವಾಸಿಸುವ ಈ ಗುಂಪಿನಲ್ಲಿ ಸಾಮಾನ್ಯವಾಗಿ ಆಲ್ಫಾ ಗಂಡು ಮತ್ತು ಹೆಣ್ಣು ಮುಂಗುಸಿ, ರಕ್ತಸಂಬಂಧಿ ಮತ್ತು ಮರಿಗಳೊಂದಿಗೆ ಒಟ್ಟಿಗೆ ವಾಸಿಸುತ್ತವೆ. ಮೀರ್ಕಟ್‌ ಸಣ್ಣದಾದ, ಹಗಲಿನ ವೇಳೆ ಸಕ್ರಿಯವಾಗಿರುವ ಸಸ್ತನಿ. ಇದು ಬಯಲು ಪ್ರದೇಶದಲ್ಲಿ ಅಕಶೇರುಕ ಪ್ರಾಣಿಗಳನ್ನು ಬೇಟೆಯಾಡಿ ಭಕ್ಷಿಸುತ್ತದೆ.
  • ಇದರ ನಡತೆ ಮತ್ತು ಸಣ್ಣ ಗಾತ್ರದಿಂದಾಗಿ (ಇದರ ತೂಕ 1 kilogram (2.2 lb) ಗಿಂತಲೂ ಕಡಿಮೆ) ದೊಡ್ಡ ಗಾತ್ರದ ಮಾಂಸಾಹಾರಿ ಪ್ರಾಣಿಗಳು ಮತ್ತು ಬೇಟೆ ಹಕ್ಕಿಗಳ ಆಹಾರವಾಗುವುದುಂಟು. ಆದರೆ, ಇದು ಸಣ್ಣ ಗಾತ್ರದ, ವಲಸೆ ಹೋಗುವ ಪಕ್ಷಿಗಳನ್ನು ಭಕ್ಷಿಸುತ್ತದೆ. ಸಂಚರಿಸುತ್ತಿರುವ ಮುಂಗುಸಿ ಗುಂಪನ್ನು ಪರಭಕ್ಷಕ ಪ್ರಾಣಿಗಳಿಂದ ರಕ್ಷಿಸಲು, ಒಂದು ಮೀರ್ಕಟ್‌ ಮುಂಗುಸಿಯು ಕಾವಲುಗಾರನಂತೆ, ಸುತ್ತಲಿರುವ ಜಾಗದ 'ಪಕ್ಷಿನೋಟ' ನೋಡಲು ಸೂಕ್ತ ಸ್ಥಳಕ್ಕೆ ಧಾವಿಸಿ, ಯಾವುದಾದರೂ ಅಪಾಯ ಸಂಕೇತವಿದ್ದಲ್ಲಿ ಗುರುತಿಸಿ ಎಚ್ಚರಿಸುತ್ತದೆ.
  • ಕಾವಲು ಮುಂಗುಸಿಯು ಯಾವುದಾದರೂ ಪರಭಕ್ಷಕ ಪ್ರಾಣಿಯನ್ನು ಪತ್ತೆ ಮಾಡಿದಲ್ಲಿ, ಜೋರು ಸದ್ದು ಮಾಡಿ ಗುಂಪಿನಲ್ಲಿರುವ ಇತರೆ ಮುಂಗುಸಿಗಳನ್ನು ಎಚ್ಚರಿಸಿ, ಪರಭಕ್ಷಕ ಪ್ರಾಣಿಯು ಮೇಲಿದೆಯೊ ಅಥವಾ ಭೂಮಿಯಲ್ಲಿದೆಯೋ ಎಂಬುದನ್ನು ಸೂಚಿಸುತ್ತದೆ. ಪರಭಕ್ಷಕವು ಮೇಲಿದ್ದಲ್ಲಿ, ಮೀರ್ಕಟ್‌ಗಳೆಲ್ಲವೂ ಅತಿ ಸನಿಹದಲ್ಲಿರುವ ಬಿಲದತ್ತ ಧಾವಿಸಿ ಅವಿತುಕೊಳ್ಳುತ್ತವೆ. ಪರಭಕ್ಷಕವು ನೆಲದಲ್ಲಿದ್ದಲ್ಲಿ, ಗುಂಪು ಓಡುತ್ತದೆ. ಆದರೂ ಈ ಗುಂಪು ಭೂಚರ ಪರಭಕ್ಷಕಗಳಿಂದ ಪಾರಾಗಬಹುದಾದರೂ ಗಿಡುಗ, ಗೂಬೆಗಳಂತಹ ಹಿಂಸ್ರ ಪಕ್ಷಿಗಳಿಂದ ತಪ್ಪಿಸಿಕೊಳ್ಳಲಾಗದು.

ಆಹಾರ ಭಕ್ಷಣ ಪ್ರವೃತ್ತಿ

ಬದಲಾಯಿಸಿ
  • ಮುಂಗುಸಿಗಳು ಸಾಮಾನ್ಯವಾಗಿ ಕೀಟ, ಏಡಿ, ಎರೆಹುಳು, ಹಲ್ಲಿ, ಹಾವು, ಕೋಳಿ ಮತ್ತು ದಂಶಕ ಪ್ರಾಣಿಗಳನ್ನು ಬೇಟೆಯಾಡಿ ಭಕ್ಷಿಸುತ್ತವೆ. ಆದರೂ ಮುಂಗುಸಿಗಳು ಕೆಲವೊಮ್ಮೆ ಮೊಟ್ಟೆಗಳು ಮತ್ತು ಕೊಳೆತ ಮಾಂಸ ತಿನ್ನುವುದುಂಟು. ಮಂಡಲದ ಹಾವು ಸೇರಿದಂತೆ ಹಲವು ವಿಷಪೂರಿತ ಹಾವುಗಳೊಡನೆ ಸೆಣಸಿ ಕೊಲ್ಲಲೆಂದು, ಭಾರತದ ಮುಂಗುಸಿ ಮತ್ತು ಇತರೆ ಜಾತಿಗಳ ಮುಂಗುಸಿಗಳನ್ನು ವ್ಯಾಪಕವಾಗಿ ಬಳಸಲಾಗುತ್ತಿದೆ.
  • ಮುಂಗುಸಿಗಳು ಬಹಳ ಚುರುಕು ಹಾಗೂ ಕುಶಾಗ್ರಬುದ್ಧಿಯುಳ್ಳ ಪ್ರಾಣಿಗಳು, ಹಾಗೂ ಅವು ದಪ್ಪ ತುಪ್ಪುಳು ಹೊಂದಿರುವುದರಿಂದ ಅವು ಹಾವುಗಳನ್ನು ಸುಲಭವಾಗಿ ಕೊಲ್ಲಬಲ್ಲವು. ಅವು ಸಾಮಾನ್ಯವಾಗಿ ನಾಗರಹಾವಿನ ತಂಟೆಗೆ ಹೋಗುವುದಿಲ್ಲ ಹಾಗೂ ನಾಗರಹಾವಿನ ಮಾಂಸ ಭಕ್ಷಣೆಯತ್ತ ಸಹ ಅದಕ್ಕೆ ವಿಶೇಷ ಒಲವಿಲ್ಲ.[] ಕೆಲವು ಜಾತಿಯ ಮುಂಗುಸಿಗಳು ಸರಳ ತಂತ್ರಗಳನ್ನು ಕಲಿಯಬಲ್ಲವು.
  • ಪೀಡಕ ಪ್ರಾಣಿಗಳನ್ನು ನಿಯಂತ್ರಿಸಲು ಮುಂಗುಸಿಗಳನ್ನು ಸಾಕುವುದುಂಟು. ಆದರೂ, ಇವು ಅಗತ್ಯಕ್ಕಿಂತಲೂ ಹೆಚ್ಚು ಹಾನಿಕರವಾಗಬಹುದು. ಇಲಿ ಮತ್ತು ಹಾವುಗಳನ್ನು ಕೊಲ್ಲಲೆಂದು ಮುಂಗುಸಿಗಳನ್ನು ವೆಸ್ಟ್‌ ಇಂಡೀಸ್‌ನಲ್ಲಿ ಆಮದು ಮಾಡಿಕೊಂಡಾಗ, ಸಣ್ಣ ಗಾತ್ರದ, ಉಪಯುಕ್ತ ಎನ್ನಲಾದ ಭೂಚರ ಪ್ರಾಣಿಗಳನ್ನು ಸಹ ಇವು ಕೊಂದಿದ್ದವು. ಇದೇ ಕಾರಣಕ್ಕಾಗಿ, ಮುಂಗುಸಿಗಳ ಹಲವು ಜಾತಿಗಳನ್ನು ಅಮೆರಿಕಾ ಸಂಯುಕ್ತ ಸಂಸ್ಥಾನ [], ಆಸ್ಟ್ರೇಲಿಯಾ ಮತ್ತು ಇತರೆ ದೇಶಗಳಲ್ಲಿ ಆಮದು ಮಾಡುವುದನ್ನು ಕಾನೂನು-ಬಾಹಿರ ಎಂದು ಘೋಷಿಸಲಾಗಿದೆ. 1883ರಲ್ಲಿ ಮುಂಗುಸಿಗಳನ್ನು ಹವಾಯಿ ದ್ವೀಪಗಳಲ್ಲಿ ಪರಿಚಯಿಸಲಾಯಿತು. ಇದರಿಂದಾಗಿ ಸ್ಥಳೀಯ ಜಾತಿಯ ಪ್ರಾಣಿಗಳ ಮೇಲೆ ಗಮನಾರ್ಹ ನಕಾರಾತ್ಮಕ ಪ್ರಭಾವ ಬೀರಿದ್ದವು.[]

ಸಂತಾನೋತ್ಪತ್ತಿ

ಬದಲಾಯಿಸಿ

ಮುಂಗುಸಿಯು ಸಂಗ ನಡೆಸುವಾಗ ಕಿಸಿಕಿಸಿ ನಗುವಂತಹ ಜೋರು ಸದ್ದು ಹೊರಡಿಸುತ್ತದೆ. ಗಂಡು-ಹೆಣ್ಣು ಮುಂಗುಸಿಗಳು ಒಟ್ಟಿಗೆ ಬಂದಾಗಲೂ ಸಹ ಈ ರೀತಿಯ ಸದ್ದು ಕೇಳಿಬರುವುದುಂಟು.[೧೦]

ಮಾನವನೊಂದಿಗೆ ಸಂಬಂಧ

ಬದಲಾಯಿಸಿ
  • ಭಾರತ ಮತ್ತು ಪಾಕಿಸ್ತಾನ ದೇಶಗಳಲ್ಲಿ, ರಸ್ತೆ ಬದಿಯ ಪ್ರದರ್ಶನಗಳಲ್ಲಿ ಮುಂಗುಸಿಗಳನ್ನು ಪ್ರದರ್ಶಿಸುವುದು ಸರ್ವೇಸಾಮಾನ್ಯ. ಹಾವಾಡಿಗರು ಹಾವುಗಳೊಡನೆ ಅಣಕು-ಕದನ ಮಾಡಲೆಂದೇ ಮುಂಗುಸಿಗಳನಿಟ್ಟುಕೊಳ್ಳುವರು. ಒಕಿನಾವಾದಲ್ಲಿ ಮುಚ್ಚಲಾದ ಆವರಣದಲ್ಲಿ, ಮುಂಗುಸಿಗಳು ಹಬು ಅಥವಾ ಮಂಡಲದ ಹಾವಿನೊಡನೆ (ಟ್ರೈಮೆರೆಸುರಸ್ ‌ ಜಾತಿಯ ಸ್ಥಳೀಯ, ವಿಷಪೂರಿತ ಸದಸ್ಯ) ಸೆಣಸುತ್ತವೆ. ಸುತ್ತಮುತ್ತ ನೆರೆದಿರುವ ಪ್ರೇಕ್ಷಕರು ಈ ಸೆಣಸಾಟವನ್ನು ವೀಕ್ಷಿಸುವರು.
  • ಆದರೆ, ಪ್ರಾಣಿದಯಾ ಸಂಘದವರು ತೀವ್ರವಾಗಿ ಆಕ್ಷೇಪಿಸಿದ ನಂತರ ಈ ಸೆಣಸಾಟವನ್ನು ಕಡಿಮೆಗೊಳಿಸಲಾಗಿದೆ. ಗ್ರೀಕ್‌ ಇತಿಹಾಸಕಾರ ಡಿಯೊಡೊರಸ್‌ ಸಿಕುಲಸ್‌ ಪ್ರಕಾರ, (1.35 & 1.87) ಸ್ಥಳೀಯ ಮುಂಗುಸಿಗಳು (ಹರ್ಪೆಸ್ಟೆಸ್‌ ಇಕ್ನೂಮನ್ ‌) ವಿಷಪೂರಿತ ಹಾವುಗಳನ್ನು ಸೆಣಸುವ ಹಾಗೂ ಆಗೊಮ್ಮೆ-ಈಗೊಮ್ಮೆ ಮೊಸಳೆಯ ಮೊಟ್ಟೆಗಳನ್ನು ತಿನ್ನುವ ಕಾರಣ, ಈಜಿಪ್ಟಿಯನ್ನರು ಅವುಗಳನ್ನು ಪೂಜ್ಯ ಎಂದು ಪರಿಗಣಿಸುತ್ತಿದ್ದರು.
  • ರಡ್ಯಾರ್ಡ್‌ ಕಿಪ್ಲಿಂಗ್‌ ಅವರ ಕಾಲ್ಪನಿಕ ಕಥೆ ರಿಕಿ-ಟಿಕಿ-ಟವಿ ಯಲ್ಲಿ ಸಾಕುಪ್ರಾಣಿ ಮುಂಗುಸಿಯು ತನ್ನ ಮಾಲಿಕನ ಕುಟುಂಬವನ್ನು ಎರಡು ಅಪಾಯಕಾರಿ ನಾಗರಹಾವುಗಳಿಂದ ರಕ್ಷಿಸುವ ಕಥೆಯಿತ್ತು. ಈ ಕಥೆಯನ್ನು ಆಯ್ದುಕೊಂಡು ಹಲವು ಚಲನಚಿತ್ರಗಳು ನಿರ್ಮಿತವಾದವು.
  • ಕೃತಕ ಚರ್ಮಗಳನ್ನು ಸೃಷ್ಟಿಸುವ ಸಂಶೋಧನೆಗಳಲ್ಲಿ ಮುಂಗುಸಿಗಳನ್ನು ಬಳಸಲಾಗುತ್ತಿತ್ತು. ಸುಟ್ಟ ಗಾಯಗಳ ಚಿಕಿತ್ಸೆಯಲ್ಲಿ ಗಾಯಗಳ ಮೇಲೆ ಹೊದಿಸಬಹುದಾದ ಚರ್ಮದಂತಹ ಅರ್ಧಪ್ರವೇಶ್ಯ ಪೊರೆಯನ್ನು ಸೃಷ್ಟಿಸಲು, ಮುಂಗುಸಿಗಳಿಗೆ ಪಾಲಿಟೆಟ್ರಾಫ್ಲುವೊರೊಎಥಿಲಿನ್‌ ಆಧಾರಿತ ಪಾಲಿಮರ್‌ನ ಕಸಿಗಳನ್ನು ನೀಡಲಾಗುತ್ತಿತ್ತು.

ಜೀವಿವರ್ಗೀಕರಣಶಾಸ್ತ್ರ

ಬದಲಾಯಿಸಿ
 
ಸಣ್ಣ ಮುಂಗುಸಿ (ಹೆಲೊಜೆಲ್‌ ಪರ್ವುಲಾ (Helogale parvula))
  • ಇತರೆ ಫೆಲಿಫಾರ್ಮಿಯನ್‌ ಮಾಂಸಾಹಾರಿ ಸಸ್ತನಿಗಳಂತೆ, ಮುಂಗುಸಿಗಳು ಸಹ ಸಿವೆಟ್‌ ಅಥವಾ ಜೆನೆಟ್‌ ಪುನುಗು ಬೆಕ್ಕಿನಂತಹ ವಿವೆರಾವಿನ್ಸ್‌ ಸಸ್ತನಿಗಳಿಂದ ಉಗಮಿಸಿದವು. ಹಳೆಯ ವಿಂಗಡಣೆಗಳ ಪ್ರಕಾರ, ಮುಂಗುಸಿಗಳನ್ನು ವಿವರಿಡೀ (Viverridae) ಕುಟುಂಬದಲ್ಲಿ ಸೇರಿಸಲಾಗಿತ್ತು. ಆದರೆ ರೂಪವೈಜ್ಞಾನಿಕ ಮತ್ತು ಆಣ್ವಿಕ ಸಾಕ್ಷ್ಯಗಳು ಈ ಕುಟುಂಬದ ಏಕಸ್ರೋತೊದ್ಭವತೆಗೆ (monophyly) ವಿರುದ್ಧವಾಗಿವೆ. ಮುಂಗುಸಿಗಳ ದಂತವಿನ್ಯಾಸವು ಪುನುಗು ಬೆಕ್ಕುಗಳಕ್ಕಿಂತ ಭಿನ್ನವಾಗಿದೆ.
  • ಮುಂಗುಸಿಗಳ ವಿಶಿಷ್ಟ ವರ್ತನೆಗಳಿಂದಾಗಿ ಅವುಗಳನ್ನು ಪುನುಗುಬೆಕ್ಕುಗಳು ಮತ್ತು ಇತರೆ ಫೆಲಿಫಾರ್ಮಿಯನ್‌ ಕುಟುಂಬಗಳಿಗಿಂತ ಭಿನ್ನವಾಗಿಸಿದೆ. ಪುನುಗುಬೆಕ್ಕುಗಳಿಂದ ಭಿನ್ನತೆ ಕಡಿಮೆಯಾಗಿದ್ದು, ಮುಂಗುಸಿ ಕುಟುಂಬದಲ್ಲಿ 14 ಪ್ರಭೇದಗಳು ಹಾಗೂ 33 ಜಾತಿಗಳಿವೆ.

ಹಿಲೊಜೆಲ್‌ ಪರ್ವುಲಾ (Helogale pervula) (ಸಾಮಾನ್ಯ ಸಣ್ಣ ಮುಂಗುಸಿ) ಇದು ಹಯೆನಿಡೀ (Hyaenidae) (ಹಯೆನಾ), ವಿವರಿಡೆ (ಸಿವೆಟ್‌ ಬೆಕ್ಕು) ಹಾಗೂ ಫೆಲಿಡೆ (Felidae) (ಬೆಕ್ಕುಗಳು) ಕುಟುಂಬಗಳೊಂದಿಗೆ ನಿಕಟ ಸಂಬಂಧ ಹೊಂದಿದೆ.

  • ಒಂದೇ ಪೂರ್ವಜದಿಂದ ಉಗಮಿಸಿದ ಜಾತಿಗಳು ಸಹ, ವೀಜಲ್‌, ಬಿಲಕರಡಿ ಮತ್ತು ನೀರುನಾಯಿ ಜಾತಿಗಳನ್ನು ಹೊಂದಿರುವ ಮುಸ್ಟೆಲಿಡೆ (Mustelidae) ಕುಟುಂಬಕ್ಕಿಂತಲೂ ಹೆಚ್ಚಾಗಿ ನಾಯಿ ಕುಟುಂಬದೊಂದಿಗೆ ಬಹಳ ನಿಕಟ ಸಂಬಂಧ ಹೊಂದಿದೆ. ತಳೀಯ ಸಾಕ್ಷ್ಯಗಳ ಪ್ರಕಾರ, ಯೂಪ್ಲೆರಿಡೀ (Eupleridae) ಕುಟುಂಬದ ಸದಸ್ಯ ಪ್ರಾಣಿಗಳು ಮುಂಗುಸಿಗಳಿಗೆ ಬಹಳಷ್ಟು ನಿಕಟವಾದ ಜೀವಂತ ಸಮೂಹವಾಗಿದೆ. ಯೂಪ್ಲೆರಿಡೀ ಕುಟುಂಬವು ಫೊಸಾ (Fossa) ಜಾತಿಯನ್ನೊಳಗೊಂಡಿದೆ.
  • ಹಲವು ಜೀವಕಣ ಮತ್ತು ಮೈಟಕಾಂಡ್ರಿಯಲ್‌ (ಉಸಿರಾಟದ ವಿಶೇಷ ಅಂಗಯುಳ್ಳ) ವಂಶವಾಹಿನಿಗಳಿಂದ ಲಭ್ಯವಾದ ತಳೀಯ ಸಾಕ್ಷ್ಯಗಳು, ಮಡಗಾಸ್ಕರ್‌ ದೇಶದ ಗೆಲಿಡೀನೆ ಕುಟುಂಬವನ್ನು ಮುಂಗುಸಿ ಕುಟುಂಬದೊಂದಿಗೆ ಸೇರಿಸುವುದನ್ನು ವಿರೋಧಿಸುತ್ತದೆ. ಬದಲಿಗೆ, ಫೊಸಾ ಹಾಗೂ ಮಲಗಸಿ ಪುನುಗುಬೆಕ್ಕು ಸೇರಿದಂತೆ ಮಡಗಾಸ್ಕರ್‌ನ ಇತರೆ ಮಾಂಸಾಹಾರಿ ಸಸ್ತನಿಗಳೊಂದಿಗೆ ಈ ಜಾತಿಯು ನಿಕಟ ಸಂಬಂಧ ಹೊಂದಿದೆ.[೧೧][೧೨] ಇದರ ಫಲವಾಗಿ, ಈ ಉಪ-ಕುಟುಂಬವನ್ನು ಹರ್ಪೆಸ್ಟಿಡೆ ಕುಟುಂಬದಿಂದ ಹೊರಸರಿಸಿ, ಯುಪ್ಲೆರಿಡೀ ಕುಟುಂಬಕ್ಕೆ ಸೇರಿಸಲಾಯಿತು.

ವರ್ಗೀಕರಣ

ಬದಲಾಯಿಸಿ
  • ಕುಟುಂಬ ಹರ್ಪೆಸ್ಟಿಡಿ (FAMILY HERPESTIDAE)
    • ಪ್ರಭೇದ ಅಟಿಲ್ಯಾಕ್ಸ್‌ (Atilax)
      • ಜವುಗು ಮುಂಗುಸಿ, ಅಟಿಲ್ಯಾಕ್ಸ್‌ ಪಲುಡಿನೊಸಸ್‌ (Atilax paludinosus)
    • ಪ್ರಭೇದ ಡಿಯೊಗೆಲ್ (Bdeogale)‌
      • ಪೊದೆ-ಬಾಲದ ಮುಂಗುಸಿ, ಡಿಯೊಗೆಲ್‌ ಕ್ರಾಸಿಕಾಡಾ (Bdeogale crassicauda)
      • ಜ್ಯಾಕ್ಸನ್ಸ್‌ ಮುಂಗುಸಿ, ಡಿಯೊಗೆಲ್‌ ಜ್ಯಾಕ್ಸನಿ (Bdeogale jacksoni)
      • ಕರಿ-ಕಾಲುಗಳ ಮುಂಗುಸಿ, ಡಿಯೊಗೆಲ್‌ ನಿಗ್ರಿಪೆಸ್‌ (Bdeogale nigripes)
    • ಪ್ರಭೇದ ಕ್ರಾಸಾರ್ಚಸ್‌ (Crossarchus)
      • ಅಲೆಕ್ಸಾಂಡರ್ಸ್‌ ಕುಸಿಮಾನ್ಸ್‌, ಕ್ರಾಸಾರ್ಚಸ್‌ ಅಲೆಕ್ಸಾಂಡ್ರಿ (Crossarchus alexandri)
      • ಅಂಗೊಲನ್‌ ಕುಸಿಮಾನ್ಸ್‌, ಕ್ರಾಸಾರ್ಚಸ್‌ ಅನ್ಸಾರ್ಜೆ (Crossarchus ansorgei)
      • ಸಾಮಾನ್ಯ ಕುಸಿಮಾನ್ಸ್‌, ಕ್ರಾಸಾರ್ಚಸ್‌ ಒಬ್ಸ್ಕರಸ್‌ (Crossarchus obscurus)
      • ಚಪ್ಪಟೆ-ತಲೆಯ ಕುಸಿಮಾನ್ಸ್‌, ಕ್ರಾಸಾರ್ಚಸ್‌ ಪ್ಲ್ಯಾಟಿಸೆಫಲಸ್‌ (Crossarchus platycephalus)
    • ಪ್ರಭೇದ ಸಿನಿಕ್ಟಿಸ್‌ (Cynictis)
      • ಹಳದಿ ಮುಂಗುಸಿ, ಸಿನಿಕ್ಟಿಸ್‌ ಪೆನಿಸಿಲೆಟಾ (Cynictis penicillata)
    • ಪ್ರಭೇದ ಡೊಲೊಜೆಲ್‌ (Dologale)
      • ಪುಸರ್ಗುಸ್‌ ಮುಂಗುಸಿ, ಡೊಲೊಜೆಲ್‌ ಡೈಬೊವ್‍ಸ್ಕಿ (Dologale dybowskii)
    • ಪ್ರಭೇದ ಗಲೆರೆಲಾ (Galerella)
      • ಅಂಗೊಲಾದ ನೀಳಕಾಯದ ಮುಂಗುಸಿ, ಗಲೆರೆಲಾ ಫ್ಲೆವೆಸ್ಕೆನ್ಸ್‌ (Galerella flavescens)
      • ಸೊಮಾಲಿ ನೀಳಕಾಯದ ಮುಂಗುಸಿ, ಗಲೆರೆಲಾ ಒಕ್ರಾಕಿಯಾ (Galerella ochracea)
      • ಕೇಪ್‌ ಗ್ರೇ ಮುಂಗುಸಿ, ಗಲೆರೆಲಾ ಪಲ್ವೆರುಲೆಂಟಾ (Galerella pulverulenta)
      • ನೀಳಕಾಯದ ಮುಂಗುಸಿ, ಗಲೆರೆಲಾ ಸಾಂಗ್ವಿನಿಯಾ (Galerella sanguinea)
    • ಪ್ರಭೇದ ಹೆಲೊಜೆಲ್‌ (Helogale)
      • ಎಥ್ಯೊಪಿಯನ್‌ ಪುಟ್ಟ ಮುಂಗುಸಿ, ಹೆಲೊಜೆಲ್‌ ಹರ್ಟುಲಾ (Helogale hirtula)
      • ಸಾಮಾನ್ಯ ಪುಟ್ಟ ಮುಂಗುಸಿ, ಹೆಲೊಜೆಲ್‌ ಪರ್ವುಲಾ (Helogale parvula)
    • ಪ್ರಭೇದ ಹರ್ಪೆಸ್ಟೆಸ್‌ (Herpestes)
      • ಕಿರು-ಬಾಲದ ಮುಂಗುಸಿ, ಹರ್ಪೆಸ್ಟೆಸ್‌ ಬ್ರಾಕ್ಯುರಸ್‌ (Herpestes brachyurus)
      • ಭಾರತದ ನರೆ ಮುಂಗುಸಿ, ಹರ್ಪೆಸ್ಟೆಸ್‌ ಎಡ್ವರ್ಡ್ಸಿ (Herpestes edwardsii)
      • ಭಾರತದ ಕಂದು ಮುಂಗುಸಿ, ಹರ್ಪೆಸ್ಟೆಸ್‌ ಫುಸ್ಕಸ್‌ (Herpestes fuscus)
      • ಇಜಿಪ್ಟಿನ ಮುಂಗುಸಿ, ಹರ್ಪೆಸ್ಟೆಸ್‌ ಇಕ್ನುಮೊನ್‌ (Herpestes ichneumon)
      • ಸಣ್ಣ ಏಷ್ಯನ್‌ ಮುಂಗುಸಿ, ಹರ್ಪೆಸ್ಟೆಸ್‌ ಜಾವಾನಿಕಸ್‌ (Herpestes javanicus)
      • ಉದ್ದ ಮೂಗಿನ ಮುಂಗುಸಿ, ಹರ್ಪೆಸ್ಟೆಸ್‌ ನಾಸೊ (Herpestes naso)
      • ಕೊರಳುಳ್ಳ ಮುಂಗುಸಿ, ಹರ್ಪೆಸ್ಟೆಸ್‌ ಸೆಮಿಟೊರ್ಕ್ವೇಟಸ್‌ (Herpestes semitorquatus)
      • ಮಿರುಗೆಂಪಿನ ಮುಂಗುಸಿ, ಹರ್ಪೆಸ್ಟೆಸ್‌ ಸ್ಮಿತಿ (Herpestes smithii)
      • ಏಡಿ-ಭಕ್ಷಕ ಮುಂಗುಸಿ, ಹರ್ಪೆಸ್ಟೆಸ್‌ ಉರ್ವಾ (Herpestes urva)
      • ಪಟ್ಟಿ-ಕೊರಳಿನ ಮುಂಗುಸಿ, ಹರ್ಪೆಸ್ಟೆಸ್‌ ವಿಟ್ಟಿಕೊಲಿಸ್‌ (Herpestes vitticollis)
    • ಪ್ರಭೇದ ಇಕ್ನ್ಯೂಮಿಯಾ (Ichneumia)
      • ಬಿಳಿ-ಬಾಲದ ಮುಂಗುಸಿ, ಇಕ್ನೂಮಿಯಾ ಅಲ್ಬಿಕಾಡಾ (Ichneumia albicauda)
    • ಪ್ರಭೇದ ಲಿಬರೀಕ್ಟಸ್‌ (Liberiictus)
      • ಲೈಬೀರಿಯನ್‌ ಮುಂಗುಸಿ, ಲೈಬರೀಕ್ಟಿಸ್‌ ಕುಹ್ನಿ (Liberiictis kuhni)
    • ಪ್ರಭೇದ ಮುಂಗೊಸ್‌ (Mungos)
      • ಗಾಂಬಿಯನ್‌ ಮುಂಗುಸಿ, ಮುಂಗೊಸ್‌ ಗ್ಯಾಂಬಿಯನಸ್‌ (Mungos gambianus)
      • ಪಟ್ಟಿಯುಳ್ಳ ಮುಂಗುಸಿ, ಮುಂಗೊಸ್‌ ಮುಂಗೊ (Mungos mungo)
    • ಪ್ರಭೇದ ಪ್ಯಾರಾಸಿನಿಕ್ಟಿಸ್‌ (Paracynictis)
      • ಸೆಲಸ್‌' ಮುಂಗುಸಿ, ಪ್ಯಾರಾಸಿನಿಕ್ಟಿಸ್‌ ಸೆಲಸಿ (Paracynictis selousi)
    • ಪ್ರಭೇದ ರಿಂಕೊಜೆಲ್‌ (Rhynchogale)
      • ಮೆಲ್ಲರ್ಸ್‌ ಮುಂಗುಸಿ, ರಿಂಕೊಜೆಲ್‌ ಮೆಲ್ಲೆರಿ (Rhynchogale melleri)
    • ಪ್ರಭೇದ ಸುರಿಕೆಟಾ (Suricata)
      • ಮೀರ್ಕಟ್‌, ಸುರಿಕೆಟಾ ಸುರಿಕೆಟ್ಟಾ (Suricata suricatta)

ಚಿತ್ರ ಸಂಪುಟ

ಬದಲಾಯಿಸಿ

ಉಲ್ಲೇಖಗಳು

ಬದಲಾಯಿಸಿ
  1. Wozencraft, W. C. (2005). "Order Carnivora". In Wilson, D. E.; Reeder, D. M (eds.). Mammal Species of the World (3rd ed.). Johns Hopkins University Press. pp. 532–628. ISBN 978-0-8018-8221-0. OCLC 62265494. {{cite book}}: Invalid |ref=harv (help); no-break space character in |first= at position 3 (help)
  2. "Dictionary.com: mongoose". Retrieved 2008-08-22.'
  3. "Merriam-Webster: mongoose". Retrieved 2006-04-12.
  4. ಲಿಡೆಕರ್‌, ಆರ್‌. 1894. ಎ ಹ್ಯಾಂಡ್ಬುಕ್‌ ಟು ದಿ ಕಾರ್ನಿವೊರಾ. ಪಾರ್ಟ್‌ 1, ಕ್ಯಾಟ್ಸ್‌, ಸಿವೆಟ್ಸ್‌ ಅಂಡ್‌ ಮೊಂಗೂಸಸ್‌. ಲಂಡನ್‌: ಅಲೆನ್‌.
  5. ಹೆಡ್ಜಸ್‌, ಸ್ಟೀಫೆನ್‌. "ಸಯನ್ಸ್‌: ಮೊಂಗೂಸ್‌ ಸಿಕ್ರೆಟ್‌ ಇಸ್‌ ಟು ಕಾಪಿ ಇಟ್ಸ್‌ ಪ್ರೇ"; ನ್ಯೂ ಸಯನ್ಟಿಸ್ಟ್‌; 11 ಜನವರಿ 1997. 2005ರ ನವೆಂಬರ್ 16ರಂದು ಮರುಸಂಪಾದಿಸಲಾಗಿದೆ.
  6. [http:// animaldiversity. ummz.umich.edu/ site/accounts/ information/ Herpestes_ichneumon.html "Animal Diversity Web: Herpestes ichneumon"]. Retrieved 2006-04-12. {{cite web}}: Check |url= value (help)
  7. Mondadori, Arnoldo, ed. (1988). Great Book of the Animal Kingdom. New York: Arch Cape Press. p. 301.
  8. "Animals whose importation is banned under the Lacey Act". Archived from fws.gov/newsreleases /LACYBANS.html the original on 2013-07-11. Retrieved 2006-04-12. {{cite web}}: Check |url= value (help)
  9. "Star Bulletin: Traps set to catch mongoose on Kauai". Archived from the original on 2008-10-07. Retrieved 2006-04-12.
  10. "ಆರ್ಕೈವ್ ನಕಲು". Archived from the original on 2016-08-20. Retrieved 2010-10-12.
  11. Yoder, A. D.; et al. (2003). "Single origin of Malagasy Carnivora from an African ancestor". Nature. 421 (6924): 434–437. doi:10.1038/nature01303. {{cite journal}}: Explicit use of et al. in: |last2= (help)
  12. Flynn, J. J.; et al. (2005). "Molecular Phylogeny of the Carnivora (Mammalia): Assessing the Impact of Increased Sampling on Resolving Enigmatic Relationships". Systematic Biology. 54 (2): 317–337. doi:10.1080/10635150590923326. {{cite journal}}: Explicit use of et al. in: |last2= (help)


ಹೆಚ್ಚಿನ ಓದಿಗಾಗಿ

ಬದಲಾಯಿಸಿ
  • Rasa, Anne (1986). Mongoose Watch: A Family Observed. Garden City, NY: Anchor Press/Doubleday & Co.
  • Hinton, H. E.; Dunn, A. M. S. (1967). Mongooses: Their Natural History and Behaviour. Berkeley: University of California Press. {{cite book}}: Unknown parameter |lastauthoramp= ignored (help)
"https://kn.wikipedia.org/w/index.php?title=ಮುಂಗುಸಿ&oldid=1200914" ಇಂದ ಪಡೆಯಲ್ಪಟ್ಟಿದೆ
  NODES
Done 1
News 1
Story 1