ಸಾಮಾನ್ಯ ಬಳಕೆಯಲ್ಲಿ, ಮೂಲಿಕೆ ಎಂದರೆ ರುಚಿಕರವಾದ ಅಥವಾ ಪರಿಮಳಯುಕ್ತ ಗುಣಲಕ್ಷಣಗಳಿರುವ ಸಸ್ಯ. ಮೂಲಿಕೆಗಳನ್ನು ಆಹಾರಕ್ಕೆ ಪರಿಮಳ ನೀಡಲು ಮತ್ತು ಅಲಂಕರಿಸಲು, ಔಷಧಿಯಲ್ಲಿ, ಅಥವಾ ಸುಗಂಧಗಳಾಗಿ ಬಳಸಲಾಗುತ್ತದೆ. ಅಡುಗೆ ಬಳಕೆಯು ಸಾಮಾನ್ಯವಾಗಿ ಮೂಲಿಕೆಗಳು ಮತ್ತು ಸಂಬಾರ ಪದಾರ್ಥಗಳ ನಡುವೆ ವ್ಯತ್ಯಾಸ ಮಾಡುತ್ತದೆ. ಮೂಲಿಕೆ ಪದವು ಒಂದು ಸಸ್ಯದ (ತಾಜಾ ಅಥವಾ ಒಣಗಿಸಿದ) ಎಲೆಯುಳ್ಳ ಹಸಿರು ಅಥವಾ ಹೂಬಿಡುವ ಭಾಗಗಳನ್ನು ಸೂಚಿಸುತ್ತದೆ. ಸಂಬಾರ ಪದಾರ್ಥಗಳನ್ನು ಸಾಮಾನ್ಯವಾಗಿ ಬೀಜಗಳು, ತೊಗಟೆ, ಬೇರುಗಳು ಮತ್ತು ಹಣ್ಣುಗಳು ಸೇರಿದಂತೆ ಸಸ್ಯದ ಇತರ ಭಾಗಗಳಿಂದ ಒಣಗಿಸಿ ಉತ್ಪತ್ತಿ ಮಾಡಲಾಗುತ್ತದೆ. ಔಷಧೀಯ ಅಥವಾ ಅಧ್ಯಾತ್ಮಿಕ ಬಳಕೆಯಲ್ಲಿ, ಸಸ್ಯದ ಯಾವುದೇ ಭಾಗಗಳನ್ನು "ಮೂಲಿಕೆಗಳು" ಎಂದು ಪರಿಗಣಿಸಬಹುದು. ಇದರಲ್ಲಿ ಎಲೆಗಳು, ಬೇರುಗಳು, ಹೂವುಗಳು, ಬೀಜಗಳು, ಬೇರು ತೊಗಟೆ, ಒಳತೊಗಟೆ (ಮತ್ತು ಒಳಂಬು), ರಾಳ ಮತ್ತು ಪೆರಿಕಾರ್ಪ್ ಸೇರಿವೆ.

ಬೇಸಿಲ್, ಅಡುಗೆಯಲ್ಲಿ ಬಳಸಲಾಗುವ ಒಂದು ಮೂಲಿಕೆ

ಅಡುಗೆ ಮೂಲಿಕೆಗಳನ್ನು ತರಕಾರಿಗಳಿಂದ ವ್ಯತ್ಯಾಸ ಮಾಡಲಾಗುತ್ತದೆ, ಹೇಗೆಂದರೆ ಸಂಬಾರ ಪದಾರ್ಥಗಳಂತೆ ಅವನ್ನು ಸಣ್ಣ ಪ್ರಮಾಣಗಳಲ್ಲಿ ಬಳಸಲಾಗುತ್ತದೆ ಮತ್ತು ಅವು ಆಹಾರಕ್ಕೆ ಸಾರದ ಬದಲಾಗಿ ಪರಿಮಳವನ್ನು ಒದಗಿಸುತ್ತವೆ. ಮೂಲಿಕೆಗಳು ಟೈಮ್ ಅಥವಾ ಲ್ಯಾವೆಂಡರ್‌ನಂತಹ ಬಹುವಾರ್ಷಿಕ ಸಸ್ಯಗಳಾಗಿರಬಹುದು, ಅಜಮೋದದಂತಹ ದ್ವೈವಾರ್ಷಿಕ ಸಸ್ಯಗಳಾಗಿರಬಹುದು, ಅಥವಾ ಬೇಸಿಲ್‍ನಂತಹ ವಾರ್ಷಿಕ ಸಸ್ಯಗಳಾಗಿರಬಹುದು. ಬಹುವಾರ್ಷಿಕ ಸಸ್ಯಗಳು ರೋಸ್‍ಮರಿಯಂತಹ ಪೊದರುಗಳಾಗಿರಬಹುದು ಅಥವಾ ಮರಗಳಾಗಿರಬಹುದು. ಕೆಲವು ಸಸ್ಯಗಳನ್ನು ಮೂಲಿಕೆಗಳು ಮತ್ತು ಸಂಬಾರ ಪದಾರ್ಥಗಳು ಎರಡೂ ಆಗಿ ಬಳಸಲಾಗುತ್ತದೆ, ಉದಾಹರಣೆಗೆ ಸಬ್ಬಸಿಗೆ ಸೊಪ್ಪು ಹಾಗೂ ಸಬ್ಬಸಿಗೆ ಬೀಜ ಅಥವಾ ಕೊತ್ತಂಬರಿ ಎಲೆಗಳು ಹಾಗೂ ಬೀಜಗಳು. ಜೊತೆಗೆ, ಮಿಂಟ್ ಕುಟುಂಬದಲ್ಲಿ ಇರುವಂಥ ಕೆಲವು ಮೂಲಿಕೆಗಳನ್ನು ಅಡುಗೆ ಮತ್ತು ಔಷಧೀಯ ಉದ್ದೇಶಗಳಾಗಿ ಬಳಸಲಾಗುತ್ತದೆ.

ಕೆಲವು ಸಸ್ಯಗಳು ದೇಹದ ಮೇಲೆ ಪರಿಣಾಮಗಳನ್ನು ಹೊಂದಿರುವ ಫ಼ೈಟೊಕೆಮಿಕಲ್‍ಗಳನ್ನು ಹೊಂದಿರುತ್ತವೆ. ಅಡುಗೆ ಪದಾರ್ಥಗಳನ್ನು ಉದಾಹರಿಸುವ ಸಣ್ಣ ಪ್ರಮಾಣಗಳಲ್ಲಿ ಸೇವಿಸಿದಾಗ ಸ್ವಲ್ಪ ಪರಿಣಾಮಗಳಿರಬಹುದು, ಮತ್ತು ಹೆಚ್ಚು ಪ್ರಮಾಣಗಳಲ್ಲಿ ಸೇವಿಸಿದಾಗ ಕೆಲವು ಮೂಲಿಕೆಗಳು ವಿಷಕಾರಿಯಾಗಿರಬಹುದು. ಉದಾಹರಣೆಗೆ, ಕೆಲವು ಪ್ರಕಾರಗಳ ಮೂಲಿಕೆ ಸಾರಗಳು, ಉದಾ. ಹೈಪರಿಕಮ್ ಪರ್ಫ಼ೋರೇಟಮ್‍ನ ಸಾರವನ್ನು ಖಿನ್ನತೆ ಮತ್ತು ಒತ್ತಡವನ್ನು ನಿವಾರಿಸಲು ವೈದ್ಯಕೀಯ ಉದ್ದೇಶಗಳಿಗಾಗಿ ಬಳಸಬಹುದು. ಆದರೆ, ಈ ಮೂಲಿಕೆಗಳ ದೊಡ್ಡ ಪ್ರಮಾಣಗಳು ಅತಿವಿಷವನ್ನು ಉಂಟುಮಾಡಬಹುದು ಮತ್ತು ಇದರಲ್ಲಿ ತೊಡಕುಗಳು ಸೇರಿವೆ, ಮತ್ತು ಕೆಲವು ಗಂಭೀರ ಸ್ವರೂಪದ್ದಾಗಿರಬಹುದು, ಮತ್ತು ಹಾಗಾಗಿ ಇವನ್ನು ಎಚ್ಚರಿಕೆಯಿಂದ ಬಳಸಬೇಕು. ಕೆಲವು ಔಷಧಿಗಳ ಜೊತೆಗೆ ತೆಗೆದುಕೊಂಡಾಗ ಕೂಡ ತೊಡಕುಗಳು ಏಳಬಹುದು.

"https://kn.wikipedia.org/w/index.php?title=ಮೂಲಿಕೆ&oldid=865674" ಇಂದ ಪಡೆಯಲ್ಪಟ್ಟಿದೆ
  NODES
Done 1