ಲಗಾಮು ಕುದುರೆ ಉಪಕರಣದ ವಸ್ತುವಾಗಿದೆ. ಇದನ್ನು ಸವಾರಿಗಾಗಿ ಬಳಸಲಾದ ಕುದುರೆ ಅಥವಾ ಇತರ ಪ್ರಾಣಿಗೆ ದಿಕ್ಕು ತೋರಿಸಲು ಬಳಸಲಾಗುತ್ತದೆ. ಇವು ಚಕ್ಕಡ, ನೈಲಾನ್, ಲೋಹ, ಅಥವಾ ಇತರ ವಸ್ತುಗಳಿಂದ ತಯಾರಿಸಿರಬಹುದಾದ ಉದ್ದನೆಯ ಪಟ್ಟಿಗಳಾಗಿರುತ್ತವೆ. ಇದು ಕಚ್ಚುಕಂಬಿ ಅಥವಾ ಮೂಗುಪಟ್ಟಿಯ ಮೂಲಕ ಮೊಗರಂಬಕ್ಕೆ ಜೋಡಣೆಗೊಂಡಿರುತ್ತದೆ.

ಪ್ರಾಣಿಯ ವೇಗವನ್ನು ತಗ್ಗಿಸಲು ಮತ್ತು ಅವುಗಳಿಗೆ ದಾರಿ ತೋರಿಸಲು ಲಗಾಮುಗಳನ್ನು ಬಳಸಲಾಗುತ್ತದೆ

ಲಗಾಮುಗಳನ್ನು ಸೂಕ್ಷ್ಮ ಆದೇಶಗಳು ಅಥವಾ ಸಂಕೇತಗಳನ್ನು ನೀಡಲು ಬಳಸಲಾಗುತ್ತದೆ. ಇವನ್ನು ಲಗಾಮು ಸಹಾಯಗಳು ಎಂದೂ ಕರೆಯಲಾಗುತ್ತದೆ. ವಿವಿಧ ಆದೇಶಗಳು ತಿರುಗುವಂತೆ, ವೇಗವನ್ನು ಕಡಿಮೆ ಮಾಡುವಂತೆ, ನಿಲುಗಡೆಯ ವಿನಂತಿಯನ್ನು ಸೂಚಿಸಬಹುದು. ಲಗಾಮು ಸಹಾಯಗಳನ್ನು ಕಾಲು ಸಹಾಯಗಳು, ದೇಹದ ತೂಕದ ಸ್ಥಳಾಂತರ ಮತ್ತು ಕೆಲವೊಮ್ಮೆ ಧ್ವನಿ ಆದೇಶಗಳ ಜೊತೆಗೆ ಬಳಸಲಾಗುತ್ತದೆ.

ಬಾಹ್ಯ ಸಂಪರ್ಕಗಳು

ಬದಲಾಯಿಸಿ
"https://kn.wikipedia.org/w/index.php?title=ಲಗಾಮು&oldid=1234362" ಇಂದ ಪಡೆಯಲ್ಪಟ್ಟಿದೆ
  NODES
languages 1