ಸುಳಿ ಎಂದರೆ ಎದುರಾಳಿ/ವಿರೋಧಿ ಪ್ರವಾಹಗಳ ಸೇರಿಕೆಯಿಂದ ಉತ್ಪತ್ತಿಯಾದ ವೇಗವಾಗಿ ಸುತ್ತುತ್ತಿರುವ ನೀರಿನ ಸಮೂಹ. ಬಹುಪಾಲು ಸುಳಿಗಳು ಬಹಳ ಪ್ರಬಲವಾಗಿರುವುದಿಲ್ಲ ಮತ್ತು ಸ್ನಾನದ ತೊಟ್ಟಿ ಅಥವಾ ಬಚ್ಚಲು ಗುಂಡಿಯು ಬರಿದಾಗುತ್ತಿರುವಾಗ ಬಹಳ ಚಿಕ್ಕ ಸುಳಿಗಳನ್ನು ಸುಲಭವಾಗಿ ನೋಡಬಹುದು. ಸಮುದ್ರಗಳು ಅಥವಾ ಸಾಗರಗಳಲ್ಲಿನ ಹೆಚ್ಚು ಪ್ರಬಲವಾದ ಸುಳಿಗಳನ್ನು ಮಹಾಜಲಾವರ್ತಗಳು ಎಂದು ಕರೆಯಬಹುದು. ಕೆಳಹರಿವು ಹೊಂದಿರುವ ಯಾವುದೇ ಸುಳಿಯನ್ನು ಸೂಚಿಸಲು ಗರ್ತ ಸರಿಯಾದ ಪದವಾಗಿದೆ.

ವಿಶ್ವದ ಮೂರನೇ ಅತಿ ದೊಡ್ಡ ಸುಳಿ ಸ್ಕಾಟ್ಲಂಡ್‍ನಲ್ಲಿದೆ

ಮಹಾಸಾಗರಗಳಲ್ಲಿ, ಕಿರಿದಾದ ಜಲಸಂಧಿಗಳಲ್ಲಿ, ವೇಗವಾಗಿ ಹರಿಯುವ ನೀರಿರುವಲ್ಲಿ, ಸುಳಿಗಳು ಸಾಮಾನ್ಯವಾಗಿ ಉಬ್ಬರವಿಳಿತಗಳಿಂದ ಉಂಟಾಗಿರುತ್ತವೆ; ದೊಡ್ಡ ಹಡಗುಗಳು ಅಂತಹ ಮಹಾಜಲಾವರ್ತದಲ್ಲಿ ಒಳ ಎಳೆದುಕೊಳ್ಳಲ್ಪಟ್ಟ ಕೆಲವು ಕಥೆಗಳೂ ಇವೆ, ಆದಾಗ್ಯೂ ಹೆಚ್ಚು ಚಿಕ್ಕ ನೌಕೆಗಳು ಅಪಾಯದಲ್ಲಿರುತ್ತವೆ.[][] ಹೆಚ್ಚು ಚಿಕ್ಕ ಸುಳಿಗಳು ಅನೇಕ ಜಲಪಾತಗಳ ಬುಡದಲ್ಲಿಯೂ ಕಾಣಿಸಿಕೊಳ್ಳುತ್ತವೆ ಮತ್ತು ಸುಳಿಗಳನ್ನು ಒಡ್ಡುಗಳು ಹಾಗೂ ಅಣೆಕಟ್ಟುಗಳಂತಹ ಮಾನವನಿರ್ಮಿತ ರಚನೆಗಳಿಂದಲೂ ನದಿಯ ಕೆಳದಿಕ್ಕಿನಲ್ಲಿ ನೋಡಬಹುದು. ನಯಾಗರ ಜಲಪಾತದಂತಹ ಪ್ರಬಲ ಜಲಪಾತಗಳ ವಿಷಯದಲ್ಲಿ, ಈ ಸುಳಿಗಳು ಸಾಕಷ್ಟು ಪ್ರಬಲವಾಗಿರಬಲ್ಲವು.

ಸಾಲ್ಟ್‌ಸ್ಟ್ರೋಮನ್‍ನ ಮಹಾಜಲಾವರ್ತ ಭೂಮಿಯ ಅತ್ಯಂತ ಪ್ರಬಲ ಮಹಾಜಲಾವರ್ತವಾಗಿದೆ, ಮತ್ತು ಆರ್ಕ್ಟಿಕ್ ವೃತ್ತದ ಹತ್ತಿರ ನಾರ್ವೆಯ ಬೋಡ ನಗರದ ಆಗ್ನೇಯಕ್ಕೆ ಸ್ಥಿತವಾಗಿದೆ. ಅದರ ಅತ್ಯಂತ ಕಿರಿದಾದ ಕಡೆ ಜಲಸಂಧಿಯು ೧೫೦ ಮೀಟರ್ ಅಗಲವಿದೆ ಮತ್ತು ಜಲಮಾರ್ಗದ ಮೂಲಕ ನೀರು ದಿನಕ್ಕೆ ನಾಲ್ಕು ಬಾರಿ ಕೆಳಹೋಗುತ್ತದೆ. ಈ ಘಟನೆಯ ಅವಧಿಯಲ್ಲಿ ಕಿರಿದಾದ ಜಲಸಂಧಿಯಲ್ಲಿ ೪೦೦ ಮಿಲಿಯ ಘನ ಮೀಟರ್‌ನಷ್ಟು ನೀರು ಸಾಗುತ್ತದೆ ಎಂದು ಅಂದಾಜಿಸಲಾಗಿದೆ. ನೀರು ಕೆನೆ ಬಣ್ಣದ್ದಾಗಿದೆ ಮತ್ತು ಪೂರ್ಣ ಉಬ್ಬರದ ವೇಳೆಯಲ್ಲಿ ಅತ್ಯಂತ ಪ್ರಕ್ಷುಬ್ಧವಾಗಿರುತ್ತದೆ. ಇದನ್ನು ಸಾವಿರಾರು ಪ್ರವಾಸಿಗರು ವೀಕ್ಷಿಸುತ್ತಾರೆ. ಇದು ಗಂಟೆಗೆ ೪೦ ಕಿಲೋಮೀಟರ್ ವೇಗ ಮುಟ್ಟುತ್ತದೆ, ಮತ್ತು ಸರಾಸರಿ ವೇಗ ಗಂಟೆಗೆ ಸುಮಾರು ೧೩ ಕಿಲೋಮೀಟರ್ ಆಗಿದೆ. ಈ ಜಲಸಂಧಿಯಲ್ಲಿ ನೌಕಾಯಾನ ಅಪಾಯಕಾರಿಯಾಗಿರುವುದರಿಂದ, ಇದರ ಮೂಲಕ ಸಾಗಲು ದೊಡ್ಡ ಹಡಗುಗಳಿಗೆ ಒಂದು ಚಿಕ್ಕ ಸಮಯಾವಧಿ ಮಾತ್ರ ಲಭ್ಯವಿರುತ್ತದೆ. ಇದರ ಪ್ರಭಾವಶಾಲಿ ಶಕ್ತಿಯು ಇದೇ ಸ್ಥಳದಲ್ಲಿ ಅಮಾವಾಸ್ಯೆ ಮತ್ತು ಹುಣ್ಣಿಮೆಯ ಅವಧಿಯಲ್ಲಿ ಸಂಭವಿಸುವ ವಿಶ್ವದ ಅತ್ಯಂತ ಪ್ರಬಲ ಉಬ್ಬರವಿಳಿತದಿಂದ ಉಂಟಾಗಿದೆ.

ಉಲ್ಲೇಖಗಳು

ಬದಲಾಯಿಸಿ
  1. Cussler, Clive; Kemprecos, Paul (7 June 2012). Polar Shift: NUMA Files #6. Penguin Books Limited. p. 94. ISBN 978-1-4059-0959-4.
  2. 10 Magnificent Maelstroms Archived 2011-11-06 ವೇಬ್ಯಾಕ್ ಮೆಷಿನ್ ನಲ್ಲಿ.. WebEcoist. Retrieved 26 October 2011.


"https://kn.wikipedia.org/w/index.php?title=ಸುಳಿ&oldid=1052114" ಇಂದ ಪಡೆಯಲ್ಪಟ್ಟಿದೆ
  NODES
languages 1
os 2
web 1