ಹಾರವು (ಮಾಲೆ) ಹೂವುಗಳು, ಎಲೆಗಳು, ಅಥವಾ ಇತರ ವಸ್ತುವಿನ ಅಲಂಕಾರಿಕ ದಂಡೆ. ಹಾರಗಳನ್ನು ತಲೆಯ ಮೇಲೆ ಅಥವಾ ಕತ್ತಿನ ಸುತ್ತ ಧರಿಸಬಹುದು, ಒಂದು ಜೀವವಿಲ್ಲದ ವಸ್ತುವಿನ ಮೇಲೆ ತೂಗುಹಾಕಬಹುದು, ಅಥವಾ ಸಾಂಸ್ಕೃತಿಕ ಅಥವಾ ಧಾರ್ಮಿಕ ಮಹತ್ವದ ಸ್ಥಳದಲ್ಲಿ ಇರಿಸಬಹುದು.

ಹಾರಗಳು

ಭಾರತದಲ್ಲಿ, ಹೂವಿನ ಹಾರಗಳು ಪ್ರತಿ ಹಬ್ಬದಲ್ಲೂ ಪ್ರಮುಖ ಮತ್ತು ಸಾಂಪ್ರದಾಯಿಕ ಪಾತ್ರವನ್ನು ಹೊಂದಿರುತ್ತವೆ. ಹಿಂದೂ ದೇವತೆಗಳನ್ನು ವಿಭಿನ್ನ ಸುಗಂಧಯುಕ್ತ ಹೂವುಗಳು (ಹಲವುವೇಳೆ ಮಲ್ಲಿಗೆ) ಮತ್ತು ಎಲೆಗಳಿಂದ ತಯಾರಿಸಿದ ಹಾರಗಳಿಂದ ಅಲಂಕರಿಸಲಾಗುತ್ತದೆ.[] ದೇವತೆಗಳನ್ನು ಪೂಜಿಸಲು ಸುಗಂಧಯುಕ್ತ ಹಾಗೂ ಸುಗಂಧರಹಿತ ಎರಡೂ ರೀತಿಯ ಹೂವುಗಳನ್ನು ಮತ್ತು ಧಾರ್ಮಿಕ ಮಹತ್ವದ ಎಲೆಗಳನ್ನು ಹಾರಗಳನ್ನು ತಯಾರಿಸಲು ಬಳಸಲಾಗುತ್ತದೆ. ಕೆಲವು ಹೂವುಗಳೆಂದರೆ: ಮಲ್ಲಿಗೆ, ಸಂಪಿಗೆ, ಕಮಲ, ನೈದಿಲೆ, ಅಶೋಕ ಹೂಗಳು, ಗಣಗಲೆ ಹೂ, ಸೇವಂತಿಗೆ, ಗುಲಾಬಿ, ದಾಸವಾಳ, ನಂದಿಬಟ್ಟಲು, ಮನೊರಂಜಿನಿ ಇತ್ಯಾದಿ.

ಉಲ್ಲೇಖಗಳು

ಬದಲಾಯಿಸಿ
  1. Singh Randhawa, Gurcharan (1986). Floriculture in India. Allied Publishers. p. 606. ISBN 8170230578.
"https://kn.wikipedia.org/w/index.php?title=ಹಾರ&oldid=1235693" ಇಂದ ಪಡೆಯಲ್ಪಟ್ಟಿದೆ
  NODES