ಹೋಟೆಲ್
ಹೋಟೆಲ್ ಅಲ್ಪ ಅವಧಿಗೆ ಸಂದಾಯಿತ ವಸತಿಯನ್ನು ಒದಗಿಸುವ ಒಂದು ನೆಲೆ. ಹಿಂದೆ ಒದಗಿಸಲಾಗುತ್ತಿದ್ದ ಒಂದು ಹಾಸಿಗೆ, ಒಂದು ಬೀರು, ಒಂದು ಸಣ್ಣ ಮೇಜು ಮತ್ತು ಒಂದು ವಾಶ್ ಬೇಸಿನ್ ಇರುವ ಕೇವಲ ಒಂದು ಕೋಣೆಯನ್ನು ಒಳಗೊಂಡ ಮೂಲ ವಸತಿ ಸೌಕರ್ಯದ ವ್ಯವಸ್ಥೆಯನ್ನು ಸ್ನಾನಗೃಹಗಳು ಮತ್ತು ಹವಾನಿಯಂತ್ರಣ ಅಥವಾ ವಾಯುಗುಣ ನಿಯಂತ್ರಣವನ್ನು ಒಳಗೊಂಡ ಆಧುನಿಕ ಸೌಲಭ್ಯಗಳಿರುವ ಕೋಣೆಗಳಿಂದ ಬದಲಿಸಲಾಗಿದೆ. ದೂರವಾಣಿ, ಅಲಾರಂ ಗಡಿಯಾರ, ಟೀವಿ, ತಿಜೋರಿ, ಲಘು ಆಹಾರ ಮತ್ತು ಪಾನೀಯಗಳಿರುವ ಮಿನಿ-ಬಾರ್, ಮತ್ತು ಚಹಾ ಹಾಗು ಕಾಫ಼ಿ ತಯಾರಿಸಲು ಇರುವ ಸೌಲಭ್ಯಗಳು ಹೋಟೆಲ್ ಕೋಣೆಗಳಲ್ಲಿ ಕಾಣುವ ಹೆಚ್ಚುವರಿ ಸಾಮಾನ್ಯ ವಸ್ತುಗಳಾಗಿವೆ.ಈಗಿನ ಕಾಲದ ಗಣನೀಯ ಹೋಟೆಲ್‍ಗಳಲ್ಲಿ ಈಜು ಕೊಳಗಳನ್ನು ಸಹ ಕಾಣಬಹುದು.ಅದಲ್ಲದೆ ಈ ನಡುವೆ ಅಧಿಕೃತ ಸಭೆಗಳನ್ನು ಹೋಟೆಲ್‍ಗಳಲ್ಲಿಯೇ ನಡೆಸುತ್ತಾರೆ. [೧] [೨]
ಉಲ್ಲೇಖಗಳು
ಬದಲಾಯಿಸಿ- ↑ http://www.hospitalitynet.org/news/4017990.html ,The history of hotels ,hospitalitynet.org
- ↑ http://www.buildinghistory.org/buildings/inns.shtml,Researching the history of pubs, inns and hotels, buildinghistory.org
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |